ಗಂಗಾ ನದಿಯಲ್ಲಿ ತೇಲಿ ಬಂದ ಮೃತದೇಹಗಳು: ಕೇಂದ್ರ ಸರ್ಕಾರ, ಯುಪಿ, ಬಿಹಾರ ಸರ್ಕಾರಕ್ಕೆ ಎನ್ ಹೆಚ್ ಆರ್ ಸಿ ನೋಟಿಸ್!

 ಎರಡು ರಾಜ್ಯಗಳಲ್ಲಿ ಗಂಗಾ ನದಿಯಲ್ಲಿ ತೇಲಿ ಬಂದ ಅನೇಕ ಮೃತದೇಹಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇಂದ್ರ ಜಲ ಶಕ್ತಿ ಸಚಿವಾಲಯ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ನೋಟಿಸ್ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎರಡು ರಾಜ್ಯಗಳಲ್ಲಿ ಗಂಗಾ ನದಿಯಲ್ಲಿ ತೇಲಿಬಂದ ಅನೇಕ ಮೃತದೇಹಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೇಂದ್ರ ಜಲ ಶಕ್ತಿ ಸಚಿವಾಲಯ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ನೋಟಿಸ್ ನೀಡಿದೆ.

ನಾಲ್ಕು ವಾರದೊಳಗೆ ಕ್ರಮ ತೆಗೆದುಕೊಂಡ ವರದಿಯೊಂದಿಗೆ ಬರುವಂತೆ ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಮತ್ತು ಉಭಯ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಆಯೋಗ ಇಂದು ನೀಡಿರುವ ನೋಟಿಸ್ ನಲ್ಲಿ ತಿಳಿಸಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ನಿವಾಸಿಗಳ ಪ್ರಕಾರ, ಉಜಿಯಾರ್, ಕುಲ್ಹಾಡಿಯಾ ಮತ್ತು ನರಹಿ ಪ್ರದೇಶದ ಭರೌಲಿ ಘಾಟ್‌ಗಳಲ್ಲಿ ಕನಿಷ್ಠ 52 ಶವಗಳು ತೇಲುತ್ತಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಬಿಹಾರದಲ್ಲೂ ಗಂಗಾ ನದಿಯಲ್ಲಿ ಮೃತದೇಹಗಳು ತೇಲುತ್ತಿರುವ ಬಗ್ಗೆ ವರದಿಯಾಗಿದೆ.

ಜನಸಾಮಾನ್ಯರಿಗೆ ಶಿಕ್ಷಣ ನೀಡುವಲ್ಲಿ ಕೇಂದ್ರೀಕೃತ ಪ್ರಯತ್ನಗಳನ್ನು ತೆಗೆದುಕೊಳ್ಳುವಲ್ಲಿ ಹಾಗೂ ಗಂಗಾ ನದಿಯಲ್ಲಿ ಅರ್ಧ ಸುಟ್ಟ ಅಥವಾ ಸುಟ್ಟ ಹೋದ ದೇಹಗಳ ಮುಳುಗಿಸುವಿಕೆಯನ್ನು ಪರಿಶೀಲಿಸುವಲ್ಲಿ ಸಾರ್ವಜನಿಕ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಎನ್ ಹೆಚ್ ಆರ್ ಸಿ ಹೇಳಿಕೆಯಲ್ಲಿ ತಿಳಿಸಿದೆ.

ಕೋವಿಡ್-19 ಎರಡನೇ ಅಲೆ ದೇಶದ ಮೇಲೆ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರಿದ್ದು, ದೇಶಾದ್ಯಂತ ಸ್ಮಶಾನಗಳು, 
ತುಂಬಿ ತುಳುಕುತ್ತಿವೆ. ಪವಿತ್ರ ಗಂಗಾ ನದಿಯಲ್ಲಿ ಮೃತದೇಹಗಳನ್ನು ತೇಲಿಬಿಡುವಂತಹ ಪದ್ದತಿ ಜಲ ಶಕ್ತಿ ಸಚಿವಾಲಯದ
ಶುದ್ಧ ಗಂಗಾ ಯೋಜನೆ ರಾಷ್ಟ್ರೀಯ ಮಿಶನ್  ಮಾರ್ಗದರ್ಶಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಎನ್ ಹೆಚ್ ಆರ್ ಸಿ
ಹೇಳಿದೆ.

ಕೋವಿಡ್-19 ನಿಂದ ಮೃತಪಟ್ಟ ಶವಗಳನ್ನು ಗಂಗಾ ನದಿಯಲ್ಲಿ ತೇಲಿಬಿಡಲಾಗಿದೆ ಎಂಬ ಅನೇಕ ಮಾಧ್ಯಮಗಳ ಶಂಕಿತ ವರದಿ ಆಧಾರದ  ಮೇಲೆ ಮೇ.11 ರಂದು ದೂರು ಸ್ವೀಕರಿಸಿರುವುದಾಗಿ ಹೇಳಿರುವ ಆಯೋಗ, ಹೀಗೆ ಮೃತದೇಹಗಳನ್ನು ತೇಲಿಬಿಡುವುದರಿಂದ ತಮ್ಮ ಪ್ರತಿನಿತ್ಯದ ಚಟುವಟಿಕೆಗಳಿಗಾಗಿ  ಗಂಗಾ ನದಿ ಮೇಲೆ ಅವಲಂಬಿತರಾಗಿರುವ ಎಲ್ಲರ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

ಈ ಮೃತದೇಹಗಳು ಒಂದು ವೇಳೆ ಕೋವಿಡ್-19 ನಿಂದ ಮೃತಪಟ್ಟವರಲ್ಲದಿದ್ದರೂ ಇಂತಹ ಪದ್ಧತಿ, ಘಟನೆಗಳು ಸಮಾಜಕ್ಕೆ ನಾಚಿಕೆಗೇಡು, ಒಟ್ಟಾರೇ ಸತ್ತ ವ್ಯಕ್ತಿಯ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಎನ್ ಹೆಚ್ ಆರ್ ಸಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com