ಬಲವಂತದಿಂದ ಲಸಿಕೆ ಹಾಕುವುದರಿಂದ ಮೂಲಭೂತ ಹಕ್ಕುಗಳಿಗೆ ಚ್ಯುತಿ: ಮೇಘಾಲಯ ಹೈಕೋರ್ಟ್

ಬಲವಂತ ಅಥವಾ ದಬ್ಬಾಳಿಕೆಯ ವಿಧಾನಗಳ ಮೂಲಕ ಕೋವಿಡ್ ಲಸಿಕೆ ಹಾಕುವುದು ಅದರ ಮೂಲಭೂತ ಸದುದ್ದೇಶವನ್ನು ನಾಶಮಾಡುತ್ತದೆ ಎಂದು ಮೇಘಾಲಯ ಹೈಕೋರ್ಟ್ ಹೇಳಿದೆ.
ಗುವಾಹಟಿಯಲ್ಲಿ ಮಹಿಳೆಯೊಬ್ಬರಿಗೆ ಲಸಿಕೆ ನೀಡುತ್ತಿರುವುದು
ಗುವಾಹಟಿಯಲ್ಲಿ ಮಹಿಳೆಯೊಬ್ಬರಿಗೆ ಲಸಿಕೆ ನೀಡುತ್ತಿರುವುದು

ಗುವಾಹಟಿ: ಬಲವಂತ ಅಥವಾ ದಬ್ಬಾಳಿಕೆಯ ವಿಧಾನಗಳ ಮೂಲಕ ಕೋವಿಡ್ ಲಸಿಕೆ ಹಾಕುವುದು ಅದರ ಮೂಲಭೂತ ಸದುದ್ದೇಶವನ್ನು ನಾಶಮಾಡುತ್ತದೆ ಎಂದು ಮೇಘಾಲಯ ಹೈಕೋರ್ಟ್ ಹೇಳಿದೆ.

ಮೇಘಾಲಯದ ಜಿಲ್ಲಾಧಿಕಾರಿಗಳು ಪ್ರತ್ಯೇಕ ಆದೇಶ ಹೊರಡಿಸಿ ಅಂಗಡಿ ಮಾಲೀಕರು, ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ವ್ಯಾಪಾರಿಗಳು, ಟ್ಯಾಕ್ಸಿಕ್ಯಾಬ್ ಡ್ರೈವರ್ ಗಳು ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಮಾತ್ರ ತಮ್ಮ ವ್ಯಾಪಾರ-ವಹಿವಾಟು ಕೆಲಸಗಳನ್ನು ಆರಂಭಿಸಬಹುದು ಎಂದು ಹೊರಡಿಸಿದ್ದ ಆದೇಶದ ವಿರುದ್ಧ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನ್ಯಾಯಾಲಯ ವಿಚಾರಣೆ ವೇಳೆ ನಿನ್ನೆ ಹೀಗೆ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಬಿಸ್ವನಾಥ್ ಸೊಮಡ್ಡರ್ ಮತ್ತು ನ್ಯಾಯಮೂರ್ತಿ ನ್ಯಾಯಮೂರ್ತಿ ಎಚ್.ಎಸ್.ತಂಗ್ಖೀವ್ ಅವರನ್ನೊಳಗೊಂಡ ನ್ಯಾಯಪೀಠ, ದೇಶದಲ್ಲಿ ಕೊರೋನಾವನ್ನು ಹಿಮ್ಮೆಟ್ಟಿಸಲು ಲಸಿಕೆ ಪಡೆದುಕೊಳ್ಳುವುದು ಇಂದಿನ ಅವಶ್ಯಕತೆ ಖಂಡಿತಾ ಹೌದು, ಆದರೆ ಇಲ್ಲಿ ಕೆಲವು ಮೂಲಭೂತ ತತ್ವಗಳಿರುತ್ತವೆ. ಲಸಿಕೆ ಪಡೆಯುವುದನ್ನು ಕಡ್ಡಾಯ ಯಾವ ರೀತಿ ಮಾಡಬೇಕು ಮತ್ತು ಈ ರೀತಿ ಕಡ್ಡಾಯ ಮಾಡುವುದರಿಂದ ನಾಗರಿಕರ ಜೀವನದ ಹಕ್ಕುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಯೇ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದೆ.

ಸಂವಿಧಾನ ವಿಧಿ 21 ಆರೋಗ್ಯದ ಹಕ್ಕನ್ನು ಮೂಲಭೂತ ಹಕ್ಕಿನಂತೆ ನೋಡುತ್ತದೆ. ಲಸಿಕೆ ನೀಡುವುದು ಆರೋಗ್ಯ ರಕ್ಷಣೆಯ ಹಕ್ಕು ಮೂಲಭೂತ ಹಕ್ಕಾಗಿದೆ. ಆದಾಗ್ಯೂ, ಬಲವಂತದಿಂದ ಲಸಿಕೆ ನೀಡುವುದು ಅಥವಾ ಬಲವಂತದ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಡ್ಡಾಯಗೊಳಿಸುವುದು ಮೂಲಭೂತ ಉದ್ದೇಶವನ್ನು ತಿರುಚುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಬಲವಂತದ ಲಸಿಕೆ ನೀಡುವುದು ಅಥವಾ ಲಸಿಕೆ ತೆಗೆದುಕೊಳ್ಳದೆ ಕೆಲಸ ಮಾಡುವಂತಿಲ್ಲ ಎಂದು ಹೇಳುವುದು ಮನುಷ್ಯನ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ, ಜೀವನೋಪಾಯದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಇದು ವ್ಯಕ್ತಿಯ ಹಕ್ಕು, ಆಯ್ಕೆ ಮತ್ತು ಸ್ವಾತಂತ್ರ್ಯದ ಮೇಲೆ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವುದಕ್ಕಿಂತ ಗಮನಾರ್ಹವಾಗಿ ಹೆಚ್ಚು ಪರಿಣಾಮ ಬೀರುತ್ತದೆ, ಲಸಿಕೆ ಹಾಕದಿರಲು ಆಯ್ಕೆ ಮಾಡುವ ಒಬ್ಬ ಮಾನವನ ಸ್ವಾಯತ್ತ ನಿರ್ಧಾರದಿಂದಾಗಿ ಮತ್ತೊಬ್ಬರ ಹಿತಾಸಕ್ತಿ ಅಪಾಯಕ್ಕೀಡಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com