ರೈಲು ಪ್ರಯಾಣಿಕರಿಗೆ ಶುಭ ಸುದ್ದಿ… ಟ್ರೈನ್‌ ಹತ್ತಲು ಪ್ಲಾಟ್‌ ಫಾಮ್‌ ಟಿಕೆಟ್‌ ಮಾತ್ರ ಸಾಕು!

ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿ.. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದಿದ್ದರೂ, ಟಿಕೆಟ್‌ ಪಡೆದುಕೊಳ್ಳದಿದ್ದರೂ ಕೂಡಾ ನಿರ್ಭಯವಾಗಿ ರೈಲು ಹತ್ತಬಹುದು. 
ಭಾರತೀಯ ರೈಲ್ವೆ (ಸಂಗ್ರಹ ಚಿತ್ರ)
ಭಾರತೀಯ ರೈಲ್ವೆ (ಸಂಗ್ರಹ ಚಿತ್ರ)

ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿ.. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದಿದ್ದರೂ, ಟಿಕೆಟ್‌ ಪಡೆದುಕೊಳ್ಳದಿದ್ದರೂ ಕೂಡಾ ನಿರ್ಭಯವಾಗಿ ರೈಲು ಹತ್ತಬಹುದು. 

ಕೇವಲ ಪ್ಲಾಟ್‌ಫಾಮ್‌ ಟಿಕೆಟ್‌ ಇದ್ದರೆ ಸಾಕು. ರೈಲು ಹತ್ತಿದ ನಂತರ ಫ್ಲಾಟ್‌ಫಾಮ್‌ ಟಿಕೆಟ್‌ ಅನ್ನು ಟಿಟಿಇಗೆ ತೋರಿಸಿ, ಟಿಕೆಟ್‌ ಖರೀದಿಸಿದರೆ ಸಾಕು. ಕೊನೆಯ ನಿಮಿಷಗಳಲ್ಲಿ ಗಡಿ ಬಿಡಿಯಿಂದ ರೈಲ್ವೆ ನಿಲ್ದಾಣಗಳಿಗೆ ತಲುಪಿ ಹೈರಾಣವಾಗುವುದನ್ನು ತಪ್ಪಿಸಲು ಭಾರತೀಯ ರೈಲ್ವೆ ಈ ಸೌಲಭ್ಯವನ್ನು ಪ್ರಯಾಣಿಕರಿಗೆ ಕಲ್ಪಿಸಿದೆ. ಮುಂಗಡ ಟಿಕೆಟ್‌ ಕಾಯ್ದಿರಿಸದೆ ಸ್ಟೇಷನ್‌ ಗೆ ಬರುವ ಪ್ರಯಾಣಿಕರು ಅಲ್ಲಿನ ಟಿಕೆಟ್‌ ಕೌಂಟರ್‌ಗಳ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ

ಯುಟಿಸಿ ಆಪ್‌ ಮೂಲಕ ಇಲ್ಲವೇ ಸ್ಟೇಷನ್‌ ಗಳಲ್ಲಿರುವ ವೆಂಡಿಂಗ್‌ ಮೆಷಿನ್‌ ಗಳ ಮೂಲಕ ಪ್ಲಾಟ್‌ಫಾಮ್‌ ಟಿಕೆಟ್‌ ಪಡೆದುಕೊಂಡರೆ ಸಾಕು. ಅದರೊಂದಿಗೆ ರೈಲು ಹತ್ತಬಹುದು. ರೈಲು ಹತ್ತಿದ ನಂತರ ಅದನ್ನು ಟಿಟಿಇಗೆ ತೋರಿಸಿ ಟಿಕೆಟ್‌ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ ಸೀಟುಗಳು ಲಭ್ಯವಿದ್ದರೆ ರಿಜರ್ವೇಶನ್‌ ಮಾಡಿಸಿಕೊಂಡು ಬರ್ತ್‌ಕೂಡ ಹೊಂದಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com