ಕೊರೋನಾ ಎದುರಿಸುವ ಕಾರ್ಯತಂತ್ರ ಕ್ರಿಯಾತ್ಮಕ ಮತ್ತು ನವೀನವಾಗಿರಬೇಕು: ಪ್ರಧಾನಿ ಮೋದಿ

ಕೋವಿಡ್ -19 ಅನ್ನು ಎದುರಿಸುವ ಕಾರ್ಯತಂತ್ರವು ಕ್ರಿಯಾತ್ಮಕ, ನವೀನ ಮತ್ತು ನಿರಂತರವಾಗಿ ಅಪ್‌ಗ್ರೇಡ್ ಆಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ. 
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೋವಿಡ್ -19 ಅನ್ನು ಎದುರಿಸುವ ಕಾರ್ಯತಂತ್ರವು ಕ್ರಿಯಾತ್ಮಕ, ನವೀನ ಮತ್ತು ನಿರಂತರವಾಗಿ ಅಪ್‌ಗ್ರೇಡ್ ಆಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ. 

ವೈರಸ್‌ನಿಂದ ಉಂಟಾಗುವ ಅಪಾಯಗಳ ಬಗ್ಗೆ ಒತ್ತಿಹೇಳಿದ ಪ್ರಧಾನಿ ಮೋದಿ, ಈ ವೈರಸ್ ಅಗೋಚರವಾಗಿರುತ್ತದೆ ಮತ್ತು ಆಗಾಗ್ಗೆ ರೂಪಾಂತರಗೊಳ್ಳುತ್ತದ ಎಂದಿದ್ದಾರೆ.

ಇಂದು ಮತ್ತೆ 10 ಜಿಲ್ಲಾಧಿಕಾರಿಗಳು(ಡಿಎಂ) ಮತ್ತು ಕ್ಷೇತ್ರ ಅಧಿಕಾರಿಗಳೊಂದಿಗಿನ ಸಂವಾದ ನಡೆಸಿದ ಪ್ರಧಾನಿ ಮೋದಿ, ಹಿಂದಿಯಲ್ಲಿ ವೈರಸ್ ಅನ್ನು "ಧೂರ್ತ್" ಮತ್ತು "ಬಹುರೂಪಿಯಾ" ಎಂದು ವಿವರಿಸಿದರು. ಅಲ್ಲದೆ ಯುವಕರು ಮತ್ತು ಮಕ್ಕಳಿಗೆ ಎದುರಾಗುವ ಅಪಾಯಗಳ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.

ಲಸಿಕೆ ವ್ಯರ್ಥವಾಗುವುದನ್ನು ತಡೆಗಟ್ಟುವ ಅವಶ್ಯಕತೆಯಿದೆ. ವ್ಯರ್ಥವಾಗುವ ಪ್ರತಿ ಡೋಸ್ ರೋಗದ ವಿರುದ್ಧ ರಕ್ಷಣೆ ನೀಡುವುದನ್ನು ನಿರಾಕರಿಸಿದಂತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೇ 18ರಂದು ಅತ್ಯಂತ ಹೆಚ್ಚು ಕೊರೋನಾ ಪ್ರಕರಣಗಳಿರುವ ಕರ್ನಾಟಕ, ಬಿಹಾರ, ತಮಿಳುನಾಡು, ಅಸ್ಸಾಂ, ಚಂಡೀಗಢ, ಉತ್ತರಖಂಡ, ಮಧ್ಯಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ದೆಹಲಿ ರಾಜ್ಯಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು‌. ಇಂದು ಉಳಿದ 10 ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com