ಲಿವ್-ಇನ್ ರಿಲೇಷನ್ ಶಿಪ್ ನೈತಿಕವಾಗಿ, ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ: ಪಂಜಾಬ್-ಹರಿಯಾಣ ಹೈಕೋರ್ಟ್

ಲಿವ್-ಇನ್-ರಿಲೇಷನ್ ಶಿಪ್ ಗಳು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ. ಇದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿದ್ದ ಅಭಿಪ್ರಾಯಕ್ಕೆ ವಿರುದ್ಧವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಂಡೀಘರ್/ನವದೆಹಲಿ: ಲಿವ್-ಇನ್-ರಿಲೇಷನ್ ಶಿಪ್ ಗಳು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ. ಇದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿದ್ದ ಅಭಿಪ್ರಾಯಕ್ಕೆ ವಿರುದ್ಧವಾಗಿದೆ.

ಪರಾರಿಯಾಗಿದ್ದ ಜೋಡಿ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ  ಹೈಕೋರ್ಟ್ ಈ ಅಭಿಪ್ತಾಯ ವ್ಯಕ್ತಪಡಿಸಿದೆ.

ಗುಲ್ಜಾ ಕುಮಾರಿ (19) ಮತ್ತು ಗುರ್ವಿಂದರ್ ಸಿಂಗ್ (22) ಎನ್ನುವವರು ತಾವು ಒಟ್ಟೀಗೇ ವಾಸಿಸುತ್ತಿದ್ದು ಶೀಘ್ರದಲ್ಲೇ ಮದುವೆಯಾಗಲು ಉದ್ದೇಶಿಸಿದ್ದೇವೆ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅಲ್ಲದೆ ಗುಲ್ಜಾ ಕುಮಾರಿ ಕುಟುಂಬದಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ನ್ಯಾಯಮೂರ್ತಿ ಎಚ್.ಎಸ್. ಮದನ್ ಅವರು ತಮ್ಮ ಮೇ 11 ರ ಆದೇಶದಲ್ಲಿ, "ವಾಸ್ತವವಾಗಿ, ಪ್ರಸ್ತುತ ಅರ್ಜಿಯನ್ನು ಸಲ್ಲಿಸಿರುವ ವ ಅರ್ಜಿದಾರರು ತಮ್ಮ ಲಿವ್-ಇನ್-ರಿಲೇಷನ್ ಶಿಪ್ ಗೆ ಸಮ್ಮತದ ಮುದ್ರೆ ಬಯಸುತ್ತಿದ್ದಾರೆ, ಅದು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ ಆದರೆ ರಕ್ಷಣೆ ಆದೇಶವನ್ನು ರವಾನಿಸಬಹುದು. " ಎಂದಿದ್ದಾರೆ ಮಾತ್ರವಲ್ಲದೆ "ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಅವರ ಆದೇಶದಲ್ಲಿ ತಿಳಿಸಲಾಗಿದೆ.

ಅರ್ಜಿದಾರರ ಪ್ರತಿನಿಧಿ ಜೆ ಎಸ್ ಠಾಕೂರ್ ಪ್ರಕಾರ, ಸಿಂಗ್ ಮತ್ತು ಕುಮಾರಿ ತಾರ್ನ್ ತರಣ್ ಜಿಲ್ಲೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಲೂಧಿಯಾನದಲ್ಲಿರುವ ಯುವತಿಯ  ಪೋಷಕರು ಅವರ ಸಂಬಂಧವನ್ನು ಒಪ್ಪಲಿಲ್ಲ. ಕುಮಾರಿ ಅವರ ವಯಸ್ಸಿನ ವಿವರಗಳನ್ನು ಹೊಂದಿರುವ ದಾಖಲೆಗಳು ಆಕೆಯ ಕುಟುಂಬದ ವಶದಲ್ಲಿರುವುದರಿಂದ ಜೋಡಿಗೆ ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದು ಠಾಕೂರ್ ಹೇಳಿದರು.

ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದೆ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ವಯಸ್ಕ ಜೋಡಿಯು ಮದುವೆ ಆಗದೆ ಒಟ್ಟಿಗೆ ವಾಸಿಸುವ ಹಕ್ಕಿದೆ ಎಂದು ಮೇ 2018 ರಲ್ಲಿ ಸುಪ್ರೀಂ ಕೋರ್ಟ್‌ನ ಮೂರು ನ್ಯಾಯಾಧೀಶರ ಪೀಠ ಹೇಳಿತ್ತು. ಲಿವ್-ಇನ್ ರಿಲೇಷನ್ ಶಿಪ್ ಗಳನ್ನು ಈಗ ಶಾಸಕಾಂಗವು ಗುರುತಿಸಿದೆ ಎಂದು ಉನ್ನತ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ ಮತ್ತು ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ, 2005 ರ ನಿಬಂಧನೆಗಳ ಅಡಿಯಲ್ಲಿ ಇದಕ್ಕೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಅಲ್ಲದೆ ನಟಿ, ಬಿಜೆಪಿ ನಾಯಕಿ ಖುಷ್ಬೂ ಅವರು ಸಲ್ಲಿಸಿದ ಮತ್ತೊಂದು ಹೆಗ್ಗುರುತು ಪ್ರಕರಣದಲ್ಲಿ, ಲೈವ್-ಇನ್ ಸಂಬಂಧಗಳನ್ನು ಅನುಮತಿಸಲಾಗಿದೆ ಮತ್ತು ಇಬ್ಬರು ವಯಸ್ಕರು ಒಟ್ಟಿಗೆ ವಾಸಿಸುವದನ್ನು  ಕಾನೂನುಬಾಹಿರವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com