ಮಾನಹಾನಿಕರ ಟ್ವೀಟ್‌: ಸಚಿವ ನವಾಬ್ ಮಲಿಕ್ ಗೆ ಫಡ್ನವೀಸ್ ಪತ್ನಿ ಅಮೃತಾರಿಂದ ಲೀಗಲ್ ನೋಟಿಸ್

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಸಚಿವ ನವಾಬ್ ಮಲಿಕ್ ಮಧ್ಯೆ ವಾಕ್ಸಮರ ಮುಂದುವರಿದಿದ್ದು, ತಮ್ಮ ವಿರುದ್ಧ ಮಾನಹಾನಿಕರ ಟ್ವೀಟ್ ಮಾಡಿರುವ ನವಾಬ್ ಮಲಿಕ್ ಅವರು ಕ್ಷಮೆಯಾಚಿಸಬೇಕು...
ಅಮೃತಾ - ಫಡ್ನವೀಸ್
ಅಮೃತಾ - ಫಡ್ನವೀಸ್

ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಸಚಿವ ನವಾಬ್ ಮಲಿಕ್ ಮಧ್ಯೆ ವಾಕ್ಸಮರ ಮುಂದುವರಿದಿದ್ದು, ತಮ್ಮ ವಿರುದ್ಧ ಮಾನಹಾನಿಕರ ಟ್ವೀಟ್ ಮಾಡಿರುವ ನವಾಬ್ ಮಲಿಕ್ ಅವರು ಕ್ಷಮೆಯಾಚಿಸಬೇಕು ಎಂದು ಫಡ್ನವೀಸ್ ಪತ್ನಿ ಅಮೃತಾ ಅವರು ಒತ್ತಾಯಿಸಿದ್ದಾರೆ.

ಈ ಸಂಬಂಧ ನವಾಬ್ ಮಲಿಕ್ ಅವರಿಗೆ ಲೀಗಲ್ ನೋಟಿಸ್ ನೀಡಿರುವ ಅಮೃತಾ ಅವರು, ಕೆಲವು ಚಿತ್ರಗಳನ್ನು ಟ್ವೀಟ್ ಮಾಡುವ ಮೂಲಕ ಡ್ರಗ್ ಪೆಡ್ಲರ್ ಜೊತೆ ತನ್ನನ್ನು ಲಿಂಕ್ ಮಾಡಲು ಯತ್ನಿಸಿದ್ದಕ್ಕಾಗಿ ಕ್ಷಮೆಯಾಚಿಸಬೇಕೆಂದು ಕೋರಿದ್ದಾರೆ.

ಎನ್‌ಸಿಪಿಯ ಮುಖ್ಯ ವಕ್ತಾರರಾದ ಮಲಿಕ್ ಅವರು 48 ಗಂಟೆಗಳ ಒಳಗೆ ಬೇಷರತ್ ಕ್ಷಮೆಯಾಚಿಸಬೇಕು ಮತ್ತು ಅವರ ಮಾನಹಾನಿಕರ ಟ್ವೀಟ್‌ಗಳನ್ನು ಅಳಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಒಂದು ವೇಳೆ ಮಲಿಕ್ ಅವರು ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 (ಮಾನನಷ್ಟ) ಅಡಿಯಲ್ಲಿ ಮೊಕದ್ದಮೆ ದಾಖಲಿಸುವುದಾಗಿ ಮಾಜಿ ಸಿಎಂ ಪತ್ನಿ ಎಚ್ಚರಿಕೆ ನೀಡಿದ್ದಾರೆ. 

ಪರಿಣಮ್ ಲಾ ಅಸೋಸಿಯೇಟ್ಸ್ ಮೂಲಕ ಮಲಿಕ್ ಅವರಿಗೆ ನೋಟಿಸ್ ನೀಡಲಾಗಿದ್ದು, ಅಮೃತಾ ಫಡ್ನವಿಸ್ ಮತ್ತು ಅವರ ಕುಟುಂಬದ ಇಮೇಜ್‌ಗೆ ಕಳಂಕ ತಂದಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com