ಮಧ್ಯಪ್ರದೇಶ:  ಇಬ್ಬರು ಗ್ರಾಮಸ್ಥರನ್ನು ಅಪಹರಿಸಿ, ಹತ್ಯೆಗೈದ ನಕ್ಸಲೀಯರು!

 ಪೊಲೀಸ್ ಮಾಹಿತಿದಾರರು ಎಂಬ ಅನುಮಾನದಿಂದ ಶಸ್ತ್ರ ಸಜ್ಜಿತ ನಕ್ಸಲೀಯರು ಇಬ್ಬರು ಗ್ರಾಮಸ್ಥರನ್ನು ಅಪಹರಿಸಿ,  ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ನಕ್ಸಲ್ ಪೀಡಿತ ಬಾಲ್ಗಟ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಕಳೆದ ವರ್ಷ ಮಹಿಳಾ ನಕ್ಸಲ್ ಒಬ್ಬರನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದರು. 
ಮೃತದೇಹದ ಬಳಿ ರೋಧಿಸುತ್ತಿರುವ ಕುಟುಂಬಸ್ಥರು
ಮೃತದೇಹದ ಬಳಿ ರೋಧಿಸುತ್ತಿರುವ ಕುಟುಂಬಸ್ಥರು

ಭೂಪಾಲ್: ಪೊಲೀಸ್ ಮಾಹಿತಿದಾರರು ಎಂಬ ಅನುಮಾನದಿಂದ ಶಸ್ತ್ರ ಸಜ್ಜಿತ ನಕ್ಸಲೀಯರು ಇಬ್ಬರು ಗ್ರಾಮಸ್ಥರನ್ನು ಅಪಹರಿಸಿ,  ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ನಕ್ಸಲ್ ಪೀಡಿತ ಬಾಲ್ಗಟ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಕಳೆದ ವರ್ಷ ಮಹಿಳಾ ನಕ್ಸಲ್ ಒಬ್ಬರನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದರು. 

 ಸಂತೋಷ್ ಯಾದವ್ ಮತ್ತು ಜಗದೀಶ್ ಪಟೇಲ್ ಎಂಬ ಇಬ್ಬರು ವ್ಯಕ್ತಿಗಳನ್ನು ಅವರ ಮನೆಯಿಂದ ನಾಲ್ವರು ಮುಸುಕುದಾರಿ ಮಾವೋವಾದಿಗಳು ಶುಕ್ರವಾರ ರಾತ್ರಿ 7 ಗಂಟೆ ಸುಮಾರಿನಲ್ಲಿ ಅಪಹರಿಸಿದ್ದಾರೆ. ಸುಮಾರು ಎಂಟು ಗಂಟೆಗಳ ನಂತರ ಮೂರು ಗಂಟೆ ಸುಮಾರಿನಲ್ಲಿ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮದಲ್ಲಿ ಬಂದೂಕಿನ ಶಬ್ದ ಕೇಳಿಬಂದಿದೆ. ಶನಿವಾರ ಸೂರ್ಯೋದಯ ನಂತರ ಅವರಿಬ್ಬರ ಮೃತದೇಹಗಳು ಕಂಡುಬಂದಿವೆ.

ಮೃತದೇಹಗಳು ಬಿದಿದ್ದ ಪ್ರದೇಶದಿಂದ ಸಿಪಿಐ (ಮಾವೋವಾದಿ) ಕಾಟಿಯಾ ಮೊಚಿ ಪ್ರದೇಶ ಸಮಿತಿ ಹೆಸರಿನಲ್ಲಿದ್ದ ಪತ್ರವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ಗ್ರಾಮಸ್ಥರು ಪೊಲೀಸ್ ಮಾಹಿತಿದಾರರು ಆಗಬಾರದು, ತಪ್ಪಿದರೆ ಇಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.  ಪೊಲೀಸ್ ಮಾಹಿತಿದಾರರೆಂದು ಅಮಾಯಕ ಗ್ರಾಮಸ್ಥರನ್ನು ನಕ್ಸಲೀಯರು ಹೇಗೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಈ ಘಟನೆಯಿಂದ ಗೊತ್ತಾಗುತ್ತದೆ ಎಂದು ಬಾಲ್ಗಟ್ ಎಸ್ ಪಿ ಹೇಳಿದ್ದಾರೆ.

ನಕ್ಸಲೀಯರಿಂದ ಹತ್ಯೆಗೀಡಾದ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ಕೊಡುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಹೇಳಿದ್ದಾರೆ. ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಪೊಲೀಸರಿಗೆ ಚೌಹ್ಹಾಣ್ ನಿರ್ದೇಶನ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com