ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಸಾರಾ ಅಲಿ ಖಾನ್ ವಿರುದ್ಧ ನೆಟ್ಟಿಗರ ಟ್ರೋಲ್

ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ಭೇಟಿ ನೀಡಿ ಆದಿಶಂಕರಾಚಾರ್ಯರ ಪುತ್ಥಳಿ ಉದ್ಘಾಟಿಸಿದ ಬಳಿಕ ಜ್ಯೋತಿರ್ಲಿಂಗವಿರುವ ಕ್ಷೇತ್ರ ದೇಶಾದ್ಯಂತ ಸುದ್ದಿಯಾಗಿತ್ತು.
ಕೇದಾರನಾಥದಲ್ಲಿ ಸಾರಾ ಅಲಿ ಖಾನ್
ಕೇದಾರನಾಥದಲ್ಲಿ ಸಾರಾ ಅಲಿ ಖಾನ್

ಪ್ರಧಾನಿ ನರೇಂದ್ರ ಮೋದಿ ಕೇದಾರನಾಥಕ್ಕೆ ಭೇಟಿ ನೀಡಿ ಆದಿಶಂಕರಾಚಾರ್ಯರ ಪುತ್ಥಳಿ ಉದ್ಘಾಟಿಸಿದ ಬಳಿಕ ಜ್ಯೋತಿರ್ಲಿಂಗವಿರುವ ಕ್ಷೇತ್ರ ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ಇದೇ ಕ್ಷೇತ್ರಕ್ಕೆ ತಾವು ಭೇಟಿ ನೀಡಿದ್ದು ಟ್ರೋಲ್ ಗೆ ಗುರಿಯಾಗಲಿದೆ ಎಂದು ಸಾರಾ ಅಲಿ ಖಾನ್ ಊಹಿಸಿರಲಿಲ್ಲ.

ಸಾರಾ ಅಲಿ ಖಾನ್ ಅವರ ತಂದೆ ಸೈಫ್ ಅಲಿ ಖಾನ್ ಸಾಮಾನ್ಯವಾಗಿ ಟ್ರೋಲ್ ಗಳಿಗೆ ಆಹಾರವಾಗುವುದನ್ನು ಈಗಾಗಲೇ ಹಲವು ಬಾರಿ ಎದುರಿಸಿದ್ದಾರೆ. ಆದರೆ ಜಾನ್ಹವಿ ಕಪೂರ್ ಜೊತೆ ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿದ್ದಕ್ಕೆ ಸಾರಾ ಅಲಿ ಖಾನ್ ಮೇಲೆ  ಟ್ರೋಲಿಗರು ಮುರ್ಕೊಂಡು ಬಿದ್ದಿದ್ದಾರೆ.

ಎಲ್ಲವೂ ಎಲ್ಲಿ ಪ್ರಾರಂಭವಾಯಿತೋ ಅಲ್ಲಿಗೆ ವಾಪಸ್ ಜೈಬೋಲೇನಾಥ್, ಗ್ರೇಟ್ಫುಲ್, ಧನ್ಯಳಾದೆ ಎಂದು ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದರು. ಟ್ರೋಲ್ ಆರ್ಮಿಗೆ ಇಷ್ಟು ಸಾಕಾಯಿತು.

ಟ್ರೋಲಿಗರ ಆಕ್ಷೇಪವೇನೆಂದರೆ ಸಾರಾ ಅಲಿ ಖಾನ್ ಮುಸ್ಲಿಂ ಆಗಿದ್ದುಕೊಂಡು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದು. ಸಾರಾ ಅಲಿ ಖಾನ್ ಗೆ ಟ್ರೋಲಿಗರು ದ್ವೇಷ ಪೂರಿತ ಮೆಸೇಜ್ ಗಳನ್ನು ಕಳಿಸಲು ಪ್ರಾರಂಭಿಸಿದ್ದಾರೆ. 

"ವಿಗ್ರಹಾರಾಧನೆ ಮಾಡಲು ನಿಮಗೆ ಆಸಕ್ತಿ ಇದ್ದಲ್ಲಿ,  ನಿಮ್ಮ ಧರ್ಮವನ್ನು ಬಿಡಿ, ನೀವು ಮುಸ್ಲಿಮ್ ಅಲ್ಲದೇ ಇದ್ದಲ್ಲಿ ನಿಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳಿ..." ಎಂದು ಮೆಸೇಜ್ ನಲ್ಲಿ ಟ್ರೋಲಿಗರು ಸಾರಾ ಅಲಿ ಖಾನ್ ಗೆ ಆಗ್ರಹಿಸಿದ್ದಾರೆ.

ಆದರೆ ಸಾರಾ ಅಲಿ ಖಾನ್ ಗೆ ಅಸಂಖ್ಯಾತ ಅನುಯಾಯಿಗಳು ಬೆಂಬಲ ನೀಡಿದ್ದು, ಆಕೆಯ ಆಯ್ಕೆಯನ್ನು ಬೆಂಬಲಿಸಿದ್ದಾರೆ. 2.17 ಮಿಲಿಯನ್ ಮಂದಿ ಸಾರಾ ಪೋಸ್ಟ್ ನ್ನು ಲೈಕ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com