ಮೋದಿ ಬದಲು ಸಿಎಂ ಫೋಟೋದೊಂದಿಗೆ ಲಸಿಕೆ ಪ್ರಮಾಣಪತ್ರ ನೀಡಲು ಆರಂಭಿಸಿದ ಛತ್ತೀಸ್ ಗಢ

18 ವರ್ಷಕ್ಕಿಂತ ಮೇಲ್ಪಟ್ಟ ಕೋವಿಡ್ ಲಸಿಕೆ ಫಲಾನುಭವಿಗಳಿಗೆ ಛತ್ತೀಸ್ ಗಢ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಬದಲು ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರ ಫೋಟೋ ಇರುವ ಲಸಿಕೆ ಪ್ರಮಾಣಪತ್ರಗಳನ್ನು ನೀಡಲು ಆರಂಭಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಛತ್ತೀಸ್ ಗಢ: 18 ವರ್ಷಕ್ಕಿಂತ ಮೇಲ್ಪಟ್ಟ ಕೋವಿಡ್ ಲಸಿಕೆ ಫಲಾನುಭವಿಗಳಿಗೆ ಛತ್ತೀಸ್ ಗಢ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಬದಲು ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರ ಫೋಟೋ ಇರುವ ಲಸಿಕೆ ಪ್ರಮಾಣಪತ್ರಗಳನ್ನು ನೀಡಲು ಆರಂಭಿಸಿದೆ.

18-44 ವರ್ಷದೊಳಗಿನವರಿಗೆ ಸಿಎಂ ಭೂಪೇಶ್ ಬಘೆಲ್ ಅವರ ಫೋಟೋ ಇರುವ ಲಸಿಕೆ ಪ್ರಮಾಣಪತ್ರ ನೀಡಲಾಗುತ್ತಿದೆ. ದೇಶಾದ್ಯಂತ ಈವರೆಗೆ ಲಸಿಕೆ ಪ್ರಮಾಣಪತ್ರಗಳನ್ನು ಪ್ರಧಾನಿ ಮೋದಿ ಅವರ ಸಂದೇಶದೊಂದಿಗೆ ಅವರ ಫೋಟೋ ಇರುವ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ.

ದೇಶಾದ್ಯಂತ ಲಸಿಕೆ ಹಾಕಲು ಕೇಂದ್ರದ ಕೋವಿನ್ ಪೋರ್ಟಲ್ ಅನ್ನು ಬಳಸಲಾಗುತ್ತಿದೆ. ಆದರೆ ಛತ್ತೀಸ್ ಗಢದಲ್ಲಿ 18-44 ವರ್ಷ ವಯಸ್ಸಿನವರಿಗೆ ಲಸಿಕೆ ಹಾಕಲು ರಾಜ್ಯ ಸರ್ಕಾರ ಕೋವಿನ್ ಬದಲಿಗೆ ತನ್ನದೇ ಆದ ಲಸಿಕೆ ವೆಬ್‌ಸೈಟ್ ಸಿಜಿಟಿಇಇಕೆಎ ಅನ್ನು ಪ್ರಾರಂಭಿಸಿದೆ.

ಛತ್ತೀಸ್ ಗಢ ಸರ್ಕಾರದ ಲಸಿಕೆ ಪೋರ್ಟಲ್‌ನಲ್ಲಿ ನೋಂದಣಿ ಮಾಡಿದ ನಂತರ ಲಸಿಕೆ ಪಡೆಯುತ್ತಿರುವ ಜನರಿಗೆ ಭೂಪೇಶ್ ಬಘೆಲ್ ಅವರ ಫೋಟೋ ಇರುವ ಪ್ರಮಾಣಪತ್ರ ನೀಡಲಾಗುತ್ತಿದೆ. ಆದರೆ, ಇದು ಬಿಜೆಪಿಯ ಅಸಮಾಧಾನಕ್ಕೆ ಕಾರಣವಾಗಿದೆ.

ಲಸಿಕೆ ಪ್ರಮಾಣಪತ್ರದಲ್ಲಿ ಸಿಎಂ ಫೋಟೋ ಹಾಕುತ್ತಿರುವುದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ವಿನಾಶಕಾರಿ ಸಮಯದಲ್ಲೂ ಕಾಂಗ್ರೆಸ್ ತನ್ನ ಪ್ರಚಾರದ ಲಾಭಕ್ಕಾಗಿ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com