ಕೇದಾರನಾಥ ದೇವಸ್ಥಾನ ಗರ್ಭಗುಡಿಯಲ್ಲಿ ಪ್ರಧಾನಿ ಮೋದಿ ಪೂಜೆ-ಪ್ರಾರ್ಥನೆಯ ನೇರ ಪ್ರಸಾರ: ವಿರೋಧ ಪಕ್ಷಗಳ ನಾಯಕರ ಅಪಸ್ವರ 

ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಸಂಪ್ರದಾಯಗಳನ್ನು ನೆರವೇರಿಸುವಾಗ ಅದನ್ನು ನೇರಪ್ರಸಾರ ಮಾಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡಿವೆ.
ಶುಕ್ರವಾರ ಕೇದಾರನಾಥ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಶುಕ್ರವಾರ ಕೇದಾರನಾಥ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಡೆಹ್ರಾಡೂನ್: ಕೇದಾರನಾಥ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಸಂಪ್ರದಾಯಗಳನ್ನು ನೆರವೇರಿಸುವಾಗ ಅದನ್ನು ನೇರಪ್ರಸಾರ ಮಾಡುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡಿವೆ.

ಉತ್ತರಾಖಂಡದ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್, ಸಂಪ್ರದಾಯದ ಪ್ರಕಾರ ಕೇದಾರನಾಥ ದೇವಾಲಯದ ಗರ್ಭಗುಡಿಯಿಂದ ಚಿತ್ರಗಳನ್ನು ತೆಗೆಯುವುದು ಮತ್ತು ನೇರ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ. ಪ್ರಧಾನಿಯವರು ಸಂಪ್ರದಾಯಕ್ಕೆ ಅಪಮಾನ ಮಾಡಿದ್ದಾರೆ. ಅವರು ಬಾಬಾ ಕೇದಾರನಾಥರಿಗಿಂತ ದೊಡ್ಡವರು ಎಂದು ಭಾವಿಸುತ್ತಾರೆ ಆದರೆ ಬಾಬಾರಿಗಿಂತ ದೊಡ್ಡವರು, ಶ್ರೇಷ್ಠರು ಯಾರೂ ಇರಲು ಸಾಧ್ಯವಿಲ್ಲ ಎಂದಿದ್ದಾರೆ.

ದೀಪಾವಳಿ ಹಬ್ಬದ ಸಂಭ್ರಮ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ದೇವಾಲಯಕ್ಕೆ ಮೊನ್ನೆ 5ರಂದು ಭೇಟಿ ಕೊಟ್ಟಿದ್ದರು. ಅಲ್ಲಿ ಆದಿ ಗುರು ಶಂಕರಾಚಾರ್ಯ ಅವರ ಮೂರ್ತಿಯನ್ನು ಅನಾವರಣ ಮಾಡಿದ್ದಲ್ಲದೆ 130 ಕೋಟಿ ರೂಪಾಯಿಗಳ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು.

ಇದು ಪ್ರಧಾನಿಯವರ ಮತ್ತೊಂದು ರಾಜಕೀಯ ಪ್ರವಾಸ. ಉತ್ತರಾಖಂಡ ಜನತೆ ಅವರಿಂದ ಅಪಾರವಾದದ್ದನ್ನು ನಿರೀಕ್ಷಿಸುತ್ತಾರೆ. ಆದರೆ ಪ್ರಧಾನಿಯವರು ಇಲ್ಲಿಗೆ ಬಂದು ಇನ್ನಷ್ಟು ಬೇಸರವನ್ನು ಜನತೆಗೆ ನೀಡಿದ್ದಾರೆ. ಉತ್ತರಾಖಂಡದಲ್ಲಿ ಕಳೆದ ತಿಂಗಳು ಮಳೆಗೆ 800 ಮಂದಿ ಅಸುನೀಗಿದ್ದರು. ಆ ಬಗ್ಗೆ ಒಂದೇ ಒಂದು ಮಾತನ್ನು ಪ್ರಧಾನಿಯವರು ಹೇಳಲಿಲ್ಲ ಎಂದು ಗೋಡಿಯಾಲ್ ಆರೋಪಿಸಿದ್ದಾರೆ.

ಉತ್ತರಾಖಂಡದ ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಪ್ರಧಾನಿಗೆ ಐದು ಪ್ರಶ್ನೆಗಳನ್ನು ಎತ್ತಿದ್ದಾರೆ. “ಪ್ರಧಾನಿ ಅವರ ಮಾತುಗಳನ್ನು ಕೇಳುವುದು ಅವರು ಚುನಾವಣಾ ಪ್ರವಾಸದಲ್ಲಿದ್ದಾರೆ ಮತ್ತು ಬಾಬಾ ಕೇದಾರನಾಥಕ್ಕೆ ಭೇಟಿ ನೀಡದೆ ಇದ್ದಂತೆ ತೋರುತ್ತಿದೆ. ಅವರು ಕೇವಲ ಹಳೆಯ ಭರವಸೆಗಳನ್ನು ಪುನರಾವರ್ತಿಸಿದ್ದಾರೆ. ರಾಜ್ಯವು ಅನುಭವಿಸಿದ ಇತ್ತೀಚಿನ ಪ್ರವಾಹದ ಬಗ್ಗೆ ಏನನ್ನೂ ಹೇಳಲಿಲ್ಲ. ಅವರು ಜನತೆಗೆ ಉತ್ತರ ನೀಡಬೇಕು ಎಂದು ಕರ್ನಲ್(ನಿವೃತ್ತ) ಅಜಯ್ ಕೊತಿಯಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com