ಭವಿಷ್ಯದಲ್ಲಿ ಡ್ರೋನ್ ದಾಳಿ ಎದುರಿಸಲು ಭಾರತ ಇಸ್ರೇಲ್ ಮಾದರಿಯ 'ಐರನ್ ಡೋಮ್' ನಿರ್ಮಿಸಬೇಕು: ಆನಂದ್ ಮಹೀಂದ್ರಾ

ಭವಿಷ್ಯದಲ್ಲಿ ಎದುರಾಗಬಹುದಾದ ಡ್ರೋನ್ ದಾಳಿಗಳನ್ನು ಎದುರಿಸಲು ಭಾರತ ಕೂಡ ಇಸ್ರೇಲ್ ನಂತೆ ಗಡಿಗಳಲ್ಲಿ ಐರನ್ ಡೋಮ್ ನಿರ್ಮಿಸಬೇಕು ಎಂದು ಖ್ಯಾತ ಉದ್ಯಮಿ ಹಾಗೂ ಮಹೀಂದ್ರಾ ಗುಂಪಿನ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದಾರೆ.
ಇಸ್ರೇಲ್ ಐರನ್ ಡೋಮ್ ಮತ್ತು ಆನಂದ್ ಮಹೀಂದ್ರಾ
ಇಸ್ರೇಲ್ ಐರನ್ ಡೋಮ್ ಮತ್ತು ಆನಂದ್ ಮಹೀಂದ್ರಾ

ನವದೆಹಲಿ: ಭವಿಷ್ಯದಲ್ಲಿ ಎದುರಾಗಬಹುದಾದ ಡ್ರೋನ್ ದಾಳಿಗಳನ್ನು ಎದುರಿಸಲು ಭಾರತ ಕೂಡ ಇಸ್ರೇಲ್ ನಂತೆ ಗಡಿಗಳಲ್ಲಿ ಐರನ್ ಡೋಮ್ ನಿರ್ಮಿಸಬೇಕು ಎಂದು ಖ್ಯಾತ ಉದ್ಯಮಿ ಹಾಗೂ ಮಹೀಂದ್ರಾ ಗುಂಪಿನ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಭವಿಷ್ಯದಲ್ಲಿ ಎದುರಾಗಬಹುದಾದ ಡ್ರೋನ್ ದಾಳಿಗಳನ್ನು ವಿಶೇಷ ಡ್ರೋನ್‌ಗಳನ್ನು ಖರೀದಿಸಲು ಭಾರತ ಸರ್ಕಾರ ರಕ್ಷಣಾ ಬಜೆಟ್‌ನಲ್ಲಿ ಹಂಚಿಕೆಯನ್ನು ಹೆಚ್ಚಿಸಬೇಕು ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವನ್ನು ಉಲ್ಲೇಖಿಸಿರುವ ಅವರು "ವಿಶೇಷ ಡ್ರೋನ್‌ ಗಳ ಖರೀದಿಗೆ ರಕ್ಷಣಾ ಬಜೆಟ್‌ನಲ್ಲಿ ಹಂಚಿಕೆಗಳನ್ನು ಗಮನಾರ್ಹವಾಗಿ ಹೆಚ್ಚಿಸಬೇಕಾಗಿದೆ" ಎಂದು ಅವರು ಹೇಳಿದ್ದಾರೆ. ಡ್ರೋನ್ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಇಸ್ರೇಲ್ ಮಾದರಿಯಲ್ಲಿ 'ಐರನ್ ಡೋಮ್' ನಂತಹ ತಂತ್ರಜ್ಞಾನದ ಬಗ್ಗೆ ನಾವು ಕೆಲಸ ಮಾಡಬೇಕಾಗಿದೆ ಎಂದು ಆನಂದ್ ಮಹೀಂದ್ರಾ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜೂನ್ 27 ರ ನಸುಕಿನಲ್ಲಿ ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆ (ಐಎಎಫ್) ಪ್ರಮುಖ ವಾಯು ನೆಲೆಗಳಲ್ಲಿ ಡ್ರೋನ್‌ಗಳಿಂದ ಎರಡು ಸ್ಪೋಟಗಳು ಸಂಭವಿಸಿವೆ. ಜಮ್ಮು ವಿಮಾನ ನಿಲ್ದಾಣದ ಐಎಎಫ್ ನಿಲ್ದಾಣದಲ್ಲಿ ಶನಿವಾರ ಮಧ್ಯರಾತ್ರಿಯ ನಂತರ ಭಯೋತ್ಪಾದಕರು ಡ್ರೋನ್‌ಗಳ ಸಹಾಯದಿಂದ ಎರಡು  ಬಾಂಬ್‌ಗಳನ್ನು ಬೀಳಿಸಿದ್ದಾರೆ. ಬಾಂಬ್ ಸ್ಫೋಟದಲ್ಲಿ ಇಬ್ಬರು ವಾಯುಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ. ಮಧ್ಯರಾತ್ರಿ 1.40 ಗಂಟೆ ಸಮಯದಲ್ಲಿ ಕೇವಲ ಆರು ನಿಮಿಷಗಳ ಅವಧಿಯಲ್ಲಿ ಎರಡು ಬಾಂಬ್‌ಗಳನ್ನು ಡ್ರೋನ್‌ ನಿಂದ ಬೀಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಸ್ಫೋಟಗಳಲ್ಲಿ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿದೆ ಮತ್ತೊಂದು ಬಾಂಬ್‌ ತೆರೆದ ಪ್ರದೇಶದಲ್ಲಿ ಸ್ಫೋಟಗೊಂಡಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ತಿಳಿಸಿದೆ. ಸ್ಪೋಟಗಳಿಂದ ವಿಮಾನ ನಿಲ್ದಾಣದ ಯಾವುದೇ ಸಲಕರಣೆಗಳಿಗೆ ಹಾನಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com