ಆಮದಿನಲ್ಲಿ ವಿಳಂಬತೆ, ಕಡ್ಡಾಯ ಗುಣಮಟ್ಟ ಪರೀಕ್ಷೆಯಿಂದಾಗಿ ದೇಶದಲ್ಲಿ ಸ್ಪುಟ್ನಿಕ್ ವಿ ಲಸಿಕೆ ವಾಣಿಜ್ಯ ಲಭ್ಯತೆಯಲ್ಲಿ ಹಿನ್ನಡೆ

ಆಮದು ಸರಕುಗಳ ಮೇಲಿನ ಅವಲಂಬನೆ ಮತ್ತು ಪ್ರತಿ ಬ್ಯಾಚ್ ನ ಕಡ್ಡಾಯ ಗುಣಮಟ್ಚದ ಪರೀಕ್ಷೆ, ದೇಶದಲ್ಲಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ವಾಣಿಜ್ಯ ಲಭ್ಯತೆಯನ್ನು ಹಿಂದಕ್ಕೆ ತಳ್ಳಿದೆ.
ಸ್ಪುಟ್ನಿಕ್ ವಿ
ಸ್ಪುಟ್ನಿಕ್ ವಿ

ನವದೆಹಲಿ: ಆಮದು ಸರಕುಗಳ ಮೇಲಿನ ಅವಲಂಬನೆ ಮತ್ತು ಪ್ರತಿ ಬ್ಯಾಚ್ ನ ಕಡ್ಡಾಯ ಗುಣಮಟ್ಟದ ಪರೀಕ್ಷೆ, ದೇಶದಲ್ಲಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ವಾಣಿಜ್ಯ ಲಭ್ಯತೆಯನ್ನು ಹಿಂದಕ್ಕೆ ತಳ್ಳಿದೆ.

ಇತ್ತೀಚಿಗೆ ವಿದೇಶಿ ನಿರ್ಮಿತ ಲಸಿಕೆಗಳು ದೇಶದೊಳಗೆ ಸುಲಭವಾಗಿ ಪ್ರವೇಶಿಸಲು ವಿದೇಶಿ ನಿರ್ಮಿತ ಲಸಿಕೆಗಳಿಗಾಗಿ ಕಸೌಲಿಯ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿಯಿಂದ ಪ್ರತಿ ಬ್ಯಾಚ್ ಕೋವಿಡ್ ಲಸಿಕೆಯನ್ನು ಕಡ್ಡಾಯ ಮತ್ತು ಕ್ಲಿನಿಕಲ್ ಪ್ರಯೋಗದ ಅಗತ್ಯತೆಯನ್ನು ಭಾರತೀಯ ಔಷಧ ನಿಯಂತ್ರಕ ಪ್ರಾಧಿಕಾರ ಮಾನ್ಯ ಮಾಡಿದೆ.

ಆದಾಗ್ಯೂ, ಯುಎಸ್ ಪುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್, ಯುರೋಪಿಯನ್ ಮೆಡಿಸನ್ಸ್ ಏಜೆನ್ಸಿ, ಮತ್ತು ಯುಕೆ ಹೆಲ್ತ್ ಕೇರ್ ಪ್ರೊಡಕ್ಟ್ಸ್ ರೆಗ್ಯುಲೆಟರಿ ಏಜೆನ್ಸಿ, ಜಪಾನ್ ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸಸ್ ಏಜೆನ್ಸಿಯಿಂದ ಮಾನ್ಯಗೊಂಡಿರುವ, ಡಬ್ಲ್ಯೂಎಚ್ ಒ ತುರ್ತು ಬಳಕೆ ಪಟ್ಟಿಯಲ್ಲಿರುವ ಲಸಿಕೆಗಳಿಗೆ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಇನ್ನೂ ಮಾನ್ಯಗೊಳ್ಳದ ಕಾರಣ ದೇಶದಲ್ಲಿ ಆಮದಾಗುವ ಪ್ರತಿ ಬ್ಯಾಚ್ ಗುಣಮಟ್ಟವನ್ನು ಪರೀಕ್ಷೆಯ ಅಗತ್ಯವಿದೆ. ಇದು ಇನ್ನೂ ಒಂದು ವಾರ ತೆಗೆದುಕೊಳ್ಳಬಹುದು. ರಷ್ಯಾದ ಸಾರ್ವಭೌಮ ನಿಧಿ ಆರ್ ಡಿಎಫ್ ಒಪ್ಪಂದದ ಪ್ರಕಾರ ಹೈದರಾಬಾದ್ ಮೂಲದ ಡಾ. ರೆಡ್ಡಿ ಔಷಧ ತಯಾರಕ ಕಂಪನಿ ಸ್ಪುಟ್ನಿಕ್ ವಿ ಲಸಿಕೆಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಮೊದಲ ಬಾರಿಗೆ 250 ಮಿಲಿಯನ್ ಡೋಸ್ ವಿತರಿಸುವ ಹಕ್ಕನ್ನು ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com