ಹೊಸ ಐಟಿ ನಿಯಮಗಳ ಅನುಸರಣೆ ಸ್ಥಿತಿಗತಿ ವರದಿ ಮಾಡಲು ದೊಡ್ಡ ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಮೋದಿ ಸರ್ಕಾರ ಸೂಚನೆ

ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳೊಂದಿಗೆ ತಮ್ಮ ಅನುಸರಣಾ ಸ್ಥಿತಿಯನ್ನು ಕೂಡಲೇ ವರದಿ ಮಾಡುವಂತೆ ದೊಡ್ಡ ಸಾಮಾಜಿಕ  ಮಾಧ್ಯಮ ವೇದಿಕೆಗಳಿಗೆ ಮೋದಿ ಸರ್ಕಾರ ಬುಧವಾರ ಹೇಳಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳೊಂದಿಗೆ ತಮ್ಮ ಅನುಸರಣಾ ಸ್ಥಿತಿಯನ್ನು ಕೂಡಲೇ ವರದಿ ಮಾಡುವಂತೆ ದೊಡ್ಡ ಸಾಮಾಜಿಕ  ಮಾಧ್ಯಮ ವೇದಿಕೆಗಳಿಗೆ ಮೋದಿ ಸರ್ಕಾರ ಬುಧವಾರ ಹೇಳಿದೆ.ಅಂತಹ ದೊಡ್ಡ ಡಿಜಿಟಲ್ ವೇದಿಕೆಗಳಿಂದ ಹೆಚ್ಚುವರಿ ನಿಯಮಗಳು ಇಂದಿನಿಂದ ಜಾರಿಗೆ ಬರಬೇಕು ಎಂದು ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ' ಬರೆದ ಟಿಪ್ಪಣಿಯಲ್ಲಿ ಐಟಿ ಸಚಿವಾಲಯ ಹೇಳಿದೆ. 

ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಅಡಿಯಲ್ಲಿ ಡಿಜಿಟಲ್ ವೇದಿಕೆಗಳಿಂದ ನೇಮಕಗೊಂಡ ಮುಖ್ಯ ಅನುಸರಣಾ ಅಧಿಕಾರಿ, 
ಸ್ಥಾನಿಕ ಕುಂದುಕೊರತೆ ಅಧಿಕಾರಿ, ನೋಡಲ್  ಸಂಪರ್ಕ ಅಧಿಕಾರಿಯ ವಿವರ ಮತ್ತು ಸಂಪರ್ಕದ ಮಾಹಿತಿಯನ್ನು ಸಚಿವಾಲಯ ಕೋರಿದೆ.

ಸಾಮಾಜಿಕ ಮಾಧ್ಯಮ ಮಧ್ಯವರ್ತಿಯ ವ್ಯಾಪ್ತಿಯಲ್ಲಿ ಬರುವ ಆ್ಯಪ್  ಹೆಸರು, ವೆಬ್‌ಸೈಟ್ ಮತ್ತು ಸೇವೆಯಂತಹ ವಿವರಗಳನ್ನು ಹೊರತುಪಡಿಸಿ, ಮೂರು ಪ್ರಮುಖ ಸಿಬ್ಬಂದಿಗಳ ವಿವರಗಳು ಮತ್ತು  ದೈಹಿಕ ಸಂಪರ್ಕ ವಿಳಾಸವನ್ನು ಸಚಿವಾಲಯ ಕೋರಿದೆ. ಹೊಸ ನಿಯಮಗಳ ಅನುಸರಣೆಯ ಸ್ಥಿತಿಯ ಬಗ್ಗೆ ವರದಿ ಮಾಡಲು ಪ್ಲಾಟ್‌ಫಾರ್ಮ್‌ಗಳನ್ನು ಕೇಳಿದೆ.

ಆದಷ್ಟು ಬೇಗ ತಮ್ಮ ಪ್ರತಿಕ್ರಿಯೆ ನೀಡುವಂತೆ ಸಚಿವಾಲಯ ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೇಳಿದ್ದು, ಟ್ವಿಟರ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ ಆಫ್ ನಂತಹ ದೊಡ್ಡ ಮಾಧ್ಯಮ ವೇದಿಕೆಗಳು  ಮುಖ್ಯ ಅನುಸರಣಾ ಅಧಿಕಾರಿ, ನೋಡಲ್ ಸಂಪರ್ಕಿತ ಅಧಿಕಾರಿ ಮತ್ತು ಸ್ಥಾನಿಕ ಕುಂದು ಕೊರತೆ ಅಧಿಕಾರಿ ನೇಮಕ ಸೇರಿದಂತೆ ಹೆಚ್ಚುವರಿ ನಿಯಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com