ಮೌಖಿಕ ಲೈಂಗಿಕತೆ ಗಂಭೀರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ: ಅಲಹಾಬಾದ್ ಹೈಕೋರ್ಟ್

10 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಮೌಖಿಕ ಲೈಂಗಿಕತೆ  ನಡೆಸಿದ ಸೋನು ಕುಶ್ವಾಹಾ ಎಂಬ ಅಪರಾಧಿಗೆ ವಿಶೇಷ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ದಂಡವನ್ನು ಅಲಹಾಬಾದ್ ಹೈಕೋರ್ಟ್ ಕಡಿಮೆ ಮಾಡಿದೆ.
ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್

ಅಲಹಾಬಾದ್:  10 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಮೌಖಿಕ ಲೈಂಗಿಕತೆ  ನಡೆಸಿದ ಸೋನು ಕುಶ್ವಾಹಾ ಎಂಬ ಅಪರಾಧಿಗೆ ವಿಶೇಷ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ದಂಡವನ್ನು ಅಲಹಾಬಾದ್ ಹೈಕೋರ್ಟ್ ಕಡಿಮೆ ಮಾಡಿದೆ. ಸೋನು ಕುಶ್ವಾಹ ಮಾಡಿದ ಅಪರಾಧ ಗಂಭೀರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ  ಅನಿಲ್ ಕುಮಾರ್ ಓಜಾ ನೇತೃತ್ವದ ನ್ಯಾಯಪೀಠ, ಆರೋಪಿಗೆ ನೀಡಿದ್ದ ಶಿಕ್ಷೆಯನ್ನು 10 ವರ್ಷದಿಂದ 7 ವರ್ಷಗಳಿಗೆ ಇಳಿಸಿದರು.

ಮೌಖಿಕ ಲೈಂಗಿಕತೆ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ (ಪೋಕ್ಸೊ ಕಾಯ್ದೆ) ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಾರ್ಹವಾಗಿದ್ದರೂ ಇದು ಪೊಕ್ಸೋ ಕಾಯ್ದೆಯ ಸೆಕ್ಷನ್ 6 ಮತ್ತು 10ರ ಅಡಿಯಲ್ಲಿ ಬರುವ ಉದ್ರಿಕ್ತ ಲೈಂಗಿಕ ದೌರ್ಜನ್ಯ ಎಂದು ಅಲಹಾಬಾದ್ ಹೈಕೋರ್ಟ್ ಶನಿವಾರ ಹೇಳಿತು. 

ಸೆಕ್ಷನ್​ 377 (ಅಸ್ವಾಭಾವಿಕ ಲೈಂಗಿಕ ಕ್ರಿಯೆ), 506 (ಕ್ರಿಮಿನಲ್ ಬೆದರಿಕೆ) ಹಾಗೂ ಪೋಸ್ಕೋ ಕಾಯ್ದೆ ಸೆಕ್ಷನ್​ 6ರ ಅಡಿಯಲ್ಲಿ ಈ ಹಿಂದೆ ಝಾನ್ಸಿಯ ವಿಶೇಷ ಸೆಶನ್ಸ್  ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಸೋನು ಕಶ್ವಾಹ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಿಲ್​ ಕುಮಾರ್​ ಓಜಾ ನೇತೃತ್ವದ ಏಕ ಸದಸ್ಯ ನ್ಯಾಯಪೀಠ ನಡೆಸಿತು.

ಆರೋಪಿ ಸಂತ್ರಸ್ತೆಯ ಬಾಯಿಯೊಳಗೆ ಶಿಶ್ನ ಹಾಕಿ, ವೀರ್ಯವನ್ನು ಹೊರಹಾಕುವುದು ಪೋಕ್ಸೋ ಕಾಯ್ದೆಯ ಸೆಕ್ಷನ್ 5/6 ಅಥವಾ ಸೆಕ್ಷನ್ 9/10  ವ್ಯಾಪ್ತಿಗೆ ಬರುತ್ತದೆಯೇ ಎಂದು ನ್ಯಾಯಾಲಯ ಪರಿಶೀಲಿಸಿದ್ದು, ಇದು ಎರಡು ಸೆಕ್ಷನ್‌ಗಳ ವ್ಯಾಪ್ತಿಗೆ ಬರುವುದಿಲ್ಲ.  ಆದರೆ ಇದು ಪೋಕ್ಸೊ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದು ಹೇಳಿದೆ.

ಸೆಕ್ಷನ್ 4ರ ಅಡಿಯಲ್ಲಿ ಬರುವ ಲೈಂಗಿಕ ಕಿರುಕುಳ, ಸೆಕ್ಷನ್ 6 ರ ಅಡಿಯಲ್ಲಿ ಬರುವ ಆಕ್ರಮಣಕಾರಿ ಲೈಂಗಿಕ ಕಿರುಕುಳಕ್ಕಿತ ಕಡಿಮೆ ಅಪರಾಧವಾಗಿದ್ದು, ಆರೋಪಿಗೆ ನೀಡಿದ್ದ ಶಿಕ್ಷೆಯ ಅವಧಿಯನ್ನು 10 ವರ್ಷದಿಂದ ಏಳು ವರ್ಷಕ್ಕೆ ಇಳಿಸಿದೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ. ಝಾನ್ಸಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ 10 ವರ್ಷ ಜೈಲು ಶಿಕ್ಷೆ ತೀರ್ಪು ವಿರೋಧಿಸಿ ಸೋನು ಕಶ್ವಾಹ ಹೈಕೋರ್ಟ್ ಮೆಟ್ಟಿಲೇರಿದ್ದ. ಸಂತ್ರಸ್ತ ಬಾಲಕಿಗೆ 20 ರೂ. ನೀಡುವುದಾಗಿ ಹೇಳುವ ಮೂಲಕ  ಕಶ್ವಾಹ ಮೌಖಿಕ ಲೈಂಗಿಕತೆ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com