ಕೋಮು ಸಂಘರ್ಷಕ್ಕೆ ಯತ್ನ: ಟ್ವೀಟರ್, ರಾಣಾ ಆಯೂಬ್ ಸೇರಿ 9 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ ಯುಪಿ ಪೊಲೀಸರು!

ಘಾಜಿಯಾಬಾದ್‌ನಲ್ಲಿ ಕೆಲ ಮಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದ ವೃದ್ಧ ಮುಸ್ಲಿಂ ವ್ಯಕ್ತಿ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ನ್ಯೂಸ್ ಪೋರ್ಟಲ್ ಮತ್ತು ಆರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Published: 16th June 2021 12:19 PM  |   Last Updated: 16th June 2021 12:59 PM   |  A+A-


Abdul Shamad

ಅಬ್ದುಲ್ ಸಮದ್

Posted By : Vishwanath S
Source : PTI

ಕಘಾಜಿಯಾಬಾದ್: ಘಾಜಿಯಾಬಾದ್‌ನಲ್ಲಿ ಕೆಲ ಮಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದ ವೃದ್ಧ ಮುಸ್ಲಿಂ ವ್ಯಕ್ತಿ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ಉತ್ತರ ಪ್ರದೇಶ ಪೊಲೀಸರು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ನ್ಯೂಸ್ ಪೋರ್ಟಲ್ ಮತ್ತು ಆರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಘಾಜಿಯಾಬಾದ್ ನ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಈ ವಿಡಿಯೋ ಮೂಲಕ ದೇಶದಲ್ಲಿ ಕೋಮು ಅಶಾಂತಿ ಸೃಷ್ಟಿಸುವ ಹುನ್ನಾರ ನಡೆದಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಮುಸ್ಲಿಂ ಯುವಕರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಲ್ಲೂ, ಅದಿಲ್, ಪೊಲ್ಲಿ, ಆರಿಫ್, ಮುಷಾಹಿದ್ ಮತ್ತು ಪರ್ವೇಶ್ ಗುರ್ಜಾರ್ ಎಂದು ತಿಳಿದುಬಂದಿದೆ. 

ಪೊಲೀಸರು ಟ್ವಿಟರ್ ಇಂಕ್, ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ, ನ್ಯೂಸ್ ವೆಬ್‌ಸೈಟ್ ದಿ ವೈರ್, ಪತ್ರಕರ್ತರಾದ ಮೊಹಮ್ಮದ್ ಜುಬೈರ್ ಮತ್ತು ರಾಣಾ ಅಯೂಬ್, ಕಾಂಗ್ರೆಸ್ ರಾಜಕಾರಣಿಗಳಾದ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ, ಡಾ.ಸಮಾ ಮೊಹಮ್ಮದ್ ಮತ್ತು ಬರಹಗಾರ ಸಬಾ ನಖ್ವಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇವರೆಲ್ಲಾ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಿಲ್ಲ. ಸಾರ್ವಜನಿಕ ಶಾಂತಿಗೆ ಭಂಗಗೊಳಿಸುವ, ಕೋಮು ಸಂಘರ್ಷ ಉಂಟುಮಾಡುವ ಉದ್ದೇಶದಿಂದ ಅದನ್ನು ಆನ್ ಲೈನ್ ಹಂಚಿಕೊಂಡಿದ್ದಾರೆ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ. 

'ಇದಲ್ಲದೆ, ಕೋಮು ಸಂಘರ್ಷಕ್ಕೆ ಕಾರಣವಾಗಬಲ್ಲ ಈ ವಿಡಿಯೋವನ್ನು ಟ್ವಿಟರ್ ಇಂಕ್ ಮತ್ತು ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ ತೆಗೆದುಹಾಕಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಎಫ್ಐಆರ್ ನಲ್ಲಿ ನಮೂದಿಸಲಾಗಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ನಿರ್ಜನ ಪ್ರದೇಶದ ಮನೆಯೊಂದಕ್ಕೆ ನನ್ನು ಆಟೋದಲ್ಲಿ ಅಪಹರಿಸಿದ ವ್ಯಕ್ತಿಗಳು ನನಗೆ ಥಳಿಸಿ, ಗಡ್ಡ ಬೋಳಿಸಿ, ಜೈ ಶ್ರೀರಾಮ್ ಎಂಬ ಘೋಷಣೆ ಕೂಗಲು ಒತ್ತಾಯಿಸಿದರು. ಪ್ರತಿ ಬಾರಿ ಥಳಿಸಿದಾಗ ನೋವಿನಿಂ ನಾನು ಅಲ್ಲಾ ಎಂದು ಚೀರುತ್ತಿದ್ದೆ. ಮತ್ತೆ ಮತ್ತೆ ಥಳಿಸಿ ಜೈ ಶ್ರೀರಾಮ್ ಘೋಷಣೆ ಕೂಗಲು ಒತ್ತಾಯಿಸುತ್ತಿದ್ದರು ಎಂದು ಅಬ್ದುಲ್ ಸಮದ್ ಎಂಬಾತ ಹೇಳಿರುವ  ವಿಡಿಯೋ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಘಾಜಿಯಾಬಾದ್ ಪೊಲೀಸರು ದಾಖಲಿಸಿರುವ ಎಫ್ಐಆರ್ ನಲ್ಲಿ ಜೂ.05ರಂದು ಈ ಘಟನೆ ನಡೆದಿದ್ದು ಜೂ.07ರಂದು ವರದಿಯಾಗಿರುವುದಾಗಿ ತಿಳಿದುಬಂದಿದೆ. 

ಬುಲಂದ್ ಶಹರ್ ನ ನಿವಾಸಿ ಅಬ್ದುಲ್ ಸಮದ್ ತಾವು ನೀಡಿದ್ದ ದೂರಿನಲ್ಲಿ ತಮ್ಮ ಮೇಲಿನ ಹಲ್ಲೆ ಕುರಿತಂತೆ ಮಾಹಿತಿ ನೀಡಿಲ್ಲ. ಆದರೆ ವಿಡಿಯೋದಲ್ಲಿ ಮಾತ್ರ ತಮ್ಮನ್ನು ಥಳಿಸಿ, ಜೈ ಶ್ರೀರಾಮ್ ಘೋಷಣೆ ಕೂಗುವುದಕ್ಕೆ ಒತ್ತಾಯಿಸಿದ್ದಾರೆಂದು ಎಂದು ಆರೋಪಿಸಿದ್ದಾರೆಂದು ಘಾಜಿಯಾಬಾದ್ ನ ಎಸ್ಎಸ್ ಪಿ ಅಮಿತ್ ಪಾಠಕ್ ಹೇಳಿದ್ದಾರೆ.

ಅಬ್ದುಲ್ ಅವರು ನೀಡಿರುವ ದೂರಿನ ಅನ್ವಯ ಈಗಾಗಲೇ ಪರ್ವೇಶ್ ಗುಜ್ಜಾರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಈತ ಇಂದ್ರಜಾಲ, ಯಕ್ಷಿಣಿ ವಿದ್ಯೆಯನ್ನು ಅಭ್ಯಾಸ ಮಾಡುತ್ತಿದ್ದ ಸಾಮದ್ ನಿಂದ ತಾಯಿತವೊಂದನ್ನು ತೆಗೆದುಕೊಂಡಿದ್ದಾಗಿ ತಿಳಿದುಬಂದಿದೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp