ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನೂ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನೆಕಾ ಗಾಂಧಿ ಒತ್ತಾಯ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಕೇಂದ್ರದ ಮಾಜಿ ಸಚಿವೆ ಮತ್ತು ಸುಲ್ತಾನ್‌ಪುರ ಬಿಜೆಪಿ ಸಂಸದೆ ಮನೆಕಾ ಗಾಂಧಿ ಅವರು ಎಲ್‌ಪಿಜಿ ಸಿಲಿಂಡರ್ ದರವನ್ನೂ ಕಡಿಮೆ ಮಾಡುವಂತೆ...
ಮನೆಕಾ ಗಾಂಧಿ
ಮನೆಕಾ ಗಾಂಧಿ

ಸುಲ್ತಾನ್‌ಪುರ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಕೇಂದ್ರದ ಮಾಜಿ ಸಚಿವೆ ಮತ್ತು ಸುಲ್ತಾನ್‌ಪುರ ಬಿಜೆಪಿ ಸಂಸದೆ ಮನೆಕಾ ಗಾಂಧಿ ಅವರು ಎಲ್‌ಪಿಜಿ ಸಿಲಿಂಡರ್ ದರವನ್ನೂ ಕಡಿಮೆ ಮಾಡುವಂತೆ ಶನಿವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಾಲ್ಕು ದಿನಗಳ ಭೇಟಿಗಾಗಿ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವ ಮನೆಕಾ ಗಾಂಧಿ ಅವರು ಕೇಂದ್ರ ಸರ್ಕಾರಕ್ಕೆ ಎಲ್ ಪಿಜಿ ಬೆಲೆ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.

"ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗಿದೆ. ಕೇಂದ್ರ ಸರ್ಕಾರವು ಜನರಿಗೆ ಮತ್ತಷ್ಟು ರಿಲೀಫ್ ನೀಡಲು ಗ್ಯಾಸ್ (ಎಲ್‌ಪಿಜಿ ಸಿಲಿಂಡರ್) ನಂತಹ ಇತರ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಬೇಕು" ಎಂದು ಅವರು ತಮ್ಮ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ರೂ. ಮತ್ತು 10 ರೂ. ಕಡಿತಗೊಳಿಸಿದ ನಂತರ ಬಿಜೆಪಿ ಸಂಸದರು ಈ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com