ಸಿಬಿಐ, ಇಡಿ ನಿರ್ದೇಶಕರ ಸೇವಾವಧಿ ವಿಸ್ತರಣೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಟಿಎಂಸಿ ಸಂಸದ ಡೆರೆಕ್ ಒ'ಬ್ರಿಯಾನ್ ಮಧ್ಯೆ ಟ್ವೀಟ್ ವಾರ್!

ವಿಧೇಯಕಗಳ ಸುಗ್ರೀವಾಜ್ಞೆಗಳನ್ನು ಸರ್ಕಾರ ಪದೇ ಪದೇ ಬಳಸುವ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮತ್ತು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರಿಯಾನ್ ಮಧ್ಯೆ ವಾಕ್ಸಮರ, ಟ್ವೀಟ್ ವಾರ್ ಗೆ ವೇದಿಕೆಯಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಸಂಸದ ಡೆರೆಕ್ ಒ'ಬ್ರಿಯಾನ್
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಸಂಸದ ಡೆರೆಕ್ ಒ'ಬ್ರಿಯಾನ್
Updated on

ನವದೆಹಲಿ: ವಿಧೇಯಕಗಳ ಸುಗ್ರೀವಾಜ್ಞೆಗಳನ್ನು ಸರ್ಕಾರ ಪದೇ ಪದೇ ಬಳಸುವ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮತ್ತು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರಿಯಾನ್ ಮಧ್ಯೆ ವಾಕ್ಸಮರ, ಟ್ವೀಟ್ ವಾರ್ ಗೆ ವೇದಿಕೆಯಾಗಿದೆ. ಸಂಸತ್ತನ್ನು ಅಣಕಿಸುವ ರೀತಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಧೇಯಕಗಳಿಗೆ ಸುಗ್ರೀವಾಜ್ಞೆ ಹೊರಡಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ.

ನಿನ್ನೆ ರಾತ್ರಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿಯವರು ಮಾಡಿದ್ದ ಸರಣಿ ಟ್ವೀಟ್ ಗಳಿಗೆ ಸಂಸದ ಡೆರೆಕ್ ಒ'ಬ್ರಿಯಾನ್ ಕಟು ಟೀಕೆ ಮಾಡಿ ಪ್ರತ್ಯುತ್ತರ ನೀಡಿದ್ದಾರೆ. ಇದಕ್ಕೂ ಮುನ್ನ ಟಿಎಂಸಿ ರಾಜ್ಯಸಭಾ ಸದಸ್ಯರು ಕೇಂದ್ರ ಸರ್ಕಾರ ಇಡಿ ಮತ್ತು ಸಿಬಿಐ ನಿರ್ದೇಶಕರ ಸೇವಾವಧಿ ವಿಸ್ತರಿಸಿ ಸುಗ್ರೀವಾಜ್ಞೆ ಹೊರಡಿಸಿದ್ದ ಬಗ್ಗೆ ಟ್ವೀಟ್ ಮೂಲಕ ಟೀಕೆ ಮಾಡಿದ್ದರು.

17ನೇ ಲೋಕಸಭೆಯಲ್ಲಿ ಪ್ರತಿ 10 ಮಸೂದೆಗಳಿಗೆ ನಾಲ್ಕು ವಿಧೇಯಕಗಳನ್ನು ಕೇಂದ್ರ ಸರ್ಕಾರ ತಂದಿದ್ದು 2014ರಿಂದ ಸುಗ್ರೀವಾಜ್ಞೆಯನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಸಂಸದ ಡೆರೆಕ್ ಒ'ಬ್ರಿಯಾನ್ ಆರೋಪಿಸುತ್ತಾರೆ.

ಅದಕ್ಕೆ ಟ್ವೀಟ್ ಮೂಲಕ ತಿರುಗೇಟು ನೀಡಿದ ಸಚಿವ ಪ್ರಹ್ಲಾದ್ ಜೋಷಿ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಧೇಯಕಗಳನ್ನು ಹೇಗೆ ಬಳಸಿಕೊಂಡಿತ್ತು ಎಂದು ತೋರಿಸಿದರು. ಹಿಂದೆ ಕಾಂಗ್ರೆಸ್ ಆಡಳಿತದ ಸರ್ಕಾರದ ಅವಧಿಯಲ್ಲಿ ಒಟ್ಟು 524 ವಿಧೇಯಕಗಳನ್ನು ಹೊರಡಿಸಲಾಗಿತ್ತು. 5ನೇ ಲೋಕಸಭಾ ಅವಧಿಯೊಂದರಲ್ಲಿಯೇ 96 ವಿಧೇಯಕಗಳನ್ನು ಹೊರಡಿಸಲಾಗಿತ್ತು. ಹಾಗಾದರೆ ಈ ಸಂಖ್ಯೆಗೆ ಏನು ಹೇಳುತ್ತೀರಿ ಡೆರೆಕ್ ಒ'ಬ್ರಿಯಾನ್ ಅವರೇ ಎಂದು ಪ್ರಹ್ಲಾದ್ ಜೋಷಿ ಕೇಳಿದ್ದರು.

ವಿಧೇಯಕಗಳು ಪ್ರಜಾಪ್ರಭುತ್ವದ ಭಾಗವಾಗಿದೆ. ಟಿಎಂಸಿ ಇದನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸುವುದಿಲ್ಲ ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಇತರ ಪಕ್ಷಗಳ ಪ್ರಜಾಪ್ರಭುತ್ವ ಹಕ್ಕುಗಳಿಗೆ ಏನಾಗುತ್ತಿದೆ ಎಂದು ನೋಡುತ್ತಿದ್ದೇವೆ. ನಾವು ಗೌರವಾನ್ವಿತ ಹೈಕೋರ್ಟ್‌ನ ಅವಲೋಕನವನ್ನು ನೋಡಿದ್ದೇವೆ, ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಎಷ್ಟು ಅಧಿವೇಶನಗಳನ್ನು ನಡೆಸಲಾಗಿದೆ ಎಂದು ಸಹ ನೋಡಿದ್ದೇವೆ.

ಅಲ್ಲದೆ, ಓಬ್ರಿಯಾನ್ ಅವರು ತಮ್ಮ ಸ್ವಂತ ಟಿಎಂಸಿ ಪಕ್ಷದಿಂದ ಬೆಂಬಲಿತವಾದ ಕಾಂಗ್ರೆಸ್ ಪಕ್ಷವು ಅತ್ಯಂತ ಪ್ರಜಾಪ್ರಭುತ್ವವಲ್ಲದ ಪಕ್ಷ ಎಂದು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿದಿಲ್ಲ. ರಾಜ್ಯ ಸರ್ಕಾರಗಳನ್ನು 93 ಬಾರಿ ವಜಾಗೊಳಿಸಲು ಕಾಂಗ್ರೆಸ್ 356 ವಿಧಿಯನ್ನು ಬಳಸಿದೆ ಎಂಬುದು ಟಿಎಂಸಿ ಸಂಸದರಿಗೆ ನೆನಪಿಲ್ಲವೇ ಎಂದು ಸಚಿವ ಜೋಷಿ ಕೇಳಿದ್ದಾರೆ.

ಅದಕ್ಕೆ ಉತ್ತರಿಸಿರುವ ಸಂಸದ ಡೆರೆಕ್ ಒ'ಬ್ರಿಯಾನ್ ಅಂಕಿಅಂಶಗಳನ್ನು ಮುಂದಿಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com