ಚೋಕ್ಸಿ ತ್ವರಿತಗತಿ ಗಡಿಪಾರಿಗೆ ಡೊಮಿನಿಕಾದೊಂದಿಗೆ ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ: ಎಂಇಎ

ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ತ್ವರಿತವಾಗಿ ಗಡಿಪಾರು ಮಾಡುವುದು ಹಾಗೂ ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಡೊಮಿನಿಕಾದೊಂದಿಗೆ ಭಾರತ ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. 
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

ನವದೆಹಲಿ: ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ತ್ವರಿತವಾಗಿ ಗಡಿಪಾರು ಮಾಡುವುದು ಹಾಗೂ ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಡೊಮಿನಿಕಾದೊಂದಿಗೆ ಭಾರತ ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. 

ಕೆರಿಬ್ಬಿಯನ್ ದ್ವೀಪ ರಾಷ್ಟ್ರಕ್ಕೆ ಚೋಕ್ಸಿಯ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಜೂ.25 ವರೆಗೂ ವಿಸ್ತರಿಸಿದೆ. 

ಆನ್ ಲೈನ್ ಮಾಧ್ಯಮಗೋಷ್ಠಿಯಲ್ಲಿ ಚೋಕ್ಸಿ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಚಿ ಚೋಕ್ಸಿ ಕಾಮನ್ ವೆಲ್ತ್ ಆಫ್ ಡೊಮಿನಿಕಾದ ಅಧಿಕಾರಿಗಳ ವಶದಲ್ಲಿಯೇ ಇದ್ದಾರೆ, ಗಡಿಪಾರಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಚಾಲ್ತಿಯಲ್ಲಿದೆ ಎಂದು ಹೇಳಿದ್ದಾರೆ. 

"ಮೆಹುಲ್ ಚೋಕ್ಸಿ ಅವರನ್ನು ತ್ವರಿತವಾಗಿ ಗಡಿಪಾರು ಮಾಡುವುದು ಹಾಗೂ ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಡೊಮಿನಿಕಾದೊಂದಿಗೆ ಭಾರತ ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ" ಎಂದು ಅರಿಂದಮ್ ಬಗಚಿ ಹೇಳಿದ್ದಾರೆ. 

ಮೆಹುಲ್ ಚೋಕ್ಸಿ ಭಾರತದಲ್ಲಿ ಎದುರಿಸುತ್ತಿರುವ ಆರೋಪಗಳು ಹಾಗೂ ಅವರ ಮುಂದುವರಿದ ಭಾರತೀಯ ಪೌರತ್ವಕ್ಕೆ ಸಂಬಂಧಿಸಿದ ಸಂಗತಿಗಳನ್ನು ಕಾಮನ್ ವೆಲ್ತ್ ಆಫ್ ಡೊಮಿನಿಕಾದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಎಂಇಎ ವಕ್ತಾರರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com