ಗಂಟೆಗೆ 175 ಕಿ.ಮೀ ವೇಗದೊಂದಿಗೆ ಅತ್ಯಂತ ತೀವ್ರವಾಗಿರಲಿದೆ ಟೌಕ್ಟೇ ಚಂಡಮಾರುತ: ಐಎಂಡಿ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮೇ.17 ರಂದು ಗುಜರಾತ್ ಗೆ ಟೌಕ್ಟೇ ಚಂಡಮಾರುತ ಅಪ್ಪಳಿಸಲಿದೆ, ಈ ಬಳಿಕ ಒಂದು ದಿನದ ನಂತರ ಗುಜರಾತ್ ನ ಕಡಲ ತೀರವನ್ನು ದಾಟಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ)  ಮಾಹಿತಿ ನೀಡಿದೆ. 

Published: 14th May 2021 11:05 PM  |   Last Updated: 15th May 2021 02:43 PM   |  A+A-


Tauktae likely to intensify into 'very severe cyclonic' storm with wind speed up to 175 kmph: IMD

ಟೌಕ್ಟೇ ಚಂಡಮಾರುತ

Posted By : Srinivas Rao BV
Source : The New Indian Express

ನವದೆಹಲಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮೇ.17 ರಂದು ಗುಜರಾತ್ ಗೆ ಟೌಕ್ಟೇ ಚಂಡಮಾರುತ ಅಪ್ಪಳಿಸಲಿದೆ, ಈ ಬಳಿಕ ಒಂದು ದಿನದ ನಂತರ ಗುಜರಾತ್ ನ ಕಡಲ ತೀರವನ್ನು ದಾಟಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ)  ಮಾಹಿತಿ ನೀಡಿದೆ. 

ಹವಾಮಾನ ಸ್ಥಿತಿಯಿಂದ ವಾಯುಭಾರ ಕುಸಿತ ಕಂಡಿದ್ದು, ಶನಿವಾರ ಮೇ.15 ರಂದು ಬೆಳಿಗ್ಗೆಯಿಂದ ಟೌಕ್ಟೇ ಚಂಡಮಾರುತ ತೀವ್ರಗೊಳ್ಳಲಿದೆ. ಮೇ.16-19 ವರೆಗೆ ಪ್ರತಿ ಗಂಟೆಗೆ 150-160 ರಿಂದ ಪ್ರಾರಂಭಿಸಿ 175 ಕಿ.ವೇಗದಲ್ಲಿ ಈ ಚಂಡಮಾರುತ ಸಂಚರಿಸಲಿದೆ. 

ಗುಜರಾತ್ ನ ಕಡಲ ತೀರವನ್ನು ಮೇ.18 ಕ್ಕೆ ತಲುಪಲಿದ್ದು, ಐಎಂಡಿ ಎಚ್ಚರಿಕೆ ನೀಡಿದೆ. ಮೇ.15 ರಂದು ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಮೇ.15 ರಂದು ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಇನ್ನು ಕರ್ನಾಟಕದ ಕಡಲ ತೀರದ ಜಿಲ್ಲೆಗಳು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೇ.15-16 ರಂದು ಮಧ್ಯಮ, ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದ್ದು ಕೊಂಕಣ, ಗೋವಾ, ಗುಜರಾತ್ ನ ಸೌರಾಷ್ಟ್ರ ಜಿಲ್ಲೆಗಳಲ್ಲೂ ಮಳೆಯಾಗಲಿವೆ. ಈ ಚಂಡಮಾರುತಕ್ಕೆ ಟೌಕ್ಟೇ ಎಂಬ ಹೆಸರನ್ನು ಮ್ಯಾನ್ಮಾರ್ ನೀಡುದ್ದು ಇದಕ್ಕೆ ಗೆಕ್ಕೊ (ಹಲ್ಲಿ ಎಂಬ ಅರ್ಥ) ಭಾರತದಲ್ಲಿ ಇದು ಈ ವರ್ಷದ ಮೊದಲ ಚಂಡಮಾರುತವಾಗಿರಲಿದೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp