ಪವಿತ್ರ ಯಾತ್ರಾಸ್ಥಳಗಳಿಗೆ ಭೇಟಿ ನೀಡುವಂತೆ ಭಾರತೀಯರಿಗೆ ಮೋದಿ ಕರೆ
ಕೆಲವು ಅನುಭವಗಳು ತುಂಬಾ ಅಲೌಕಿಕವಾಗಿರುತ್ತವೆ, ಅವುಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ. ಅದಕ್ಕಾಗಿ ಯಾತ್ರಾಸ್ಥಳಗಳಿಗೆ ಜನರು ಭೇಟಿ ನೀಡಬೇಕಾಗಿ ಕರೆ ನೀಡಿದರು.
Published: 05th November 2021 02:50 PM | Last Updated: 05th November 2021 02:50 PM | A+A A-

ಪ್ರಧಾನಿ ಮೋದಿ
ಕೇದಾರನಾಥ: ಭಾರತದ ಸತ್ವವನ್ನು ತಿಳಿದುಕೊಳ್ಳಲು ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೇಶವಾಸಿಗಳಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ: ಕೇದಾರನಾಥದಲ್ಲಿ ರೂ.130 ಕೋಟಿ ಮೌಲ್ಯದ ಯೋಜನೆಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಕೇದಾರನಾಥ ದೇವಾಲಯದಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಿ ಮತ್ತು ಇತರರಿಗೆ ಅಡಿಪಾಯ ಹಾಕಿದ ನಂತರ ಸಭೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು.
ಇದನ್ನೂ ಓದಿ: ಈ ಬಾರಿಯೂ ಸೇನೆಯೊಂದಿಗೆ ದೀಪಾವಳಿ ಆಚರಣೆ: ನೌಶೆರಾ ತಲುಪಿದ ಪ್ರಧಾನಿ ಮೋದಿ, ಹುತಾತ್ಮ ಯೋಧರಿಗೆ ಗೌರವ ನಮನ
ಕೆಲವು ಅನುಭವಗಳು ತುಂಬಾ ಅಲೌಕಿಕವಾಗಿರುತ್ತವೆ, ಅವುಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಅದು ಅನಂತವಾಗಿದೆ, ಬಾಬಾ ಕೇದಾರನಾಥ ಧಾಮದಲ್ಲಿ ನನಗೆ ಹೀಗೆ ಅನಿಸುತ್ತದೆ. ಭಾರತದ ವೈಭವಯುತ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಸ್ಥಳಗಳು ಮತ್ತು ಧಾರ್ಮಿಕ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವಂತೆ ನಾನು ದೇಶವಾಸಿಗಳಿಗೆ ಮನವಿ ಮಾಡುತ್ತೇನೆ ಎಂದರು.
ಇದನ್ನೂ ಓದಿ: 66ನೇ ಕನ್ನಡ ರಾಜ್ಯೋತ್ಸವ: ಪ್ರಧಾನಿ ಮೋದಿಯಿಂದ ಕನ್ನಡದಲ್ಲಿ ಶುಭಾಶಯ