ಮಹಾರಾಷ್ಟ್ರದಲ್ಲಿ ಜೂನ್ 1 ರವರೆಗೆ ಕೋವಿಡ್ ಲಾಕ್ ಡೌನ್ ವಿಸ್ತರಣೆ

ಕೋವಿಡ್-19 ಎರಡನೇ ಅಲೆ ನಿಯಂತ್ರಣ ಬಾರದಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಈಗಿರುವ ಲಾಕ್ ಡೌನ್ ನ್ನು ಜೂನ್ 1ರವರೆಗೆ ವಿಸ್ತರಿಸಿದೆ.
ಲಾಕ್ ಡೌನ್ ವಿಸ್ತರಿಸಿದ ಮಹಾರಾಷ್ಟ್ರ ಸರ್ಕಾರ
ಲಾಕ್ ಡೌನ್ ವಿಸ್ತರಿಸಿದ ಮಹಾರಾಷ್ಟ್ರ ಸರ್ಕಾರ

ಮುಂಬೈ: ಕೋವಿಡ್-19 ಎರಡನೇ ಅಲೆ ನಿಯಂತ್ರಣ ಬಾರದಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಈಗಿರುವ ಲಾಕ್ ಡೌನ್ ನ್ನು ಜೂನ್ 1ರವರೆಗೆ ವಿಸ್ತರಿಸಿದೆ.

ಹೊಸ ಆದೇಶದ ಪ್ರಕಾರ, ಮಹಾರಾಷ್ಟ್ರಕ್ಕೆ ಪ್ರವೇಶಿಸುವವರು ಕಡ್ಡಾಯವಾಗಿ ನೆಗೆಟಿವ್ ಆರ್ ಟಿ-ಪಿಸಿಆರ್ ವರದಿಯನ್ನು ಒಯ್ಯಬೇಕಾಗುತ್ತದೆ. ಈ ಹಿಂದೆ ಕೊರೋನಾ ಪ್ರಕರಣ ಹೆಚ್ಚಾಗಿರುವ ರಾಜ್ಯಗಳಿಂದ ಬರುವವರಿಗೆ ಮಾತ್ರ ಇದು ಕಡ್ಡಾಯವಾಗಿತ್ತು, ಆದರೆ ಇನ್ನು ಮುಂದೆ ದೇಶದ ಯಾವುದೇ ಭಾಗಗಳಿಂದ ಮಹಾರಾಷ್ಟ್ರ ಪ್ರವೇಶಿಸುವವರು ಕಡ್ಡಾಯವಾಗಿ ಆರ್ ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಕೊಂಡೊಯ್ಯಬೇಕಾಗುತ್ತದೆ.

ಲಾಕ್ ಡೌನ್ ನಿರ್ಬಂಧ ನಿಯಮ ಜೂನ್ 1ರ ಬೆಳಗ್ಗೆ 7 ಗಂಟೆಯವರೆಗೆ ಅನ್ವಯವಾಗಲಿದೆ. ಮಹಾರಾಷ್ಟ್ರ ಸರ್ಕಾರದ ಹೊಸ ನಿಯಮದಲ್ಲಿ ಹಾಲು ಸಂಗ್ರಹ, ಸಾಗಾಟ ಮತ್ತು ಸಂಸ್ಕರಣೆಗೆ ಸಡಿಲವಿರುತ್ತದೆ. ಆದರೆ ಇದರ ಚಿಲ್ಲರೆ ಮಾರಾಟಕ್ಕೆ ಸಮಯ ನಿಗದಿಯಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com