ರಾಜಸ್ಥಾನ ಸಂಪುಟ ಕಸರತ್ತು: ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ತನ್ನ ವಿಸ್ತರಿತ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಗೃಹ ಮತ್ತು ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
Published: 22nd November 2021 07:35 PM | Last Updated: 22nd November 2021 07:35 PM | A+A A-

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್
ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ತನ್ನ ವಿಸ್ತರಿತ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಗೃಹ ಮತ್ತು ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ನೂತನ ಸಂಪುಟದಲ್ಲಿ 12 ಹೊಸ ಸಚಿವರು ಸೇರ್ಪಡೆಯಾಗಿದ್ದು, ಮೂವರು ರಾಜ್ಯ ಸಚಿವರಿಗೆ ಸಂಪುಟ ದರ್ಜೆಗೆ ಬಡ್ತಿ ನೀಡಲಾಗಿದೆ. ಭಾನುವಾರ 15 ಸಚಿವರು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಕಳೆದ ವರ್ಷ ಬಂಡಾಯವೆದ್ದು ಸರ್ಕಾರವನ್ನು ಅಲುಗಾಡಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಪ್ರಮುಖ ಬೇಡಿಕೆಯನ್ನು ಈಡೇರಿಸಲಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಣಕಾಸು, ಗೃಹ ಖಾತೆ ಜೊತೆಗೆ ತೆರಿಗೆ, ಮಾಹಿತಿ ಮತ್ತು ಸಾರ್ವಜನಿಕ ಸಂಬಂಧ, ಐಟಿ ಮತ್ತು ಸಂವಹನ, ಎನ್ ಆರ್ ಐ , ರಾಜಸ್ಥಾನ ರಾಜ್ಯ ವಿಚಾರಣಾ ಬ್ಯೂರೊ ಮತ್ತಿತರ ಖಾತೆಗಳನ್ನು ಇಟ್ಟುಕೊಂಡಿದ್ದಾರೆ.
ವಿಸ್ತರಣೆಯಿಂದಾಗಿ 19 ಸಂಪುಟ ಸಚಿವರು, 10 ರಾಜ್ಯ ಸಚಿವರು ಸಂಪುಟದಲ್ಲಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಗರಿಷ್ಠ 30 ಸಚಿವರನ್ನು ರಾಜಸ್ಥಾನ ಸಂಪುಟ ಹೊಂದಬಹುದಾಗಿದೆ.