ಮೇ 10 ರಿಂದ 24 ರವರೆಗೆ ತಮಿಳು ನಾಡಿನಲ್ಲಿ ಸಂಪೂರ್ಣ ಲಾಕ್ ಡೌನ್: ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ

ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬಾರದಷ್ಟು ಹರಡುತ್ತಿರುವ ಹಿನ್ನೆಲೆಯಲ್ಲಿ ಒಂದೊಂದೇ ರಾಜ್ಯಗಳು ರಾಜ್ಯಮಟ್ಟದಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಿಕೆ ಮಾಡುತ್ತಿವೆ.
ಭಾನುವಾರ ಲಾಕ್ ಡೌನ್ ನಲ್ಲಿ ಚೆನ್ನೈಯ ಅಣ್ಣಾ ನಗರದಲ್ಲಿ ಕಂಡುಬಂದಿದ್ದು ಹೀಗೆ
ಭಾನುವಾರ ಲಾಕ್ ಡೌನ್ ನಲ್ಲಿ ಚೆನ್ನೈಯ ಅಣ್ಣಾ ನಗರದಲ್ಲಿ ಕಂಡುಬಂದಿದ್ದು ಹೀಗೆ

ಚೆನ್ನೈ: ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬಾರದಷ್ಟು ಹರಡುತ್ತಿರುವ ಹಿನ್ನೆಲೆಯಲ್ಲಿ ಒಂದೊಂದೇ ರಾಜ್ಯಗಳು ರಾಜ್ಯಮಟ್ಟದಲ್ಲಿ ಸಂಪೂರ್ಣ ಲಾಕ್ ಡೌನ್ ಹೇರಿಕೆ ಮಾಡುತ್ತಿವೆ.

ಇದೀಗ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೂಡ ಲಾಕ್ ಡೌನ್ ಘೋಷಿಸಿದ್ದಾರೆ. ಮೇ 10 ರಿಂದ 24ರವರೆಗೆ ಎರಡು ವಾರಗಳ ಕಾಲ ತಮಿಳು ನಾಡಿನಲ್ಲಿ ಸಂಪೂರ್ಣ ಲಾಕ್ ಡೌನ್ ನ್ನು ಅಲ್ಲಿನ ಮುಖ್ಯಮಂತ್ರಿ ಘೋಷಿಸಿದ್ದಾರೆ.

ತಮಿಳು ನಾಡಿನಲ್ಲಿ ಯಾವುದಕ್ಕೆ ನಿರ್ಬಂಧ?: ಈ ಕುರಿತು ಹೇಳಿಕೆ ಹೊರಡಿಸಿರುವ ಅವರು, ಅಗತ್ಯ ಸೇವೆಗಳಾದ ಸಚಿವಾಲಯ, ಆರೋಗ್ಯ, ಕಂದಾಯ, ವಿಪತ್ತು ನಿರ್ವಹಣೆ, ಪೊಲೀಸ್, ಗೃಹ ರಕ್ಷಕ, ಅಗ್ನಿಶಾಮಕ ಮತ್ತು ಸುರಕ್ಷತಾ ಸೇವೆ, ಕೈದಿ ಇಲಾಖೆ, ಜಿಲ್ಲಾಡಳಿತ, ಇಂಧನ, ಕುಡಿಯುವ ನೀರು, ಪೂರೈಕೆ ಖಜಾನೆಗಳನ್ನು ಹೊರತುಪಡಿಸಿ ಉಳಿದ ಯಾವ ಸರ್ಕಾರಿ ಕಚೇರಿಗಳು ತೆರೆದಿರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ನಿರ್ಬಂಧ ರಾಜ್ಯದಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳಿಗೂ ಅನ್ವಯವಾಗುತ್ತದೆ. ಎಲ್ಲಾ ಖಾಸಗಿ ಕಚೇರಿಗಳು, ಉದ್ಯಮಗಳು, ಐಟಿ, ಐಟಿ ಸಂಬಂಧಿ ಸೇವೆಗಳು, ವಿನಾಯ್ತಿ ಹೊಂದಿದ ಕೈಗಾರಿಕೆಗಳು ಹೊರತುಪಡಿಸಿ ಬೇರೆ ಕಾರ್ಖಾನೆಗಳು ಲಾಕ್ ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸುವಂತಿಲ್ಲ, ಈ ಕಚೇರಿಗಳಲ್ಲಿ ಮನೆಯಿಂದ ಕೆಲಸ ಮಾಡುವ ವಿಧಾನ ಅನುಸರಿಸಬಹುದು.

ಬ್ಯೂಟಿ ಪಾರ್ಲರ್, ಹೇರ್ ಕಟ್ಟಿಂಗ್ ಸಲೂನ್ ಗಳು, ಸ್ಪಾಗಳು ಎರಡು ವಾರ ಬಂದ್ ಆಗಿರುತ್ತದೆ. ಇನ್ನು ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು, ತರಕಾರಿ ಮಳಿಗೆಗಳು, ಮಾಂಸ, ಮೀನು ಮಾರಾಟ ಮಾಡುವ ಹವಾ ನಿಯಂತ್ರಿತವಲ್ಲದ ಅಂಗಡಿಗಳಿಗೆ ಮಧ್ಯಾಹ್ನ 12 ಗಂಟೆಯವರೆಗೆ ತೆರೆದಿರಲು ಅವಕಾಶವಿರುತ್ತದೆ.

ಆನ್ ಲೈನ್ ನಲ್ಲಿ ಗ್ರಾಹಕರಿಗೆ ದಿನಸಿ, ತರಕಾರಿಗಳು, ಮಾಂಸ ಮತ್ತು ಮೀನುಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ವಿತರಿಸಲು ಅವಕಾಶವಿರುತ್ತದೆ. ಉಳಿದೆಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಿರುತ್ತದೆ.

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ ನಿಯಮಿತದ ಎಲ್ಲಾ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿದ್ದು ರೆಸ್ಟೋರೆಂಟ್, ಹೊಟೇಲ್, ಮೆಸ್ ಮತ್ತು ಟೀ ಅಂಗಡಿಗಳಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಾರ್ಸೆಲ್ ಕೊಂಡೊಯ್ಯಲು ಮಾತ್ರ ಅವಕಾಶವಿರುತ್ತದೆ.

ಮನರಂಜನಾ ಕ್ಲಬ್‌ಗಳು, ಬಾರ್‌ಗಳು, ಸಭಾಂಗಣಗಳು, ಮನರಂಜನೆ ಉದ್ಯಾನವನಗಳು, ಸಭಾಂಗಣಗಳು ಕಾರ್ಯನಿರ್ವಹಿಸುವಂತಿಲ್ಲ. ಕೊಯಂಬೆಡು ಸಗಟು ಮಾರುಕಟ್ಟೆಯಲ್ಲಿ ಬಾರ್ ಗಳು ಚಿಲ್ಲರೆ ಮಾರಾಟ ಮಧ್ಯಾಹ್ನದವರೆಗೆ ಮಾರಾಟ ಮಾಡಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಸಗಟು ಮಾರುಕಟ್ಟೆಯಲ್ಲಿ ಹಣ್ಣು-ತರಕಾರಿ ಮಾರಾಟಕ್ಕೂ ಈ ನಿರ್ಬಂಧ ಅನ್ವಯವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com