ಪಟಾಕಿ ಸ್ಫೋಟಗೊಂಡು ತಂದೆ-ಮಗ ಸಾವು! ವಿಡಿಯೋ ವೈರಲ್

ಗುರುವಾರ ದೀಪಾವಳಿ ಹಬ್ಬಕ್ಕಾಗಿ ಸ್ಕೂಟರ್ ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ಪಟಾಕಿ ಸ್ಫೋಟಗೊಂಡು ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟಿರುವ ಘಟನೆ ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪುದುಚೆರಿ: ಗುರುವಾರ ದೀಪಾವಳಿ ಹಬ್ಬಕ್ಕಾಗಿ ಸ್ಕೂಟರ್ ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ಪಟಾಕಿ ಸ್ಫೋಟಗೊಂಡು ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟಿರುವ ಘಟನೆ ಪುದುಚೇರಿ-ವಿಲ್ಲುಪುರಂ ಗಡಿಯಲ್ಲಿ ನಡೆದಿದೆ.

ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಂ ಪೂರ್ವ ಪ್ರದೇಶದಿಂದ ಕೂನಿಮೇಡು ಗ್ರಾಮಕ್ಕೆ ತಂದೆ ಕಾಲೈನಸನ್ ಮತ್ತು 7 ವರ್ಷದ ಮಗ ಪ್ರದೀಪ್ ಸ್ಕೂಟರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಪಟಾಕಿ ಸಿಡಿದು ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇಬ್ಬರು ಪಟಾಕಿಗಳ ಕಟ್ಟುಗಳೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದಿಢೀರನೇ ಬೆಂಕಿ ಹೊತ್ತಿಕೊಂಡು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com