ದೀರ್ಘಾವಧಿಯ ಮಾರ್ಗದ ರೈಲು ಪ್ರಯಾಣಿಕರಿಗೆ ಬೇಯಿಸಿದ ಆಹಾರ ಸೇವೆ ನೀಡಲು ರೈಲ್ವೆ ಸಚಿವಾಲಯ ನಿರ್ಧಾರ: ಐಆರ್ ಸಿಟಿಸಿಗೆ ಆದೇಶ

ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ದೀರ್ಘಾವಧಿಯ ನಂತರ ರೈಲ್ವೆ ಸೇವೆಗಳು ಸಹಜ ಸ್ಥಿತಿಗೆ ಬರುತ್ತಿದೆ. ಹೀಗಿರುವಾಗ ದೀರ್ಘಾವಧಿಯ ಪ್ರಯಾಣದ ರೈಲುಗಳಲ್ಲಿ ಅಡುಗೆ ಮಾಡಿದ ಆಹಾರ ಸೇವೆಗಳನ್ನು ಕ್ಯಾಟರಿಂಗ್ ಸೇವೆಯಡಿ ಪ್ರಯಾಣಿಕರಿಗೆ ಒದಗಿಸಲು ನಿರ್ಧರಿಸಿದೆ.
ಐಆರ್ ಸಿಟಿಸಿಯಿಂದ ಹೊಸದಾಗಿ ಪ್ರಾರಂಭಿಸಲಾದ ಲಕ್ನೋ-ದೆಹಲಿ ತೇಜಸ್ ಎಕ್ಸ್‌ಪ್ರೆಸ್ ಭಾರತದ ಮೊದಲ 'ಖಾಸಗಿ' ರೈಲಿನ ಕೋಚ್‌ನ ಒಳ ನೋಟ
ಐಆರ್ ಸಿಟಿಸಿಯಿಂದ ಹೊಸದಾಗಿ ಪ್ರಾರಂಭಿಸಲಾದ ಲಕ್ನೋ-ದೆಹಲಿ ತೇಜಸ್ ಎಕ್ಸ್‌ಪ್ರೆಸ್ ಭಾರತದ ಮೊದಲ 'ಖಾಸಗಿ' ರೈಲಿನ ಕೋಚ್‌ನ ಒಳ ನೋಟ

ನವದೆಹಲಿ: ಕೋವಿಡ್-19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ದೀರ್ಘಾವಧಿಯ ನಂತರ ರೈಲ್ವೆ ಸೇವೆಗಳು ಸಹಜ ಸ್ಥಿತಿಗೆ ಬರುತ್ತಿದೆ. ಹೀಗಿರುವಾಗ ದೀರ್ಘಾವಧಿಯ ಪ್ರಯಾಣದ ರೈಲುಗಳಲ್ಲಿ ಅಡುಗೆ ಮಾಡಿದ ಆಹಾರ ಸೇವೆಗಳನ್ನು ಕ್ಯಾಟರಿಂಗ್ ಸೇವೆಯಡಿ ಪ್ರಯಾಣಿಕರಿಗೆ ಒದಗಿಸಲು ನಿರ್ಧರಿಸಿದೆ.

1700ಕ್ಕೂ ಹೆಚ್ಚು ರೈಲುಗಳಿಂದ ವಿಶೇಷ ಟ್ಯಾಗ್‌ಗಳನ್ನು ತೆಗೆದುಹಾಕಿದ ಕೆಲವು ದಿನಗಳ ನಂತರ, ರೈಲ್ವೇ ಸಚಿವಾಲಯವು ನಿನ್ನೆ ದೆಹಲಿಯ ಐಆರ್ ಸಿಟಿಸಿಯ ಸಿಎಂಡಿಗೆ ರೈಲುಗಳಲ್ಲಿ ಅಡುಗೆ ಸೇವೆಗಳ ಅಡಿಯಲ್ಲಿ ಬೇಯಿಸಿದ ಆಹಾರವನ್ನು ಪುನರಾರಂಭಿಸುವಂತೆ ನಿರ್ದೇಶನ ನೀಡಿದೆ.

ಕಳೆದ ವರ್ಷ 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ಬಂದ ನಂತರ ರೈಲುಗಳಲ್ಲಿ ಬೇಯಿಸಿದ ಆಹಾರಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ನಂತರ ಇತ್ತೀಚೆಗೆ ರೈಲು ಸೇವೆ ಪುನರಾರಂಭಿಸಿದ ನಂತರ ಮತ್ತೆ ಬೇಯಿಸಿದ ಆಹಾರಗಳನ್ನು ಒದಗಿಸುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದರು.

ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ರೈಲ್ವೆ ಸಚಿವಾಲಯ ಐಆರ್ ಸಿಟಿಸಿಗೆ ಆದೇಶ ನೀಡಿ ಬೇಯಿಸಿದ ಆಹಾರವನ್ನು ರೈಲುಗಳಲ್ಲಿ ತಯಾರಿಸಿ ನೀಡುವಂತೆ ಸೂಚಿಸಿದೆ. ರೈಲು ಸೇವೆಗಳ ಸಾಮಾನ್ಯತೆಯ ದೃಷ್ಟಿಯಿಂದ, ಪ್ರಯಾಣಿಸುವ ಪ್ರಯಾಣಿಕರ ಅಗತ್ಯತೆ ಮತ್ತು ದೇಶಾದ್ಯಂತ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಇತರ ಸ್ಥಳಗಳಲ್ಲಿ ಕೋವಿಡ್-19 ಲಾಕ್‌ಡೌನ್‌ನಲ್ಲಿ ವಿಶ್ರಾಂತಿಗಳನ್ನು ಒದಗಿಸಲಾಗಿದೆ. ರೈಲುಗಳಲ್ಲಿ ಬೇಯಿಸಿದ ಆಹಾರಗಳ ಸೇವೆಗಳನ್ನು ಪುನರಾರಂಭಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ಎಂದು ಇಲಾಖೆಯ ಪತ್ರದಲ್ಲಿ ಹೇಳಿದೆ.

ಅಂದಾಜಿನ ಪ್ರಕಾರ, ಬೇಯಿಸಿದ ಆಹಾರ ಸೇವೆಗಳನ್ನು ದೀರ್ಘ ಮಾರ್ಗಗಳ 350 ಕ್ಕೂ ಹೆಚ್ಚು ರೈಲುಗಳಲ್ಲಿ ಪ್ರಾರಂಭಿಸಲಾಗುವುದು. ರೈಲ್ವೆಯು ಶೀಘ್ರದಲ್ಲೇ ರಾಜಧಾನಿ ಮತ್ತು ಇತರ ಮಾರ್ಗಗಳು ಒಳಗೊಂಡಂತೆ ಆಯ್ದ ಪ್ರೀಮಿಯರ್ ರೈಲುಗಳಲ್ಲಿ ಬೆಡ್ ರೋಲ್ ಸೇವೆಗಳನ್ನು ಪುನರಾರಂಭಿಸಬಹುದು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com