ಪದ್ಮ ಪ್ರಶಸ್ತಿ ಪ್ರದಾನ 2021: ಸುಷ್ಮಾ ಸ್ವರಾಜ್, ಪಿವಿ ಸಿಂಧು, ಕಂಗನಾ ಸೇರಿ 119 ಮಂದಿಗೆ ರಾಷ್ಟ್ರಪತಿಗಳಿಂದ ಸರ್ವೋನ್ನತ ಗೌರವ

ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಬಾಲಿವುಡ್ ನಟಿ ಕಂಗನಾ ರನಾವತ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 119 ಮಂದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ದೇಶದ ಸರ್ವೋನ್ನತ ಗೌರವ ಸ್ವೀಕರಿಸಿದರು.
ಪದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಪದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ನವದೆಹಲಿ: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಬಾಲಿವುಡ್ ನಟಿ ಕಂಗನಾ ರನಾವತ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 119 ಮಂದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ದೇಶದ ಸರ್ವೋನ್ನತ ಗೌರವ ಸ್ವೀಕರಿಸಿದರು.

ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು, ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್‌, ನಿವೃತ್ತ ಏರ್‌ ಮಾರ್ಷಲ್‌ ಡಾ. ಪದ್ಮಾ ಬಂಡೋಪಾದ್ಯಾಯ, ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್‌ ಚಾನುಲಾಲ್‌ ಮಿಶ್ರಾ, ಬಾಲಿವುಡ್‌ ತಾರೆ ಕಂಗನಾ ರನಾವತ್, ಗಾಯಕ ಅದ್ನಾನ್‌ ಸಮಿ ಸೇರಿದಂತೆ ಹಲವರು ಇಂದು ರಾಷ್ಟ್ರಪತಿಗಳಿಂದ ‘ಪದ್ಮ ಪ್ರಶಸ್ತಿ’ ಸ್ವೀಕರಿಸಿದರು.

ಇನ್ನು ಕೇಂದ್ರದ ಮಾಜಿ ಸಚಿವೆ ದಿ.ಸುಷ್ಮಾ ಸ್ವರಾಜ್‌, ದಿ.ಜಾರ್ಜ್‌ ಫರ್ನಾಂಡಿಸ್‌, ದಿ.ಅರುಣ್‌ ಜೇಟ್ಲಿ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಷ್ಮಾ ಅವರ ಪುತ್ರಿ ಬಾನುಶ್ರೀ ಸ್ವರಾಜ್‌ ಅವರು ರಾಷ್ಟ್ರಪತಿಗಳಿಂದ ಪದವಿ ಸ್ವೀಕರಿಸಿದರು.

ಕರ್ನಾಟಕದ  ನಾಲ್ವರಿಗೆ ಪ್ರಶಸ್ತಿ
ಕರ್ನಾಟಕದ ನಾಲ್ವರು ಸಾಧಕರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಅಕ್ಷರ ಸಂತ ಹರೇಕಳ ಹಾಜಬ್ಬು, ಪರಿಸರ ಪ್ರೇಮಿ ತುಳಸಿ ಗೋವಿಂದೇಗೌಡ, ಮಾಜಿ ಹಾಕಿ ಪಟು ಎಂಪಿ ಗಣೇಶ್​​ ಮತ್ತು ಉದ್ಯಮಿ ವಿಜಯ್​ ಸಂಕೇಶ್ವರ್​ ಅವರೂ ಕೂಡ ಪದ್ಮ ಶ್ರೀ ಪಶಸ್ತಿ ಪಡೆದರು.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com