'ಸುಪ್ರೀಂ' ಎಚ್ಚರಿಕೆಯ ನಂತರ ಅರ್ಹ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಮಂಜೂರು ಮಾಡಲು ಭಾರತೀಯ ಸೇನೆ ಒಪ್ಪಿಗೆ

ಸುಪ್ರೀಂ ಕೋರ್ಟ್‌ನ ಎಚ್ಚರಿಕೆಯ ನಂತರ, ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ 11 ಮಹಿಳಾ ಅಧಿಕಾರಿಗಳಿಗೆ 10 ದಿನಗಳೊಳಗೆ ಶಾಶ್ವತ ಆಯೋಗ(ಪಿಸಿ) ಮಂಜೂರು ಮಾಡಲು ಶುಕ್ರವಾರ ಒಪ್ಪಿಕೊಂಡಿದೆ. 
ಭಾರತೀಯ ಸೇನಾಪಡೆ ಮಹಿಳಾ ಅಧಿಕಾರಿಗಳು
ಭಾರತೀಯ ಸೇನಾಪಡೆ ಮಹಿಳಾ ಅಧಿಕಾರಿಗಳು

ನವದೆಹಲಿ: ಸುಪ್ರೀಂ ಕೋರ್ಟ್‌ನ ಎಚ್ಚರಿಕೆಯ ನಂತರ, ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ 11 ಮಹಿಳಾ ಅಧಿಕಾರಿಗಳಿಗೆ 10 ದಿನಗಳೊಳಗೆ ಶಾಶ್ವತ ಆಯೋಗ(ಪಿಸಿ) ಮಂಜೂರು ಮಾಡಲು ಶುಕ್ರವಾರ ಒಪ್ಪಿಕೊಂಡಿದೆ. 

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠ "11 ಮಹಿಳಾ ಅಧಿಕಾರಿಗಳಿಗೆ 10 ದಿನಗಳ ಅವಧಿಯಲ್ಲಿ  ಶಾಶ್ವತ ಆಯೋಗ ನೀಡುವಂತೆ ಆದೇಶಿಸಿತ್ತು.  ಅದರಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು,  ಮಾನದಂಡಗಳನ್ನು ಪೂರೈಸಿದರೆ ಮೂರು ವಾರಗಳ ಅವಧಿಯಲ್ಲಿ ಶಾಶ್ವತ ಆಯೋಗ ಮಂಜೂರು ಮಾಡಲಾಗುವುದು ಎಂದು ತಿಳಿಸಿದ್ದಾರೆ."

ಇದಕ್ಕು ಮುನ್ನ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ನೀಡದಿದ್ದರೆ ನ್ಯಾಯಾಂಗ ನಿಂದನೆಯ ಅಪರಾಧವೆಂದು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಸೇನೆಗೆ ಎಚ್ಚರಿಕೆ ನೀಡಿತ್ತು. ನಂತರ ಉಳಿದ ಮಹಿಳಾ ಅಧಿಕಾರಿಗಳ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು ಮತ್ತು ಈ ವಿಷಯದಲ್ಲಿ ಸೂಚನೆಗಳನ್ನು ನೀಡಲು ಸ್ವಲ್ಪ ಸಮಯ ಕೋರಲಾಗಿದೆ ಎಂದು ಸೇನೆಯ ವಕೀಲರು ಹೇಳಿದ್ದಾರೆ.

ಸುಪ್ರೀಂ ಪೀಠ ಈ ವಿಷಯದಲ್ಲಿ ಆದೇಶ ನೀಡಲು ಪ್ರಾರಂಭಿಸುತ್ತಿದ್ದಂತೆ, ಉನ್ನತ ನ್ಯಾಯಾಲಯಕ್ಕೆ ತೆರಳಿದ 11 ಅಧಿಕಾರಿಗಳಿಗೆ ಶಾಶ್ವತ ಆಯೋಗ ನೀಡಲು ಸಿದ್ಧ ಎಂದು  ಸೇನೆಯನ್ನು ಪ್ರತಿನಿಧಿಸುವ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. 

ಈ ವೇಳೆ ಸೇನೆಯು ತನ್ನ ಅಧಿಕಾರದಲ್ಲಿ ಸರ್ವೋಚ್ಚವಾಗಿರಬಹುದು, ಆದರೆ ಸಾಂವಿಧಾನಿಕವಾಗಿ ನ್ಯಾಯಾಲಯವೂ ಸರ್ವೋಚ್ಚವಾಗಿದೆ ಎಂದು ಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com