ಹಜ್ 2021: ಎಲ್ಲಾ ಅರ್ಜಿಗಳನ್ನು ರದ್ದುಗೊಳಿಸಿದ ಭಾರತ ಹಜ್ ಸಮಿತಿ

ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಭಾರತದ ಹಜ್ ಸಮಿತಿ ಮಂಗಳವಾರ ಹಜ್ 2021ಕ್ಕೆ ನಿಗದಿಪಡಿಸಿದ್ದ ಎಲ್ಲಾ ಅರ್ಜಿಗಳನ್ನು ರದ್ದುಗೊಳಿಸಿದೆ. 
ಮುಸ್ಲಿಂರ ಪವಿತ್ರ ಸ್ಥಳ ಮೆಕ್ಕಾ
ಮುಸ್ಲಿಂರ ಪವಿತ್ರ ಸ್ಥಳ ಮೆಕ್ಕಾ

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಹಿನ್ನಲೆಯಲ್ಲಿ ಭಾರತದ ಹಜ್ ಸಮಿತಿ ಮಂಗಳವಾರ ಹಜ್ 2021ಕ್ಕೆ ನಿಗದಿಪಡಿಸಿದ್ದ ಎಲ್ಲಾ ಅರ್ಜಿಗಳನ್ನು ರದ್ದುಗೊಳಿಸಿದೆ. 

ಈ ಕುರಿತಂತೆ ಸ್ಪಷ್ಟನೆ ನೀಡಿರುವ ಹಜ್ ಸಮಿತಿ, ಸೌದಿ ಸರ್ಕಾರ ಕೊರೋನಾ ಸಾಂಕ್ರಾಮಿಕದಿಂದಾಗಿ ವಿದೇಶಿಗರಿಗೆ ಹಜ್ ಯಾತ್ರೆಗೆ ಅವಕಾಶ ನೀಡಿಲ್ಲ. ಸ್ಥಳೀಯರು, ತನ್ನ ದೇಶದ ಹಿರಿಯ ನಾಗರಿಕರಿಗೆ ಸೀಮಿತ ಸಂಖ್ಯೆಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಮಾತ್ರ ಅವಕಾಶ ನೀಡಿದೆ.  ಹೀಗಾಗಿ ಹಾಲಿ ವರ್ಷದ ಹಜ್ ಅರ್ಜಿಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದೆ.

ಹಜ್‌ ಯಾತ್ರೆ 60 ಸಾವಿರ ಯಾತ್ರಿಕರಿಗೆ ಸೀಮಿತ ಎಂದಿದ್ದ ಸೌದಿ ಸರ್ಕಾರ
ಈ ಹಿಂದೆ ಕೊರೊನಾ ವೈರಸ್‌ ಸಾಂಕ್ರಾಮಿಕದ ಕಾರಣಕ್ಕೆ ಈ ವರ್ಷದ ಹಜ್ ಯಾತ್ರೆಯನ್ನು ತನ್ನ ದೇಶದ 60 ಸಾವಿರ ಯಾತ್ರಿಕರಿಗೆ ಮಾತ್ರ ಸೀಮಿತಗೊಳಿಸಿರುವುದಾಗಿ ಸೌದಿ ಅರೇಬಿಯಾ ಸರ್ಕಾರ ಶನಿವಾರ ಪ್ರಕಟಿಸಿತ್ತು. ಅಂತೆಯೇ ವಿದೇಶದವರಿಗೆ ಹಜ್‌ ಯಾತ್ರೆಯನ್ನು ನಿಷೇಧಿಸಿದೆ. 

ಕಳೆದ ವರ್ಷ ಕೋವಿಡ್‌ನಿಂದಾಗಿ ಹಜ್‌ ಯಾತ್ರೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಯಾತ್ರಿಕರು ಪಾಲ್ಗೊಂಡಿದ್ದರು. ಈ ವರ್ಷವೂ ಯಾತ್ರಿಕರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾ ಘೋಷಿಸಿದೆ.

ಸೌದಿ ಸರ್ಕಾರದ ಹಜ್ ಮತ್ತು ಉಮ್ರಾ ಸಚಿವಾಲಯದ ಹೇಳಿಕೆಯನ್ನು ಸೌದಿ ಸರ್ಕಾರದ ಪ್ರೆಸ್ ಏಜೆನ್ಸಿ ಪ್ರಕಟಿಸಿದ್ದು, ಜುಲೈ ಮಧ್ಯದಲ್ಲಿ ಪ್ರಾರಂಭವಾಗಲಿರುವ ಈ ವರ್ಷದ ಹಜ್ 18ರಿಂದ 65 ವಯಸ್ಸಿನ ಯಾತ್ರಿಕರಿಗೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೆ, ಯಾತ್ರೆಯಲ್ಲಿ  ಭಾಗವಹಿಸುವವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com