ಜೂನ್ ನಿಂದ ಮಕ್ಕಳ ಮೇಲೆ ಕೋವಾಕ್ಸಿನ್ ಪ್ರಯೋಗ ಸಾಧ್ಯತೆ: ಅನುಮತಿ ಖಾತ್ರಿಪಡಿಸಿದ ಭಾರತ್ ಬಯೋಟೆಕ್ ಅಧಿಕಾರಿ!

ಭಾರತ್ ಬಯೋಟೆಕ್ ಔಷಧ ಕಂಪನಿ ಜೂನ್ ನಿಂದ ಮಕ್ಕಳ ಮೇಲೆ 'ಕೋವಾಕ್ಸಿನ್' ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ಔಷಧ ತಯಾರಿಕೆ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೈದ್ರಾಬಾದ್: ಭಾರತ್ ಬಯೋಟೆಕ್ ಔಷಧ ಕಂಪನಿ ಜೂನ್ ನಿಂದ ಮಕ್ಕಳ ಮೇಲೆ 'ಕೋವಾಕ್ಸಿನ್' ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ಔಷಧ ತಯಾರಿಕೆ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೈದ್ರಾಬಾದಿನ ಎಫ್ ಐಸಿಸಿಐ ಮಹಿಳಾ ಸಂಸ್ಥೆಯ ಸದಸ್ಯರೊಂದಿಗೆ ಎಲ್ಲ ವರ್ಚುಯಲ್ ಮೂಲಕ ಇತ್ತೀಚಿಗೆ ಲಸಿಕೆ ಕುರಿತು ಮಾತುಕತೆ ನಡೆಸಿದ ಭಾರತ್ ಬಯೋಟೆಕ್ ವ್ಯವಹಾರ ಅಭಿವೃದ್ಧಿ ಮುಖ್ಯಸ್ಥ ಮತ್ತು ಅಂತಾರಾಷ್ಟ್ರೀಯ ಸಲಹೆಗಾರ ರಾಚೆಸ್ ಎಲಾ, ಯಾವುದೇ ಲಸಿಕೆ ಶೇ 100 ರಷ್ಟು ರಕ್ಷಣೆ ನೀಡುವುದಿಲ್ಲ ಎಂದಿದ್ದಾರೆ.

ಕೋವಿಡ್-19 ನಿಯಮಗಳು ಇತರ ಸುರಕ್ಷತಾ ಶಿಷ್ಟಾಚಾರಗಳ ಪಾಲನೆಯಿಂದ ಕೋವಾಕ್ಸಿನ್ ಲಸಿಕೆಯ ದಕ್ಷತೆ ಶೇ.100 ರಷ್ಟು ರಕ್ಷಣೆಗೆ ಪ್ರಗತಿಯಾಗಬಹುದು, ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಭಾರತ್ ಬಯೋಟೆಕ್ ಅನುಮತಿ ಪಡೆದುಕೊಂಡಿದೆ. ಅದು ಬಹುಶಃ ಜೂನ್ ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಇದು 2-18 ವರ್ಷ ವಯಸ್ಸಿನ ಮಕ್ಕಳ ಮೇಲಿನ ಪ್ರಯೋಗವಾಗಿದೆ, ಇದಕ್ಕಾಗಿ ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತ್ ಬಯೋಟೆಕ್ ಪರವಾನಗಿ ಪಡೆಯಬಹುದು ಎಂದು ರಾಚೆಲ್ ಎಲಾ ಹೇಳಿಕೆಯನ್ನು ಉಲ್ಲೇಖಿಸಿ ಎಫ್‌ಎಲ್‌ಒ ಭಾನುವಾರ ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ಲಸಿಕೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಜೀವ ರಕ್ಷಣೆ ಮಾಡುತ್ತಿರುವುದರಿಂದ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿರುವುದಕ್ಕೆ
ಸಂತೋಷವಾಗುತ್ತಿದೆ, ಈ ವರ್ಷಾಂತ್ಯದೊಳಗೆ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು 700 ಮಿಲಿಯನ್ ಡೋಸ್‌ಗಳಿಗೆ ಹೆಚ್ಚಿಸಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಒಂದು ಲಸಿಕೆ ಅಭಿವೃದ್ಧಿಪಡಿಸಿ ಯಶಸ್ವಿಯಾಗಲು ಏಳರಿಂದ 10 ವರ್ಷಗಳ ಕಾಲ ಬೇಕಾಗುತ್ತದೆ. ಪ್ರಸ್ತುತ ಗರ್ಭಿಣಿಯರು, 
ಹಾಲುಣಿಸುವ ಮಹಿಳೆಯರು, ಮಕ್ಕಳಿಗೆ ಲಸಿಕೆ ನೀಡುತ್ತಿಲ್ಲ. ಒಂದು ಬಾರಿ ಈ ಗುಂಪಿನ ಮೇಲೆ ಪ್ರಯೋಗ ನಡೆದು ಪರಿಣಾಮ
ಸಾಬೀತಾದ ನಂತರ ಅವರಿಗೂ ಲಸಿಕೆ ನೀಡಲಾಗುವುದು ಎಂದು ಎಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com