ಆಂಧ್ರಪ್ರದೇಶ: ಸಿಲೇರು ನದಿಯಲ್ಲಿ ಎರಡು ದೋಣಿಗಳು ಮುಳುಗಡೆ; ಮಗು ಸಾವು, 7 ಮಂದಿ ನಾಪತ್ತೆ

ಆಂಧ್ರಪ್ರದೇಶ- ಒಡಿಶಾ ಗಡಿ ಸಿಲೇರು ನದಿಯಲ್ಲಿ 2 ದೋಣಿಗಳು ಮುಳುಗಡೆಯಾಗಿ ಓರ್ವ ಸಾವನ್ನಪ್ಪಿ 7 ಮಂದಿ ನಾಪತ್ತೆಯಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ

ವಿಶಾಖಪಟ್ಟಣಂ: ಆಂಧ್ರಪ್ರದೇಶ- ಒಡಿಶಾ ಗಡಿ ಸಿಲೇರು ನದಿಯಲ್ಲಿ 2 ದೋಣಿಗಳು ಮುಳುಗಡೆಯಾಗಿ ಓರ್ವ ಸಾವನ್ನಪ್ಪಿ 7 ಮಂದಿ ನಾಪತ್ತೆಯಾಗಿದ್ದಾರೆ.

ದೋಣಿಗಳಲ್ಲಿದ್ದ  ಕೂಲಿ ಕಾರ್ಮಿಕರು ನೀರುಪಾಲಾಗಿದ್ದಾರೆ. ಮೂವರು ಈಜಿ ದಡ ಸೇರಿ ಸುರಕ್ಷಿತವಾಗಿದ್ದಾರೆ. 

ವರದಿಗಳ ಪ್ರಕಾರ, ವೈಜಾಗ್ ಏಜೆನ್ಸಿಯ ಎರಡು ದೋಣಿಗಳಲ್ಲಿ ಒಟ್ಟು 13 ಜನ ಪ್ರಯಾಣ ಮಾಡುತ್ತಿದ್ದರು. ಇವರೆಲ್ಲ ಹೈದರಾಬಾದ್‌ನಲ್ಲಿ ಕೂಲಿ‌ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಕಾರಣ ಸ್ವಗ್ರಾಮಕ್ಕೆ ಹಿಂತಿರುಗುವಾಗ ಈ ಘಟನೆ ನಡೆದಿದೆ.

ಪ್ರಯಾಣ ಶುರು ಮಾಡಿದ ಕೆಲವೇ ಗಂಟೆಗಳಲ್ಲಿ ಒಂದು ದೋಣಿ ಮುಳುಗಿದೆ. ಈ ವೇಳೆ ಮುಳುಗಿದ ದೋಣಿಯಲ್ಲಿದ್ದ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಎರಡನೇ ದೋಣಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆಗ ಎರಡನೇ ದೋಣಿಯೂ ಮುಳುಗಿದೆ. ಒಟ್ಟು 13 ಜನರ ಪೈಕಿ ನಾಲ್ವರು ಈಜಿ ದಡವನ್ನು ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ. 10 ತಿಂಗಳ ಮಗುವಿನ ಶವ ಪತ್ತೆಯಾಗಿದೆ. ಉಳಿದ 8 ಜನರು ನಾಪತ್ತೆಯಾಗಿದ್ದು ನೀರುಪಾಲಾದ ಕೂಲಿ ಕಾರ್ಮಿಕರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ನಾಪತ್ತೆಯಾದವರು‌ ಒಡಿಶಾದ ಮಲ್ಕಾನಗಿರಿ ಪ್ರದೇಶದ ಗುಂಟವಾಡ, ಕೆಂದಗುಡಾ ಗ್ರಾಮದವರು ಎನ್ನಲಾಗಿದೆ. ನಾಪತ್ತೆಯಾದ‌ ಕುಟುಂಬಸ್ಥರ ರೋಧನೆ, ಆಕ್ರಂದನ ಮುಗಿಲು‌ ಮುಟ್ಟಿದೆ.

ಸುಮಾರು 35 ಕಾರ್ಮಿಕರು ಹೈದರಾಬಾದ್‌ನಿಂದ ಸಿಲೆರು ತಲುಪಿದರು ಮತ್ತು ಐದು ದೇಶದ ದೋಣಿಗಳಲ್ಲಿ ಒಡಿಶಾಗೆ ತೆರಳಲು ಹೊರಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮೊದಲ ದೋಣಿ ಉರುಳಿಬಿದ್ದಾಗ, ಎರಡನೇ ದೇಶೀಯಲ್ಲಿದ್ದ ಜನ ದೋಣಿಯನ್ನು ಹಿಡಿಯಲು ಪ್ರಯತ್ನಿಸಿದರು ಆದರೆ ಎರಡನೇ ದೋಣಿ ಸಹ ಪಲ್ಟಿಯಾಗಿದೆ. ಮಗುವಿನ ಶವ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com