ಕೋವಿಡ್ ರೋಗಿಗಳ ಚಿಕಿತ್ಸೆಗೆ ಡಿಆರ್ ಡಿಒದಿಂದ 2ಡಯಾಕ್ಸಿ-ಡಿ-ಗ್ಲೂಕೋಸ್: ಮುಂದಿನ ವಾರ ಬಿಡುಗಡೆ

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ 2ಡಯಾಕ್ಸಿ-ಡಿ-ಗ್ಲೂಕೋಸ್ 10 ಸಾವಿರ ಡೋಸ್ ಗಳ ಮೊದಲ ಭಾಗವನ್ನು ಮುಂದಿನ ವಾರ ಆರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಿಳಿಸಿದೆ.

Published: 15th May 2021 07:37 AM  |   Last Updated: 15th May 2021 02:46 PM   |  A+A-


Medicice approved

ಔಷಧಿಯ ಅನುಮೋದನೆ

Posted By : Sumana Upadhyaya
Source : ANI

ನವದೆಹಲಿ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ 2ಡಯಾಕ್ಸಿ-ಡಿ-ಗ್ಲೂಕೋಸ್ 10 ಸಾವಿರ ಡೋಸ್ ಗಳ ಮೊದಲ ಭಾಗವನ್ನು ಮುಂದಿನ ವಾರ ಆರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ತಿಳಿಸಿದೆ.

ಭವಿಷ್ಯದಲ್ಲಿ ಹೆಚ್ಚು ಬಳಕೆಗೆ ಲಭ್ಯವಾಗುವಂತೆ ಉತ್ಪಾದನೆಯನ್ನು ಹೆಚ್ಚಿಸಲು ಔಷಧ ತಯಾರಕರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಡಾ. ಅನಂತ್ ನಾರಾಯಣ್ ಭಟ್ ನೇತೃತ್ವದ ಡಿಆರ್ ಡಿಒ ವಿಜ್ಞಾನಿಗಳ ತಂಡವೊಂದು ಔಷಧಿಯನ್ನು ಅಭಿವೃದ್ಧಿಪಡಿಸಿದೆ ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಕರ್ನಾಟಕ ಆರೋಗ್ಯ ಮಂತ್ರಿ ಡಾ ಕೆ ಸುಧಾಕರ್ ಡಿಆರ್ ಡಿಒ ಕ್ಯಾಂಪಸ್ ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿಜ್ಞಾನಿಗಳು ಸಚಿವರಿಗೆ 2-ಡಿಜಿ ಔಷಧಿ ಬಗ್ಗೆ ವಿವರಿಸಿದ್ದು ಕೋವಿಡ್ ವಿರುದ್ಧ ಹೋರಾಡಲು ಇದು ಬಹಳ ಉಪಯೋಗವಾಗಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಡಾ ಸುಧಾಕರ್ ಅವರು ಐಐಎಸ್ಸಿಯ ವಿಜ್ಞಾನಿಗಳ ತಂಡದ ಜೊತೆ ಸಂವಾದ ನಡೆಸಿದ್ದರು.

ಡಿಆರ್ ಡಿಒ ಅಭಿವೃದ್ಧಿಪಡಿಸಿರುವ 2ಡಯಾಕ್ಸಿ-ಡಿ-ಗ್ಲೂಕೋಸ್ ಔಷಧಿ ಕೋವಿಡ್ ವಿರುದ್ಧ ಸೆಣಸಾಡಲು ಬಹಳ ಉಪಕಾರಿಯಾಗಲಿದ್ದು ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಚಿಕಿತ್ಸೆಗೆ ಮತ್ತು ರೋಗಿಗಳು ಹೆಚ್ಚು ಆಕ್ಸಿಜನ್ ಮೇಲೆ ಅವಲಂಬಿತವಾಗುವುದನ್ನು ಇದು ತಪ್ಪಿಸಬಹುದು. ಪಿಎಂ-ಕೇರ್ಸ್ ಫಂಡ್ ನಡಿ 322.5 ಕೋಟಿ ರೂಪಾಯಿ ವೆಚ್ಚದಲ್ಲಿ 1.5 ಲಕ್ಷ ಘಟಕಗಳನ್ನು ಸಂಗ್ರಹಿಸಲಾಗುತ್ತದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ಸಂಶೋಧಿಸಲಾಗಿರುವ 2ಡಯಾಕ್ಸಿ-ಡಿ-ಗ್ಲೂಕೋಸ್ ಔಷಧ ತೆಗೆದುಕೊಂಡರೆ ಸೋಂಕಿತರ ಆಕ್ಸಿಜನ್ ಬಳಕೆ ಪ್ರಮಾಣ ತಗ್ಗಲಿದೆ ಎಂದು ಡಿಆರ್‌ಡಿಒ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಸದ್ಯದಲ್ಲೇ ರಾಜ್ಯದಲ್ಲೂ ಇದನ್ನು ಪರಿಚಯಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ. ಸುಧಾಕರ್ ತಿಳಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp