ಭಾರತದಲ್ಲಿ ಕೊರೋನಾ ಲಸಿಕೆಗೆ ಮೊದಲ ಸಾವು: ಖಚಿತ ಪಡಿಸಿದ ರಾಷ್ಟ್ರೀಯ ಸರ್ಕಾರಿ ಸಮಿತಿ

ದೇಶದಲ್ಲಿ ಕೊರೋನಾ ಲಸಿಕೆಯ ಅಡ್ಡಪರಿಣಾಮದಿಂದ 68 ವರ್ಷದ ವ್ಯಕ್ತಿಯೊಬ್ಬರು ಅನಾಫಿಲ್ಯಾಕ್ಸಿಸ್ ನಿಂದ ಮೃತಪಟ್ಟಿದ್ದಾನೆ ಎಂದು ಸರ್ಕಾರಿ ಸಮಿತಿ ದೃಢಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆಯ ಅಡ್ಡಪರಿಣಾಮದಿಂದ 68 ವರ್ಷದ ವ್ಯಕ್ತಿಯೊಬ್ಬರು ಅನಾಫಿಲ್ಯಾಕ್ಸಿಸ್ ನಿಂದ ಮೃತಪಟ್ಟಿದ್ದಾನೆ ಎಂದು ಸರ್ಕಾರಿ ಸಮಿತಿ ದೃಢಪಡಿಸಿದೆ.

ಲಸಿಕೆ ಪಡೆದ ನಂತರ ವ್ಯಕ್ತಿಯಲ್ಲಿ ಅಡ್ಡಪರಿಣಾಮವಾಗಿ ಅನಾಫಿಲ್ಯಾಕ್ಸಿಸ್(ತೀವ್ರ ಅಲರ್ಜಿ ಪರಿಣಾಮ) ಗೆ ಗುರಿಯಾಗಿದ್ದು ಇದರಿಂದಲೇ 2021ರ ಮಾರ್ಚ್ 8ರಂದು ಮೃತಪಟ್ಟಿರುವುದಾಗಿ ರಾಷ್ಟ್ರೀಯ ಎಇಎಫ್‌ಐ ಸಮಿತಿಯ ವರದಿಯಲ್ಲಿ ತಿಳಿಸಿದೆ.

ಇನ್ನು ಜನವರಿ 16 ಮತ್ತು 19ರಂದು ಲಸಿಕೆ ಪಡೆದಿದ್ದ ಇಬ್ಬರಿಗೂ ತೀವ್ರ ಅಲರ್ಜಿಯಾಗಿದ್ದು ಕೂಡಲೇ ಅವರು ಆಸ್ಪತ್ರೆಗೆ ದಾಖಲಾದ ನಂತರ ಚೇತರಿಸಿಕೊಂಡಿದ್ದಾರೆ ಎಂದು ಸಮಿತಿ ತಿಳಿಸಿದೆ.

31 ಪ್ರಕರಣಗಳ ಸಾಂದರ್ಭಿಕ ಮೌಲ್ಯಮಾಪನದ ಫಲಿತಾಂಶಗಳನ್ನು ಸಮಗ್ರ ಪರಿಶೀಲನೆ ಮತ್ತು ಚರ್ಚೆಗಳ ನಂತರ ಫೆಬ್ರವರಿ 5ರಂದು(ಐದು ಪ್ರಕರಣಗಳು), ಮಾರ್ಚ್ 9(ಎಂಟು ಪ್ರಕರಣಗಳು) ಮತ್ತು ಮಾರ್ಚ್ 31ರಂದು(18 ಪ್ರಕರಣಗಳು) ವರದಿಯಾಗಿತ್ತು ಎಂದು  ರಾಷ್ಟ್ರೀಯ ಎಇಎಫ್‌ಐ ಸಮಿತಿ ತಿಳಿಸಿದೆ.

ವರದಿಯ ಪ್ರಕಾರ, "ಸಾಂದರ್ಭಿಕವಾಗಿ ಮೌಲ್ಯಮಾಪನ ಮಾಡಲಾದ 31 ಪ್ರಕರಣಗಳಲ್ಲಿ 18 ಸಾವುಗಳು ಲಸಿಕೆ ಪಡೆದ ನಂತರ ಸಾಂದರ್ಭಿಕವಾಗಿ, ಅಂದರೆ ಕಾಕತಾಳೀಯವಾಗಿ ಸಂಭವಿಸಿದೆ. ಇದಕ್ಕೂ ಲಸಿಕೆಗೂ ಸಂಬಂಧವಿಲ್ಲ. ಇನ್ನು ಏಳು ಸಾವುಗಳು ಎರಡೂ ಕಾರಣಗಳಿಗೆ ಸಂಭವಿಸಿದೆ. ಇನ್ನು ಮೂರು ಸಾವುಗಳು ಲಸಿಕೆಯಿಂದಾಗಿದೆ ಎಂದು ತಿಳಿದುಬಂದಿದ್ದು ಒಂದು ಸಾವು ಉದ್ವೇಗದಿಂದಾಗಿದ್ದರೆ ಮತ್ತೇರಡು ಪ್ರಕರಣಗಳನ್ನು ವರ್ಗಿಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಮಿತಿ ತಿಳಿಸಿದೆ. 

ಲಸಿಕೆ ಉತ್ಪನ್ನ-ಸಂಬಂಧಿತ ಪ್ರತಿಕ್ರಿಯೆಗಳು ನಿರೀಕ್ಷಿತ ಪ್ರತಿಕ್ರಿಯೆಗಳಾಗಿದ್ದು, ಪ್ರಸ್ತುತ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಲಸಿಕೆ ಕಾರಣವೆಂದು ಎಇಎಫ್ಐ ವರದಿ ಹೇಳಿದೆ. ಅಂತಹ ಪ್ರತಿಕ್ರಿಯೆಗಳ ಉದಾಹರಣೆಗಳೆಂದರೆ ಅಲರ್ಜಿ ಮತ್ತು ಅನಾಫಿಲ್ಯಾಕ್ಸಿಸ್ ಇತ್ಯಾದಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com