ಆಮ್ಲಜನಕ ಸ್ಥಾವರ
ಆಮ್ಲಜನಕ ಸ್ಥಾವರ

ಕೋವಿಡ್ 2ನೇ ಅಲೆ ವೇಳೆ ದೆಹಲಿ ಸರ್ಕಾರ ಅಮ್ಲಜನಕ ಅಗತ್ಯವನ್ನು ಉತ್ಪ್ರೇಕ್ಷಿಸಿತ್ತು: ಸುಪ್ರೀಂ ಕೋರ್ಟ್ ಸಮಿತಿ ಮಾಹಿತಿ

ಕೋವಿಡ್ 2ನೇ ಅಲೆ ವೇಳೆ ಅಮ್ಲಜನಕ ಅಗತ್ಯವನ್ನು ಉತ್ಪ್ರೇಕ್ಷಿಸಿದ್ದ ದೆಹಲಿ ಸರ್ಕಾರ ಅಗತ್ಯಕ್ಕಿಂತ 4 ಪಟ್ಟು ಹೆಚ್ಚು ಅಗತ್ಯತೆ ಇದೆ ಹೇಳಿಕೊಂಡಿತ್ತು ಎಂದು ಸುಪ್ರೀಂ ಕೋರ್ಟ್ ಸಮಿತಿ ಮಾಹಿತಿ ನೀಡಿದೆ.

ನವದೆಹಲಿ: ಕೋವಿಡ್ 2ನೇ ಅಲೆ ವೇಳೆ ಅಮ್ಲಜನಕ ಅಗತ್ಯವನ್ನು ಉತ್ಪ್ರೇಕ್ಷಿಸಿದ್ದ ದೆಹಲಿ ಸರ್ಕಾರ ಅಗತ್ಯಕ್ಕಿಂತ 4 ಪಟ್ಟು ಹೆಚ್ಚು ಅಗತ್ಯತೆ ಇದೆ ಹೇಳಿಕೊಂಡಿತ್ತು ಎಂದು ಸುಪ್ರೀಂ ಕೋರ್ಟ್ ಸಮಿತಿ ಮಾಹಿತಿ ನೀಡಿದೆ.

ಈ ಕುರಿತಂತೆ ಸುಪ್ರೀಂ ಕೋರ್ಟ್ ಗೆ ಸಮಿತಿ ತನ್ನ ಮಧ್ಯಂತರ ವರದಿ ಸಲ್ಲಿಕೆ ಮಾಡಿದ್ದು, ವರದಿಯಲ್ಲಿ ದೆಹಲಿ ಸರ್ಕಾರ ನಗರದ ಆಮ್ಲಜನಕದ ಅಗತ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಿತ್ತು ಎಂದು ಹೇಳಿದೆ.

"ದೆಹಲಿ ಸರ್ಕಾರವು ಹಾಸಿಗೆಯ ಸೂತ್ರದ ಪ್ರಕಾರ ಲೆಕ್ಕಹಾಕಿ ನಿತ್ಯ 1,140 ಮೆಟ್ರಿಕ್ ಟನ್ ಆಮ್ಲಜನಕ ಬೇಕು ಎಂದು ಕೇಳಿತ್ತು. ಆದರೆ ಇದು ನೈಜ ಅಗತ್ಯತೆಯ ನಾಲ್ಕು ಪಟ್ಟು ಹೆಚ್ಚಾಗಿದೆ. ದೆಹಲಿ ಸರ್ಕಾರಕ್ಕೆ ಕೇವಲ 289 ಮೆ.ಟನ್ ಆಮ್ಲಜನಕದ ಅಗತ್ಯತೆ ಇತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ದೆಹಲಿಯಲ್ಲಿ ಆಮ್ಲಜನಕದ ಸರಾಸರಿ ಬಳಕೆ 284 ರಿಂದ 372 ಮೆ.ಟನ್ ಆಗಿತ್ತು. ದೆಹಲಿ ಸರ್ಕಾರದ ಈ ನಡೆಯಿಂದಾಗಿ ಆಮ್ಲಜನಕದ ಹೆಚ್ಚುವರಿ ಪೂರೈಕೆ ಆಮ್ಲಜನಕದ ಅಗತ್ಯವಿರುವ ಇತರೆ ರಾಜ್ಯಗಳ ಮೇಲೆ ಪರಿಣಾಮ ಬೀರಿತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. 

ಆಮ್ಲಜನಕದ ಹೆಚ್ಚಿನ ಬಳಕೆ ದತ್ತಾಂಶ ತೋರಿಸಲು ಕಡಿಮೆ ಬೆಡ್ ಗಳ ಆಸ್ಪತ್ರೆಗಳ ಸೇರ್ಪಡೆ
ಆಮ್ಲಜನಕದ ಹೆಚ್ಚಿನ ಬಳಕೆ ತೋರಿಸುವ ಸಲುವಾಗಿ ಕಡಿಮೆ ಹಾಸಿಗೆಗಳನ್ನು ಹೊಂದಿರುವ ನಾಲ್ಕು ದೆಹಲಿ ಆಸ್ಪತ್ರೆಗಳನ್ನು ಕೂಡ ಪಟ್ಟಿಗೆ ಸೇರಿಸಲಾಗಿತ್ತು. ಈ ಪೈಕಿ ಸಿಂಘಾಲ್ ಆಸ್ಪತ್ರೆ, ಅರುಣಾ ಆಸಿಫ್ ಅಲಿ ಆಸ್ಪತ್ರೆ, ಇಎಸ್ಐಸಿ ಮಾದರಿ ಆಸ್ಪತ್ರೆ ಮತ್ತು ಲಿಫೆರೆ ಆಸ್ಪತ್ರೆಯಲ್ಲಿ ಕಡಿಮೆ ಹಾಸಿಗೆಗಳಿದ್ದು, ಈ  ಆಸ್ಪತ್ರೆಗಳಿಂದ ತಪ್ಪಾದ ದತ್ತಾಂಶ ಪೂರೈಕೆಯಾಗಿದೆ. ಇದು ದೆಹಲಿಯಲ್ಲಿ ಆಮ್ಲಜನಕದ ಅಗತ್ಯತೆಗಳ ಉತ್ಪ್ರೇಕ್ಷಿತ ಬೇಡಿಕೆಗೆ ಕಾರಣವಾಯಿತು ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com