ಅಗತ್ಯವಿರುವವರಿಗೆ ಸಹಾಯ ಹಸ್ತ ಒದಗಿಸುವಂತೆ ಜನರಲ್ಲಿ ರಾಹುಲ್ ಗಾಂಧಿ ಮನವಿ

ಕೋವಿಡ್-19 ಸಾಂಕ್ರಾಮಿಕದ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಸಹಾಯ ಹಸ್ತ ಒದಗಿಸುವಂತೆ ಕಾಂಗ್ರೆಸ್ಮುಖಂಡ ರಾಹುಲ್ ಗಾಂಧಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಕೊರೋನಾವೈರಸ್ ವಿರುದ್ಧದ ಹೋರಾಟವನ್ನು ಬಲಪಡಿಸಲು SpeakUpToSaveLives ಅಭಿಯಾನದಲ್ಲಿ ಸೇರಿಕೊಳ್ಳುವಂತೆ ಅವರು ಕೋರಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಬಿಕ್ಕಟ್ಟಿನ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಸಹಾಯ ಹಸ್ತ ಒದಗಿಸುವಂತೆ ಕಾಂಗ್ರೆಸ್
ಮುಖಂಡ ರಾಹುಲ್ ಗಾಂಧಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಕೊರೋನಾವೈರಸ್ ವಿರುದ್ಧದ ಹೋರಾಟವನ್ನು ಬಲಪಡಿಸಲು SpeakUpToSaveLives ಅಭಿಯಾನದಲ್ಲಿ ಸೇರಿಕೊಳ್ಳುವಂತೆ ಅವರು ಕೋರಿದ್ದಾರೆ.

ಆಕ್ಸಿಜನ್, ವೆಂಟಿಲೇಟರ್ , ಐಸಿಯು ಬೆಡ್ ಗಳು ಮತ್ತು ಲಸಿಕೆಯ ಕೊರತೆಯನ್ನು ತೋರಿಸುವ ಒಂದು ನಿಮಿಷದ ವಿಡಿಯೋವೊಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶದ ಜನರು ಕೈ ಜೋಡಿಸಬೇಕಾದ ಅಗತ್ಯವಿದೆ.ಜೀವ ಉಳಿಸಲು ಎಲ್ಲರೂ ನಮ್ಮ ಕೈಲಾದಷ್ಟು ಮಾಡೋಣ. SpeakUpToSaveLives ಅಭಿಯಾನಕ್ಕೆ ಸೇರ್ಪಡೆಯಾಗಿ ಮತ್ತು ಕೊರೋನಾ ವಿರುದ್ಧದ ಹೋರಾಟವನ್ನು ಬಲಪಡಿಸೋಣ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜನರಿಗೆ ನೆರವಾಗಲು ಎಐಸಿಸಿ ಕೇಂದ್ರ ಕಚೇರಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗಳಲ್ಲಿ ಕಂಟ್ರೋಲ್ ರೂಂನ್ನು ಕಾಂಗ್ರೆಸ್ ಸ್ಥಾಪಿಸಿದೆ. ಅಗತ್ಯವಾದವರಿಗೆ ಆಕ್ಸಿಜನ್, ಬೆಡ್ ಗಳು ಮತ್ತು ಅತ್ಯಾವಶ್ಯಕ ಔಷಧಿಗಳನ್ನು ಪಕ್ಷದ ವತಿಯಿಂದ ವ್ಯವಸ್ಥೆ ಮಾಡಲಾಗುತ್ತಿದೆ. ದೇಶದ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನೇಷನ್ ನೀಡುವಂತೆ ಕರೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com