ಭೋಪಾಲ್ ಆಸ್ಪತ್ರೆ ಅಗ್ನಿ ಅವಘಡ: ಪೋಷಕರು ಹೆಸರಿಡುವ ಮುನ್ನವೇ ನಾಲ್ಕು ಕಂದಮ್ಮಗಳು ಸಜೀವ ದಹನ

ಮಧ್ಯ ಪ್ರದೇಶದ ಸರ್ಕಾರಿ ಸ್ವಾಮ್ಯದ ಕಮಲಾ ನೆಹರು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇನ್ನೂ ಪ್ರಪಂಚವನ್ನೇ ನೋಡದ ನಾಲ್ಕು ಕಂದಮ್ಮಗಳು ಸಜೀವ ದಹನವಾಗಿವೆ.
ಕಮಲಾ ನೆಹರು ಮಕ್ಕಳ ಆಸ್ಪತ್ರೆ
ಕಮಲಾ ನೆಹರು ಮಕ್ಕಳ ಆಸ್ಪತ್ರೆ

ಭೋಪಾಲ್: ಮಧ್ಯ ಪ್ರದೇಶದ ಸರ್ಕಾರಿ ಸ್ವಾಮ್ಯದ ಕಮಲಾ ನೆಹರು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇನ್ನೂ ಪ್ರಪಂಚವನ್ನೇ ನೋಡದ ನಾಲ್ಕು ಕಂದಮ್ಮಗಳು ಸಜೀವ ದಹನವಾಗಿವೆ.

ಈ ನವಜಾತ ಶಿಶುಗಳು ಕೇವಲ ಒಂದರಿಂದ ಒಂಬತ್ತು ದಿನಗಳದಾಗಿದ್ದು, ಅವರ ಪೋಷಕರು ಇನ್ನೂ ನಾಮಕರಣ ಸಹ ಮಾಡಿರಲಿಲ್ಲ. ಏಕೆಂದರೆ ಆ ಮಕ್ಕಳನ್ನು ಚಿಕಿತ್ಸೆಗಾಗಿ ಸರ್ಕಾರಿ ಕಮಲಾ ನೆಹರು ಆಸ್ಪತ್ರೆಯ ನವಜಾತ ಶಿಶುಗಳ ವಿಶೇಷ ನಿಗಾ ಘಟಕ(ಎಸ್‌ಎನ್‌ಸಿಯು)ಕ್ಕೆ ದಾಖಲಿಸಲಾಗಿತ್ತು.

ಮಕ್ಕಳ ಜನನದಿಂದ ಸಂತೋಷಗೊಂಡ ಅವರ ಪೋಷಕರು ಬಹುಶಃ ಅವರಿಗೆ ಯಾವ ಹೆಸರಿಡಬೇಕು ಎಂಬುದರ ಬಗ್ಗೆ ಯೋಚಿಸುತ್ತಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ.

ಈಗ ಅವರನ್ನು ಈ ಜಗತ್ತು "ಇರ್ಫಾನಾ ಮಗು, ಶಿವಾನಿಯ ಮಗು, ಶಾಜ್ಮಾ ಮತ್ತು ರಚನಾ ಮಗು" ಎಂದು ಮಾತ್ರ ನೆನಪಿಸಿಕೊಳ್ಳುತ್ತದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಮಲಾ ನೆಹರು ಮಕ್ಕಳ ಆಸ್ಪತ್ರೆಯ ವಿಶೇಷ ನವಜಾತ ಶಿಶು ನಿಗಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅನಾಹುತ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ಕಾರಣ ವಾರ್ಡ್‍ನೊಳಗೆ ಕತ್ತಲೆ ಆವರಿಸಿತ್ತು. ತಕ್ಷಣವೇ ಮಕ್ಕಳನ್ನು ಪಕ್ಕದ ವಾರ್ಡ್‍ಗೆ ಸ್ಥಳಾಂತರಿಸಲಾಯಿತು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಹೇಳಿದ್ದಾರೆ.

ಐಸಿಯು ಹೊಂದಿರುವ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ವಾರ್ಡ್‍ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 8-10 ಅಗ್ನಿಶಾಮಕ ಇಂಜಿನಿಯರ್‍ ಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಫತೇಘರ್ ಅಗ್ನಿಶಾಮಕ ಠಾಣೆಯ ಉಸ್ತುವಾರಿ ಜುಬರ್ ಖಾನ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com