ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಗೆ ಕೋವಿಡ್ ಸೋಂಕು: ಐಸಿಯು ವಾರ್ಡ್ ಗೆ ಶಿಫ್ಟ್

ಕೊರೋನಾ ಸೋಂಕಿನಿಂದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರನ್ನು ಐಸಿಯು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ

Published: 11th May 2021 12:05 PM  |   Last Updated: 11th May 2021 01:41 PM   |  A+A-


Azam Khan

ಅಜಂ ಖಾನ್

Posted By : Shilpa D
Source : PTI

ಲಕ್ನೋ: ಕೊರೋನಾ ಸೋಂಕಿನಿಂದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರನ್ನು ಐಸಿಯು ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.

72 ವರ್ಷದ ಅಜಂ ಖಾನ್ ಮತ್ತವರ ಪುತ್ರ ಅಬ್ದುಲ್ ಖಾನ್ ಅವರಿಗೆ ಏಪ್ರಿಲ್ 30 ರಂದು ಕೋರೋನಾ ಪಾಸಿಟಿವ್ ಪತ್ತೆಯಾಗಿತ್ತು, ಮೇ 9 ರವರೆಗೆ ಅವರನ್ನು ಸೀತಾಪುರ ಜೈಲಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಜಮ್ ಖಾನ್ ಅವರ ಆಮ್ಲಜನಕದ ಅಗತ್ಯವನ್ನು "ನಿಮಿಷಕ್ಕೆ 10 ಲೀಟರ್" ಗೆ ಹೆಚ್ಚಿಸಲಾಗಿದೆ, ಅದಕ್ಕಾಗಿಯೇ ಅವರನ್ನು ಲಕ್ನೋದ ಮೇದಾಂತ ಆಸ್ಪತ್ರೆಯ ನಿರ್ಣಾಯಕ ಆರೈಕೆ ತಂಡ ಅವರನ್ನು ಕೋವಿಡ್ ಐಸಿಯುಗೆ ಸ್ಥಳಾಂತರಿಸಿತು ಎಂದು ವೈದ್ಯರ ತಂಡ ತಿಳಿಸಿದೆ.

ತೀವ್ರ ನಿಗಾ ಘಟಕದಲ್ಲಿ ಅಜಂ ಖಾನ್ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಜಂ ಖಾನ್ ಪುತ್ರ 30 ವರ್ಷದ ಅಬ್ದುಲ್ಲಾ ಖಾನ್ ಅವರ ಆರೋಗ್ಯ ಸ್ಥಿತಿಗತಿ ಕುರಿತು, ಮಾಹಿತಿ ನೀಡಲಾಗಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

ಅಜಮ್ ಖಾನ್ ಅವರಿಗೆ ಜ್ವರವಿದೆ, ನಿರಂತರವಾಗಿದೆ ಅವರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ಮತ್ತು ಅದರ ಪ್ರಕಾರ ಅವರ ಚಿಕಿತ್ಸೆಯನ್ನು ಮಾಡಲಾಗುವುದು. ವಿವಿಧ ಪ್ರಕರಣಗಳ ಹಿನ್ನೆಲೆಯಲ ಅಜಂ ಖಾನ್ ಪತ್ನಿ ಮತ್ತು ಪುತ್ರರೊಂದಿಗೆ ಜೈಲು ಸೇರಿದ್ದರು.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp