ಸಾಮಾಜಿಕ ಜಾಲತಾಣ ದುರ್ಬಳಕೆ: ಸಂಸದೀಯ ಸಮಿತಿ ಎದುರು ಫೇಸ್ ಬುಕ್ ಪ್ರತಿನಿಧಿಗಳು ಹಾಜರು

ಫೇಸ್ ಬುಕ್ ಇಂಡಿಯಾದ ಅಧಿಕಾರಿಗಳು ಜೂ.29 ರಂದು ಐಟಿ ಮೇಲಿನ ಸಂಸತ್ ಸ್ಥಾಯಿ ಸಮಿತಿ ಎದುರು ಹಾಜರಾಗಿದ್ದಾರೆ. 
ಫೇಸ್ ಬುಕ್
ಫೇಸ್ ಬುಕ್

ನವದೆಹಲಿ: ಫೇಸ್ ಬುಕ್ ಇಂಡಿಯಾದ ಅಧಿಕಾರಿಗಳು ಜೂ.29 ರಂದು ಐಟಿ ಮೇಲಿನ ಸಂಸತ್ ಸ್ಥಾಯಿ ಸಮಿತಿ ಎದುರು ಹಾಜರಾಗಿದ್ದಾರೆ. ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸಮಿತಿ ಫೇಸ್ ಬುಕ್ ಹಾಗೂ ಗೂಗಲ್ ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆ ಬಗ್ಗೆ ಚರ್ಚಿಸಲು ಸಮನ್ಸ್ ಜಾರಿಗೊಳಿಸಿತ್ತು. 

ಫೇಸ್ ಬುಕ್ ನ ಭಾರತದ ಸಾರ್ವಜನಿಕ ನೀತಿ ನಿರ್ದೇಶಕ ಶಿವಂತ್ ತುಕ್ರಾಲ್ ಹಾಗೂ ಜನರಲ್ ಕೌನ್ಸೆಲ್ ನಮ್ರತಾ ಸಿಂಗ್ ಸಮಿತಿ ಎದುರು ಹಾಜರಾಗಿದ್ದರು. ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಸಾಮಾಜಿಕ ಜಾಲತಾಣ/ ಅಂತರ್ಜಾಲ ಮಾಧ್ಯಮ ವೇದಿಕೆಗಳ ದುರ್ಬಳಕೆಯನ್ನು ತಪ್ಪಿಸುವುದು ಸಭೆಯ ಉದ್ದೇಶವಾಗಿತ್ತು.

ಫೇಸ್ ಬುಕ್ ಸಂಸ್ಥೆಯ ನೀತಿಗಳ ಪ್ರಕಾರ ಕೋವಿಡ್-19 ಸಂಬಂಧಿತ ಪ್ರೋಟೋಕಾಲ್ ಇರುವುದರಿಂದ ನೇರವಾಗಿ ಯಾವುದೇ ವ್ಯಕ್ತಿಗಳನ್ನು ತಮ್ಮ ಸಂಸ್ಥೆಯ ಪ್ರತಿನಿಧಿಗಳು ಭೇಟಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಶಶಿ ತರೂರ್ ಸಂಸತ್ ಕಾರ್ಯದರ್ಶಿಗಳು ವರ್ಚ್ಯುಯಲ್ ಸಭೆಗಳಿಗೆ ಅವಕಾಶ ನೀಡುವುದಿಲ್ಲವಾದ ಕಾರಣ ಸಭೆಗೆ ಬರಬೇಕು ಎಂದು ಶಶಿ ತರೂರ್ ಫೇಸ್ ಬುಕ್ ಪ್ರತಿನಿಧಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದರು.

ಸಂಸತ್ ಸಮಿತಿ ಯೂಟ್ಯೂಬ್ ಹಾಗು ಇನ್ನಿತರ ಸಾಮಾಜಿಕ ಜಾಲತಾಣ ಮಧ್ಯವರ್ತಿಗಳನ್ನೂ ಮುಂದಿನ ವಾರಗಳಲ್ಲಿ ಸಭೆಗೆ ಆಹ್ವಾನಿಸಲಿದೆ. ಟ್ವಿಟರ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಫೇಸ್ ಬುಕ್ ಹಾಗೂ ಗೂಗಲ್ ಪ್ರತಿನಿಧಿಗಳೂ ಸಮಿತಿ ಎದುರು ಹಾಜರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com