ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊರೋನಾ ಉಲ್ಬಣ: ಅಕ್ಟೋಬರ್ ವರೆಗೂ ದೇಶದಿಂದ ಕೋವಿಡ್ ಲಸಿಕೆ ರಫ್ತು ಇಲ್ಲ!

ಮುಂದಿನ ಅಕ್ಟೋಬರ್ ವರೆಗೂ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಭಾರತ ದೊಡ್ಡಮಟ್ಟದಲ್ಲಿ ಕೊರೋನಾ ಲಸಿಕೆ ಪೂರೈಕೆ ಅಥವಾ ರಫ್ತು ಮಾಡದಿರಲು ತೀರ್ಮಾನಿಸಿದೆ.

ನವದೆಹಲಿ: ಮುಂದಿನ ಅಕ್ಟೋಬರ್ ವರೆಗೂ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಭಾರತ ದೊಡ್ಡಮಟ್ಟದಲ್ಲಿ ಕೊರೋನಾ ಲಸಿಕೆ ಪೂರೈಕೆ ಅಥವಾ ರಫ್ತು ಮಾಡದಿರಲು ತೀರ್ಮಾನಿಸಿದೆ.

ಭಾರತ ಈಗ ತನ್ನ ಅವಶ್ಯಕತೆಯನ್ನು ಬಳಸಿಕೊಳ್ಳಲು ಹಗಲು-ಇರುಳು ಶ್ರಮಿಸುತ್ತಿದೆ. ಮುಂದಿನ ಅಕ್ಟೋಬರ್ ವರೆಗೆ ಯಾವುದೇ ದೇಶಗಳಿಗೆ ಲಸಿಕೆ ರಫ್ತು ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ತಿಂಗಳ ಹಿಂದೆಯೇ ಭಾರತ ವಿದೇಶಗಳಿಗೆ ಲಸಿಕೆ ರಫ್ತು ಮಾಡುವುದನ್ನು ನಿಲ್ಲಿಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿದೆ.

ನೆರೆಯ ಶ್ರೀಲಂಕಾ ಬಾಂಗ್ಲಾದೇಶ ಮತ್ತು ಆಫ್ರಿಕಾ ದೇಶಗಳಿಗೆ 1 ತಿಂಗಳ ಹಿಂದೆ ಭಾರತ ದೊಡ್ಡ ಮಟ್ಟದಲ್ಲಿ ಲಸಿಕೆಯನ್ನು ಪೂರೈಕೆ ಮಾಡಿತ್ತು. ಆದನಂತರ ದೇಶದಲ್ಲಿ ಕಳೆದ ಒಂದೆರಡು ತಿಂಗಳಿಂದ ಕೊರೋನಾ ಎರಡನೇ ಅಲೆ ಕಾಣಿಸಿಕೊಂಡು ಪರಿಣಾಮ ದೇಶದ ಎಲ್ಲರಿಗೆ ಸರಿಯಾದ ಸಮಯಕ್ಕೆ ಲಸಿಕೆ ದೊರಕದೆ ಪರಿತಪಿಸುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಭಾರತ ಮುಂದಿನ ಅಕ್ಟೋಬರ್ ವರೆಗೆ ದೊಡ್ಡ ಮಟ್ಟದಲ್ಲಿ ಯಾವುದೇ ರಾಷ್ಟ್ರಕ್ಕೆ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡದಿರಲು ತೀರ್ಮಾನಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com