ಡೆಲ್ಟಾ ಪ್ಲಸ್ ರೂಪಾಂತರ ಬಗ್ಗೆ ಆತಂಕಪಡಬೇಕಾದ ಅಗತ್ಯವಿಲ್ಲ- ವೈದ್ಯರು

ಡೆಲ್ಟಾ ಪ್ಲಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕವಾದದ್ದು ಆದರೆ,ಭಯಪಡಬೇಕಾದ ಅಗತ್ಯವಿಲ್ಲ ಎಂದು  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಖ್ಯಸ್ಥ ಮಾಜಿ ಡಾ.ರಾಮನ್ ಗಂಗಖೇಡ್ಕರ್ ಭಾನುವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವೆದಹಲಿ: ಡೆಲ್ಟಾ ಪ್ಲಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕವಾದದ್ದು ಆದರೆ,ಭಯಪಡಬೇಕಾದ ಅಗತ್ಯವಿಲ್ಲ ಎಂದು  ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಖ್ಯಸ್ಥ ಮಾಜಿ ಡಾ.ರಾಮನ್ ಗಂಗಖೇಡ್ಕರ್ ಭಾನುವಾರ ಹೇಳಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕ ಸ್ವರೂಪದಾಗಿಲ್ಲ , ಭಯ ಪಡಬೇಕಾದ ಅಗತ್ಯವಿಲ್ಲ, ಇದರ ವಿರುದ್ಧ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

ಸಂಭಾವ್ಯ ಕೋವಿಡ್ ಮೂರನೇ ಅಲೆ ಕುರಿತು ಭಾನುವಾರ ವೆಬ್ ನಾರ್ ಮೂಲಕ ನಡೆದ ಚರ್ಚೆಯಲ್ಲಿ ದೇಶದ ವಿವಿಧ ಭಾಗಗಳ ವೈದ್ಯರ ಗುಂಪಿನೊಂದಿಗೆ ಮಾಜಿ ಐಸಿಎಂಆರ್ ಮುಖ್ಯಸ್ಥರು ಪಾಲ್ಗೊಂಡಿದ್ದರು. ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ವೈದ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾಗಿ ವೆಬ್ ನಾರ್ ಆಯೋಜಿಸಿದ್ದ ಸಂಘಟಕ ಡಾ. ದಿನೇಶ್ ಮಥೂರ್ ಹೇಳಿದರು. 

ಕೋವಿಶೀಲ್ಡ್ ಲಸಿಕೆ ತೆಗೆದುಕೊಳ್ಳುವುದರಿಂದ ಆಗುವ ಅಡ್ಡ ಪರಿಣಾಮದ ತಪ್ಪು ಕಲ್ಪನೆ ಹಾಗೂ  ತಳ್ಳಿ ಹಾಕಿದ ಗಂಗಖೇಡ್ಕರ್, ವಿಭಿನ್ನ ಲಸಿಕೆಯ ಎರಡು ಲಸಿಕೆಗಳನ್ನು ಯಾರೂ ಕೂಡಾ ತೆಗೆದುಕೊಳ್ಳಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com