ಕೋವಿಡ್-19 ಹೆಚ್ಚಳಕ್ಕೆ ಧಾರ್ಮಿಕ ಕಾರ್ಯಕ್ರಮ, ವಲಸಿಗರು ಕಾರಣ: ಐಸಿಎಂಆರ್

ಧಾರ್ಮಿಕ ಕಾರ್ಯಕ್ರಮಗಳು, ವಲಸೆ ಕೋವಿಡ್-19 ಎರಡನೇ ಅಲೆ ಹೆಚ್ಚಳಕ್ಕೆ ಕಾರಣ ಎಂದು ಐಸಿಎಂಆರ್ ನೇತೃತ್ವದ ಅಧ್ಯಯನ ವರದಿಯೊಂದು ಹೇಳಿದೆ. 
ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಭಾಗಿಯಾದ ಜನತೆ (ಸಂಗ್ರಹ ಚಿತ್ರ)
ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಭಾಗಿಯಾದ ಜನತೆ (ಸಂಗ್ರಹ ಚಿತ್ರ)

ನವದೆಹಲಿ: ಧಾರ್ಮಿಕ ಕಾರ್ಯಕ್ರಮಗಳು, ವಲಸೆ ಕೋವಿಡ್-19 ಎರಡನೇ ಅಲೆ ಹೆಚ್ಚಳಕ್ಕೆ ಕಾರಣ ಎಂದು ಐಸಿಎಂಆರ್ ನೇತೃತ್ವದ ಅಧ್ಯಯನ ವರದಿಯೊಂದು ಹೇಳಿದೆ. 

ವಿದೇಶಿ ಪ್ರಯಾಣಿಕರು ಹಾಗೂ ದೇಶದ ಆಂತರಿಕವಾಗಿ ವಲಸೆ ಕಾರ್ಮಿಕರು, ಧಾರ್ಮಿಕ ಕಾರ್ಯಕ್ರಮಗಳಿಂದ ಕೋವಿಡ್-19 ಪ್ರಸರಣಗೊಂಡಿದ್ದು ಎರಡನೇ ಅಲೆ ಹೆಚ್ಚಳಕ್ಕೆ ಕಾರಣ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. 

ಮಿಂಟ್ ಅಧ್ಯಯನ ವರದಿಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದ್ದು, SARS-CoV-2 ರೂಪಾಂತರಿಗಳಲ್ಲಿ ಕಂಡುಬರುತ್ತಿರುವ ಅಮೀನೋ ಆಸಿಡ್ ರೂಪಾಂತರಗಳು ಈಗ ಪ್ರಸರಣ ಹೊಂದುತ್ತಿರುವ ತಳಿಗಳಲ್ಲಿ ಹೋಸ್ಟ್ ಅಡಾಪ್ಟೇಷನ್ ಗೆ ಸಜ್ಜಾಗಿದ್ದು, ವಿಕಾಸಾತ್ಮಕ ಪ್ರವೃತ್ತಿ ಹೊಂದಿದೆ ಎಂದು ಹೇಳಿದೆ. 

ಮೂರು ರೂಪಾಂತರಿಗಳಾದ B.1.1.7 ವಂಶಾವಳಿ ಆತಂಕಕ್ಕೆ ಕಾರಣವಾಗಿದೆ. B.1.351 ವಂಶಾವಳಿ ಭಾರತದಲ್ಲಿ ವರದಿಯಾಗಿದೆ. ಆಂಟಿಜೆನಿಕ್ ಡ್ರಿಫ್ಟ್, ಹರಡುವಿಕೆ ಮತ್ತು ರೋಗನಿರೋಧಕವನ್ನೂ ಮೀರಿಸುವ ಸಾಮರ್ಥ್ಯದಿಂದಾಗಿ (ಪ್ರಮುಖವಾಗಿ B.1.351) ಇವೆರಡೂ ಆತಂಕಗಳಿಗೆ ಕಾರಣವಾಗಿದೆ ಎಂದು ಐಸಿಎಂಆರ್ ಹೇಳಿದೆ. ಭಾರತದಲ್ಲಿ ಇತ್ತೀಚೆಗೆ ಡಬಲ್ ಮ್ಯುಟೆಂಟ್ (ಡಬಲ್ ರೂಪಾಂತರಿ) ವೈರಾಣು ಎಂದೇ ಕುಖ್ಯಾತವಾಗಿರುವ B.1.617 ವೈರಾಣು ಪತ್ತೆಯಾಗಿದ್ದು ಹೆಚ್ಚಿನ ಪ್ರಸರಣ ಪ್ರಮಾಣದ ಸಾಮರ್ಥ್ಯ ಹೊಂದಿದೆ. ಡಬಲ್ ಮ್ಯುಟೆಂಟ್ ವೈರಾಣುಗಳು ಮಹಾರಾಷ್ಟ್ರ, ತೆಲಂಘಾಣ, ಆಂಧ್ರಪ್ರದೇಶ, ಅಸ್ಸಾಂಗಳಲ್ಲಿ ಮಾರ್ಚ್ ಹಾಗೂ ಜುಲೈ2020 ರಲ್ಲಿ ಪತ್ತೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com