ರಜಾ ಪೀಠಗಳನ್ನು ಹೆಚ್ಚಿಸಿ, ವಿಚಾರಣೆಗೆ ಬರುವ ವಿಷಯಗಳ ವರ್ಗ ಹೆಚ್ಚಿಸುವಂತೆ ಸಿಜೆಐಗೆ ಎಸ್‌ಸಿಬಿಎ ಮನವಿ

ರಜಾ ಪೀಠಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತು ವಿರಾಮದ ಸಮಯದಲ್ಲಿ ವಿಚಾರಣೆಗೆ ಬರಬಹುದಾದ ವಿಷಯಗಳ ವರ್ಗವನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್(ಎಸ್‌ಸಿಬಿಎ) ಮಂಗಳವಾರ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಪತ್ರ ಬರೆದಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ರಜಾ ಪೀಠಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತು ವಿರಾಮದ ಸಮಯದಲ್ಲಿ ವಿಚಾರಣೆಗೆ ಬರಬಹುದಾದ ವಿಷಯಗಳ ವರ್ಗವನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್(ಎಸ್‌ಸಿಬಿಎ) ಅಧ್ಯಕ್ಷ ವಿಕಾಸ್ ಸಿಂಗ್ ಅವರು ಮಂಗಳವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಪತ್ರ ಬರೆದಿದ್ದಾರೆ.

ಮೌಖಿಕ ಪ್ರಸ್ತಾಪ ವ್ಯವಸ್ಥೆಯನ್ನು ಪುನಃಸ್ಥಾಪಿಸಬೇಕೆಂದು ವಿಕಾಸ್ ಸಿಂಗ್ ಅವರು ಸಿಜೆಐಗೆ ಮನವಿ ಮಾಡಿದ್ದಾರೆ.

"ಇಂದಿನ ಕಾರಣ ಪಟ್ಟಿಯು ಯಾವುದೇ ಮೌಖಿಕ ಪ್ರಸ್ತಾಪವನ್ನು ಅನುಮತಿಸುವುದಿಲ್ಲ ಎಂದು ಹೇಳುತ್ತಿದೆ, ಆದರೆ ರಜೆಯ ಪೀಠಗಳು ಈ ಮೊದಲು ಪ್ರಸ್ತಾಪಿಸುವುದನ್ನು ನಿಷೇಧಿಸುವುದು ನ್ಯಾಯಾಲಯದ ಅಭ್ಯಾಸವಾಗಿರಲಿಲ್ಲ" ಎಂದು ಸಿಂಗ್ ಸಿಜೆಐಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

"ಆದ್ದರಿಂದ ರಜಾ ನ್ಯಾಯಪೀಠದ ಯತಾಸ್ಥಿತಿಯನ್ನು ಪುನಃಸ್ಥಾಪಿಸಲು ನಿಮ್ಮ ಉತ್ತಮ ಕಚೇರಿಯಿಂದ ತಕ್ಷಣದ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿಕಾಸ್ ಸಿಂಗ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com