ತಲೆಗೆ 1 ಕೋಟಿ ಬಹುಮಾನ ಹೊಂದಿದ್ದ ಮಾವೋವಾದಿ ಉನ್ನತ ನಾಯಕ ಪ್ರಶಾಂತ್ ಬೋಸ್ ಬಂಧನ!
ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಸಿಕ್ಕಿದ್ದು 1 ಕೋಟಿ ಬಹುಮಾನ ಹೊಂದಿದ್ದ ಸಿಪಿಐ(ಮಾವೋವಾದಿ) ಸಂಘಟನೆಯ ಉನ್ನತ ನಾಯಕ ಪ್ರಶಾಂತ್ ಬೋಸ್ ಅಲಿಯಾಸ್ ಕಿಶನ್ ದಾ ನನ್ನು ಜಾರ್ಖಂಡ್ನಲ್ಲಿ ಬಂಧಿಸಲಾಗಿದೆ.
Published: 14th November 2021 04:40 PM | Last Updated: 14th November 2021 04:43 PM | A+A A-

ಪ್ರಶಾಂತ್ ಬೋಸ್-ಶೀಲಾ ಮರಾಂಡಿ
ರಾಂಚಿ: ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ಸಿಕ್ಕಿದ್ದು 1 ಕೋಟಿ ಬಹುಮಾನ ಹೊಂದಿದ್ದ ಸಿಪಿಐ(ಮಾವೋವಾದಿ) ಸಂಘಟನೆಯ ಉನ್ನತ ನಾಯಕ ಪ್ರಶಾಂತ್ ಬೋಸ್ ಅಲಿಯಾಸ್ ಕಿಶನ್ ದಾ ನನ್ನು ಜಾರ್ಖಂಡ್ನಲ್ಲಿ ಬಂಧಿಸಲಾಗಿದೆ.
ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧರಿಸಿ ಸುಮಾರು 50 ವರ್ಷಗಳಿಂದ ಸಕ್ರಿಯವಾಗಿದ್ದ ಪ್ರಶಾಂತ್ ಬೋಸ್ ಜೊತೆಗೆ ಅವರ ಪತ್ನಿ ಶೀಲಾ ಮರಾಂಡಿಯನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರವೇ ಇಬ್ಬರನ್ನು ಬಂಧಿಸಿದ್ದರೂ ಇಬ್ಬರ ಪತ್ತೆಯನ್ನು ದೃಢೀಕರಿಸಿಕೊಂಡ ನಂತರ ಇದೀಗ ಇಬ್ಬರ ಬಂಧನವನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಕೋಲ್ಕತ್ತಾದ ಜಾದವ್ಪುರ ಮೂಲದ ಮಾವೋವಾದಿ ನಾಯಕ ಕಿಶನ್ ದಾಸ್ ಗೆ 75 ವರ್ಷ ವಯಸ್ಸಾಗಿದೆ ಎಂದು ಹೇಳಲಾಗುತ್ತಿದೆ. ಕಿಶನ್ ದಾ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜಾರ್ಖಂಡ್ನಲ್ಲಿ ಕಿಶನ್ ದಾ ವಿರುದ್ಧ 70ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಕಿಶನ್ ದಾ ಅವರು ಮಾವೋವಾದಿಗಳ ಪೂರ್ವ ಪ್ರಾದೇಶಿಕ ಬ್ಯೂರೋದ ಕಾರ್ಯದರ್ಶಿಯಾಗಿದ್ದಾರೆ. ಕಿಶನ್ ದಾ ಬಂಗಾಳ, ಒಡಿಶಾ, ಛತ್ತೀಸ್ಗಢ, ಅಸ್ಸಾಂ ಮತ್ತು ಇತರ ರಾಜ್ಯಗಳಲ್ಲಿ ದೀರ್ಘಕಾಲ ಸಕ್ರಿಯರಾಗಿದ್ದರು. ಕಿಶನ್ ದಾ ವಿರುದ್ಧ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ.