ಪಶ್ಚಿಮ ಬಂಗಾಳ ರಾಜ್ಯಪಾಲ ಜಿಗಣೆ ಇದ್ದಂಗೆ; ಹುಚ್ಚು ನಾಯಿ ತರ ಓಡಾಡ್ತಿದಾರೆ: ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ

ನಾರದ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ವು ತೃಣಮೂಲ ಕಾಂಗ್ರೆಸ್‌ ನ ನಾಲ್ವರು ಮುಖಂಡರ ಬಂಧನ ನಂತರ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ವಿರುದ್ಧ ಟಿಎಂಸಿ ಮುಖಂಡರು ಮುಗಿಬಿದಿದ್ದು, ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯಪಾಲರು, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ಪಶ್ಚಿಮ ಬಂಗಾಳ ರಾಜ್ಯಪಾಲರು, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ

ಕೊಲ್ಕತ್ತಾ: ನಾರದ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ತೃಣಮೂಲ ಕಾಂಗ್ರೆಸ್‌ ನ ನಾಲ್ವರು ಮುಖಂಡರನ್ನು ಬಂಧಿಸಿದ ನಂತರ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ವಿರುದ್ಧ ಟಿಎಂಸಿ ಮುಖಂಡರು ಮುಗಿಬಿದಿದ್ದು, ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

ರಾಜ್ಯಪಾಲ ಜಗದೀಪ್ ಧನಕರ್ ವಿಚಿತ್ರ ವರ್ತನೆಯ ಜಿಗಣೆ ಇದ್ದಂಗೆ. ಹುಚ್ಚು ನಾಯಿಯಂತೆ ಅಲ್ಲಿ ಇಲ್ಲಿ ಸುತ್ತುತಿರುತ್ತಾರೆ. ಒಂದು ನಿಮಿಷವೂ ಅವರು ಇಲ್ಲಿ ಇರಬಾರದು ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಜೊತೆಗೆ ಸಮಾಲೋಚಿಸದೆ ರಾಜ್ಯಪಾಲರು ಇದನ್ನು ಪ್ರತೀಕಾರವಾಗಿ ಮಾಡಿದ್ದಾರೆ. 2024 ರ ಚುನಾವಣೆಗೆ ಮುನ್ನ ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ, ಅದಕ್ಕಾಗಿಯೇ ಅವರು ಟಿಎಂಸಿ ವಿರುದ್ಧ ಏನು ಇಷ್ಟಪಡುತ್ತಾರೋ ಅದನ್ನು ಮಾಡುತ್ತಿದ್ದಾರೆ ಎಂದರು.

ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ. ಕೋವಿಡ್-19 ಸಂದರ್ಭದಲ್ಲಿ ಪೊಲೀಸರು ಅನಗತ್ಯವಾಗಿ ಯಾವುದೇ ವ್ಯಕ್ತಿಯನ್ನು
ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರ ಹೊರತಾಗಿಯೂ ಸಿಬಿಐ ಮತ್ತು ಪೊಲೀಸರು ನಮ್ಮ ಸದಸ್ಯರನ್ನು ಬಂಧಿಸಿದ್ದಾರೆ ಎಂದು ಅವರು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com