ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ: ಒಂದೇ ಕ್ಷಣದಲ್ಲಿ ಬರುತ್ತೆ ಫಲಿತಾಂಶ!

ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಒಂದೇ ಕ್ಷಣದಲ್ಲಿ ಫಲಿತಾಂಶ ಬರಲಿದೆ.
ಕೋವಿಡ್-19 ಟೆಸ್ಟಿಂಗ್ (ಸಂಗ್ರಹ ಚಿತ್ರ)
ಕೋವಿಡ್-19 ಟೆಸ್ಟಿಂಗ್ (ಸಂಗ್ರಹ ಚಿತ್ರ)

ನವದೆಹಲಿ: ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಒಂದೇ ಕ್ಷಣದಲ್ಲಿ ಫಲಿತಾಂಶ ಬರಲಿದೆ. ವಿಜ್ಞಾನಿಗಳು ಹೊಸ ಮಾದರಿಯ ಸಂವೇದಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಈಗಿನ ಕೋವಿಡ್-19 ಪತ್ತೆಯ ವಿಧಾನಗಳಿಗಿಂತಲೂ ಇದು ತ್ವರಿತವಾಗಿ ಫಲಿತಾಂಶವನ್ನು ನೀಡಲಿದೆ.

ಕೊರೋನಾ ವೈರಸ್ ಇರುವಿಕೆಯನ್ನು ಪತ್ತೆ ಮಾಡುವುದಕ್ಕೆ, ಜೆನೆಟಿಕ್ ಅಂಶಗಳ ಪ್ರತಿಗಳಂತಹ  ವೈರಲ್ ಬಯೋಮೇಕರ್ಸ್ ನ ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ. ಇದನ್ನು ಪಾಲಿಮರೇಸ್ ಚೈನ್ ರಿಯಾಕ್ಷನ್ ಎಂದು ಕರೆಯಲ್ಪಡುವ ತಂತ್ರವನ್ನು ಪ್ರಯೋಗಿಸಿ ಮಾಡಲಾಗುತ್ತದೆ, ಅಥವಾ ಟಾರ್ಗೆಟ್ ಬಯೋಮೇಕರ್ ಗೆ ಬೈಂಡಿಂಗ್ ಸಿಗ್ನಲ್ ನ್ನು ಹೆಚ್ಚಿಸುವ ವಿಧಾನವನ್ನು ಅನುಸರಿಸಲಾಗುತ್ತದೆ.

ಜರ್ನಲ್ ಆಫ್ ವ್ಯಾಕ್ಯೂಮ್ ಸೈನ್ಸ್& ಟೆಕ್ನಾಲಜಿಯಲ್ಲಿ ವಿವರಿಸಲಾಗಿರುವ ಸೂಕ್ಷ್ಮ ಪರೀಕ್ಷಾ ವಿಧಾನದಲ್ಲಿ ಮೇಲೆ ಹೇಳಿರುವ ಎರಡನೇ ರೀತಿಯ ವಿಧಾನವನ್ನು ಅತ್ಯಾಧುನಿಕವಾಗಿ ಬಳಕೆ ಮಾಡಲಾಗುತ್ತದೆ

ಕೆಲವು ರಿವರ್ಸ್ ಟ್ರಾನ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ ಟಿ-ಪಿಸಿಆರ್) ಟೆಸ್ಟ್ ಗಳನ್ನು ಕೋವಿಡ್-19 ಪರೀಕ್ಷೆಗೆ ಹೆಚ್ಚು ಅಧಿಕೃತ ಎಂದು ಪರಿಗಣಿಸಲಾಗಿದೆ. ಕೆಲವು ಪಿಸಿಆರ್ ಟೆಸ್ಟ್ ಗಳು ಕೆಲವೇ ಗಂಟೆಗಳಲ್ಲಿ ಫಲಿತಾಂಶವನ್ನು ನೀಡಿದರೆ ಮತ್ತೆ ಕೆಲವು ದಿನಗಳ ನಂತರ ಸಿಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com