3 ದಿನಗಳಲ್ಲಿ 60 ಲಕ್ಷ ಲಸಿಕೆ ಡೋಸ್ ಪೂರೈಕೆ: ಕೇಂದ್ರ ಸರ್ಕಾರ

ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 60 ಲಕ್ಷ ಡೋಸ್ ಗಳಷ್ಟು ಲಸಿಕೆಯನ್ನು 3 ದಿನಗಳಲ್ಲಿ ಪೂರೈಕೆ ಮಾಡುವುದಾಗಿ ಕೇಂದ್ರ ಸರ್ಕಾರ ಮೇ 03 ರಂದು ತಿಳಿಸಿದೆ. 

Published: 03rd May 2021 03:22 PM  |   Last Updated: 04th May 2021 01:43 PM   |  A+A-


Newly arrived Covid vaccine vials being stored at Regional Vaccine Store. (File photo| EPS/k k sundar)

ಕೋವಿಡ್-19 ಲಸಿಕೆ ದಾಸ್ತಾನು

Posted By : Srinivas Rao BV
Source : PTI

ನವದೆಹಲಿ: ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 60 ಲಕ್ಷ ಡೋಸ್ ಗಳಷ್ಟು ಲಸಿಕೆಯನ್ನು 3 ದಿನಗಳಲ್ಲಿ ಪೂರೈಕೆ ಮಾಡುವುದಾಗಿ ಕೇಂದ್ರ ಸರ್ಕಾರ ಮೇ 03 ರಂದು ತಿಳಿಸಿದೆ. 

ಆರೋಗ್ಯ ಸಚಿವಾಲಯ ಮಾಧ್ಯಮ ಪ್ರಕಟಣೆಯನ್ನು ಪ್ರಕಟಿಸಿದ್ದು, ಈ ವರೆಗೂ ಭಾರತ ಸರ್ಕಾರ 16.54 ಕೋಟಿ ಲಸಿಕೆ ಡೋಸ್ ಗಳನ್ನು ಕೇಂದ್ರಾಡಳಿತ/ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಿದೆ.

ಈ ಪೈಕಿ 15,79,21,537 ಗಳಷ್ಟು ಲಸಿಕೆ ಡೋಸ್ ಗಳನ್ನು  ಸೋಮವಾರ ಬೆಳಿಗ್ಗೆ ವರೆಗೂ ಜನರಿಗೆ ನೀಡಲಾಗಿದೆ. ಇನ್ನೂ 75 ಲಕ್ಷಗಳಷ್ಟು ಡೋಸ್ ಗಳು ಬಳಕೆಯಾಗದೇ ಉಳಿದಿದ್ದು, ಇನ್ನಷ್ಟೇ ನೀಡಬೇಕಿದೆ, ಇದರ ಜೊತೆಗೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನು ಮೂರು ದಿನಗಳಲ್ಲಿ 59 ಲಕ್ಷ ಡೋಸ್ ಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ. 

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp