ರಾಜ್ಯಗಳಲ್ಲಿ 1.82 ಕೋಟಿ ಡೋಸ್ ಲಸಿಕೆ, ಇನ್ನೂ ನಾಲ್ಕು ಲಕ್ಷ ಲಸಿಕೆ ಶೀಘ್ರವೇ ಲಭ್ಯ: ಕೇಂದ್ರ

ರಾಜ್ಯಗಳ ಬಳಿ 1.82 ಕೋಟಿ ಡೋಸ್ ಲಸಿಕೆ ಇದ್ದು ಇನ್ನೂ ನಾಲ್ಕು ಲಕ್ಷ ಡೋಸ್ ಲಸಿಕೆ ಮೂರು ದಿನಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತ
ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತ

ನವದೆಹಲಿ: ರಾಜ್ಯಗಳ ಬಳಿ 1.82 ಕೋಟಿ ಡೋಸ್ ಲಸಿಕೆ ಇದ್ದು ಇನ್ನೂ ನಾಲ್ಕು ಲಕ್ಷ ಡೋಸ್ ಲಸಿಕೆ ಮೂರು ದಿನಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರೆಗೂ ಕೇಂದ್ರ ಸರ್ಕಾರ ಉಚಿತವಾಗಿ ಹಾಗೂ ನೇರವಾಗಿ ರಾಜ್ಯಗಳೇ ಖರೀದಿಸುವ ವಿಭಾಗದಲ್ಲಿ 22.77 ಕೋಟಿ ಡೋಸ್ ಗಳಿಗೂ ಹೆಚ್ಚಿನ ಲಸಿಕೆಗನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ, ಈ ಪೈಕಿ ಪೋಲಾಗಿರುವುದೂ ಸೇರಿ 20,80,09,397 ಡೋಸ್ ಗಳಷ್ಟು ಲಸಿಕೆಯನ್ನು ಬಳಕೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್-19 ಲಸಿಕೆ ಕಾರ್ಯತಂತ್ರ ಮೂರನೇ ಹಂತ ಮೇ.1 ರಿಂದ ಜಾರಿಗೆ ಬಂದಿದೆ. ಕೇಂದ್ರ ಡ್ರಗ್ಸ್ ಪ್ರಯೋಗಾಲಯ (ಸಿಡಿಎಲ್) ಅನುಮೋದನೆ ನೀಡಿರುವ ಲಸಿಕೆ ಡೋಸ್ ಗಳ ಪೈಕಿ ಶೇ.50 ರಷ್ಟನ್ನು ಪ್ರತಿ ತಿಂಗಳು ಸರ್ಕಾರ ಯಾವುದೇ ತಯಾರಕರಿಂದ ಖರೀದಿಸುವುದಕ್ಕೆ ಅನುಮತಿ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com