ಜುಲೈ ವೇಳೆಗೆ ಕೋವಿಡ್ ಸೋಂಕು ಪ್ರಮಾಣ 2 ನೇ ಅಲೆಗೂ ಮುಂಚಿದ್ದ ಪರಿಸ್ಥಿತಿಗೆ ಇಳಿಕೆ ಸಾಧ್ಯತೆ!

ಜಲೈ ವೇಳೆಗೆ 2 ನೇ ಅಲೆಗೂ ಮುಂಚಿದ್ದ ಪರಿಸ್ಥಿತಿಗೆ ಕೋವಿಡ್ ಸೋಂಕು ಪ್ರಸರಣ ಇಳಿಕೆಯಾಗಲಿದೆ ಎಂದು ಐಐಟಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಗಣಿತದ ಮಾದರಿಯಿಂದ ವಿಶ್ಲೇಷಿಸಿದ್ದಾರೆ. 
ಮುಂಬೈ ನಲ್ಲಿ ಕೋವಿಡ್-19 ಲಸಿಕೆ ಪಡೆಯುತ್ತಿರುವ  ಆರೋಗ್ಯ ಕಾರ್ಯಕರ್ತೆ (ಸಂಗ್ರಹ ಚಿತ್ರ)
ಮುಂಬೈ ನಲ್ಲಿ ಕೋವಿಡ್-19 ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತೆ (ಸಂಗ್ರಹ ಚಿತ್ರ)

ನವದೆಹಲಿ: ಜಲೈ ವೇಳೆಗೆ 2 ನೇ ಅಲೆಗೂ ಮುಂಚಿದ್ದ ಪರಿಸ್ಥಿತಿಗೆ ಕೋವಿಡ್ ಸೋಂಕು ಪ್ರಸರಣ ಇಳಿಕೆಯಾಗಲಿದೆ ಎಂದು ಐಐಟಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಗಣಿತದ ಮಾದರಿಯಿಂದ ವಿಶ್ಲೇಷಿಸಿದ್ದಾರೆ. 

ಜುಲೈ 3 ರ ವೇಳೆಗೆ ಫೆಬ್ರವರಿ ತಿಂಗಳಲ್ಲಿದ್ದ 12,780 ಕ್ಕೆ ಕೋವಿಡ್-19 ಸೋಂಕು ಪ್ರಕರಣಗಳಿಗೆ (7 ದಿನಗಳ ಸರಾಸರಿ) ಇಳಿಕೆಯಾಗಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಭಾರತದಲ್ಲಿ ಭಾನುವಾರ 2,40,842 ಹೊಸ ಪ್ರಕರಣಗಳು ವರದಿಯಾಗಿತ್ತು. ಇದು ಏಪ್ರಿಲ್ 17 ರಿಂದ ಇದೇ ಮೊದಲ ಬಾರಿಗೆ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಏ.17 ರಂದು 2.34 ಲಕ್ಷ ಪ್ರಕರಣಗಳು ವರದಿಯಾಗಿತ್ತು. 

ಭಾರತದಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳು 28,05,399 ಕ್ಕೆ ಇಳಿಕೆಯಾಗಿತ್ತು. ಕಳೆದ 24 ಗಂಟೆಗಳಲ್ಲಿ 1,18,001 ಪ್ರಕರಣಗಳು ಇಳಿಕೆಯಾಗಿತ್ತು. ಫೆಬ್ರವರಿ ತಿಂಗಳಲ್ಲಿ ಏರಿಕೆ ಕಾಣಲು ಪ್ರಾರಂಭಿಸಿದ ಕೋವಿಡ್-19 ಸೋಂಕು ಏ.17 ರ ವೇಳೆಗೆ 1 ಲಕ್ಷ ದಾಟಿತ್ತು.

ಮೇ.13 ರ ವೇಳೆಗೆ ಭಾರತದಲ್ಲಿ ಸಕ್ರಿಯ ಸೋಂಕುಗಳ ಪ್ರಕರಣ 37.2 ಲಕ್ಷಕ್ಕೆ ತಲುಪಿತ್ತು. ಐಐಟಿ ಕಾನ್ಪುರದ ಪ್ರೊಫೆಸರ್ ಮಣೀಂದ್ರ ಅಗರ್ವಾಲ್,   ಸಮಗ್ರ ರಕ್ಷಣಾ ಸಿಬ್ಬಂದಿ (ವೈದ್ಯಕೀಯ) ವಿಭಾಗದ ಉಪ ಮುಖ್ಯಸ್ಥರಾಗಿರುವ ಲೆಫ್ಟಿನೆಂಟ್ ಜನರಲ್ ಮಾಧುರಿ ಕನಿತ್ಕರ್ ಹಾಗೂ ಐಐಟಿ ಹೈದ್ರಾಬಾದ್ ನ ಪ್ರೊಫೆಸರ್ ಮತುಕುಮಲ್ಲಿ ವಿದ್ಯಾಸಾಗರ್, ಅವರು ರಚಿಸಿರುವ (SUTRA) ಸಸ್ಪೆಕ್ಟೆಬಲ್, ಅನ್ ಡಿಟೆಕ್ಟೆಡ್, ಟೆಸ್ಟೆಡ್ (ಪಾಸಿಟಿವ್) ಹಾಗೂ ರಿಮೂವ್ಡ್ ಅಪ್ರೋಚ್ ಮಾದರಿಯ ಮೂಲಕ, ಅತಿ ಹೆಚ್ಚು ಪ್ರಕರಣಗಳಿದ್ದ ರಾಜ್ಯಗಳಲ್ಲಿ ಈಗ ಕೋವಿಡ್-19 ಸೋಂಕು ಸ್ಥಿರವಾಗುತ್ತಿದೆ ಎಂದು ತಿಳಿದುಬಂದಿದೆ. 

"ತಮಿಳುನಾಡಿನಲ್ಲಿ ಕೋವಿಡ್-19 ಪ್ರಸರಣ ದರ ಶೇ.20 ರಷ್ಟು ಕಡಿಮೆಯಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಲಾಕ್ ಡೌನ್  ನಿಂದ ಕೋವಿಡ್-19 ಸೋಂಕು ಗಮನಾರ್ಹವಾಗಿ ಕಡಿಮೆಯಾಗಿದೆ" ಪ್ರೊಫೆಸರ್ ಅಗರ್ವಾಲ್ ಹೇಳಿದ್ದಾರೆ. ಕೋವಿಡ್-19 ಅಂಕಿ-ಅಂಶಗಳ ಆಧಾರವಾಗಿ ಈ ಗಣಿತದ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ಅಗರ್ವಾಲ್ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com