'ಎಂಎಸ್‌ಪಿ ಕಾನೂನು ತರಲು ಸರ್ಕಾರಕ್ಕೆ ಸಾಧ್ಯವಿಲ್ಲ'; ಪ್ರಧಾನಿ ಮೋದಿ- ಖಟ್ಟರ್ ಚರ್ಚೆ ವೇಳೆ ಬಹಿರಂಗ

ಕೃಷಿ ಕಾನೂನು ಹಿಂಪಡೆಯುವ ಘೋಷಣೆ ಬಳಿಕ ಎಂಎಸ್ ಪಿ ಕಾನೂನು ಜಾರಿಗೆ ರೈತರು ಆಗ್ರಹಿಸುತ್ತಿದ್ದಾರೆ. ಆದ್ರೆ, ರೈತರ ಬೆಳೆಗಳಿಗ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಲು ಸರ್ಕಾರಕ್ಕೆ ಸಾಧ್ಯವಿಲ್ಲ ಅನ್ನೋ ವಿಚಾರ ಬಹಿರಂಗವಾಗಿದೆ.
ಪ್ರಧಾನಿ ಮೋದಿ-ಮನೋಹರ್ ಲಾಲ್ ಖಟ್ಟರ್ ಸಭೆ
ಪ್ರಧಾನಿ ಮೋದಿ-ಮನೋಹರ್ ಲಾಲ್ ಖಟ್ಟರ್ ಸಭೆ

ನವದೆಹಲಿ: ಕೃಷಿ ಕಾನೂನು ಹಿಂಪಡೆಯುವ ಘೋಷಣೆ ಬಳಿಕ ಎಂಎಸ್ ಪಿ ಕಾನೂನು ಜಾರಿಗೆ ರೈತರು ಆಗ್ರಹಿಸುತ್ತಿದ್ದಾರೆ. ಆದ್ರೆ, ರೈತರ ಬೆಳೆಗಳಿಗ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೆ ತರಲು ಸರ್ಕಾರಕ್ಕೆ ಸಾಧ್ಯವಿಲ್ಲ ಅನ್ನೋ ವಿಚಾರ ಬಹಿರಂಗವಾಗಿದೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದರು. ನಿನ್ನೆಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮೂರು ಕೃಷಿ ಕಾನೂನು ಕುರಿತು ಉಭಯ ಚರ್ಚೆ ನಡೆಸಿದ್ದೇವೆ. ಕೃಷಿ ಕಾನೂನುಗಳನ್ನು ಹಿಂತೆಗೆಳ್ಳುವ ನಿರ್ಧಾರದಿಂದಾಗಿ ಉತ್ತಮ ಸಂದೇಶ ರವಾನೆಯಾಗಿದೆ. ಆದರೆ ಎಲ್ಲ ಬೆಳೆಗಳಿಗ ಎಂಎಸ್ ಪಿ ಖಾತರಿಪಡಿಸುವ ಕಾನೂನು ತರಲು ಸಾಧ್ಯವಿಲ್ಲ ಅನ್ನೋ ವಿಚಾರವನ್ನು ಸಿಎಂ ಖಟ್ಟರ್ ತಿಳಿಸಿದರು. 

ಸರ್ಕಾರ ಎಂಎಸ್ ಪಿ ಕಾನೂನನ್ನು ತಂದರೆ, ಸಾಧ್ಯವಾಗದ ಎಲ್ಲ ಬೆಳೆಗಳನ್ನು ಖರೀದಿಸಲು ಒತ್ತಡ ಹೇರಲಾಗುತ್ತದೆ ಅನ್ನೋದನ್ನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರೈತರು ವಾಪಸ್ ಮನೆಗೆ ಹೋಗಬೇಕೆನ್ನುವುದು ಪ್ರಧಾನಿಯವರ ಚಿಂತನೆಯಾಗಿದೆ. ಆದಾಗ್ಯೂ ಬೆಳೆಗಳಿಗೆ ಎಂಎಸ್ ಪಿ ಸೇರಿದಂತೆ ಹಲವು ಬೇಡಿಕೆಗಳು ಬಾಕಿ ಉಳಿದಿವೆ ಅಂತಾ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದರು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಗೆ ಕಾನೂನು ಅಸಂಭವ: ಹರ್ಯಾಣ ಸಿಎಂ ಖಟ್ಟರ್
ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರಕಾರ ರದ್ದುಗೊಳಿಸುವುದಾಗಿ ಘೋಷಿಸಿರುವ ಮೂರು ಕೃಷಿ ಕಾನೂನುಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.

ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ಉತ್ತಮ ಸಂದೇಶವನ್ನು ನೀಡಿದ್ದರೂ, ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಖಾತರಿಪಡಿಸುವ ಕಾನೂನು ತರಲು ಸರಕಾರಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಖಟ್ಟರ್ ಹೇಳಿದರು. 'ಸರ್ಕಾರವು ಎಂಎಸ್‌ಪಿ ಕಾನೂನನ್ನು ತಂದರೆ ಎಲ್ಲಾ ಬೆಳೆಗಳನ್ನು ಖರೀದಿಸುವ ಒತ್ತಡಕ್ಕೆ ಸಿಲುಕುತ್ತದೆ. ಅದು ಸಾಧ್ಯವಿಲ್ಲ. ಹರ್ಯಾಣದಲ್ಲಿಯೇ ಒಂದು ಡಝನ್ ಬೆಳೆಗಳನ್ನು ಎಂಎಸ್‌ಪಿ ದರದಲ್ಲಿ ಖರೀದಿಸಲಾಗುತ್ತದೆ ಎಂದು ಖಟ್ಟರ್ ಹೇಳಿದರು.

ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯ ನೇತೃತ್ವವಹಿಸಿರುವ ರೈತ ಸಂಘಗಳು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಅನುಮೋದಿಸಿವೆ. ಆದಾಗ್ಯೂ, ಬೆಳೆಗಳಿಗೆ ಎಂಎಸ್‌ಪಿ ಖಾತ್ರಿಗೆ ಕಾನೂನು ಸೇರಿದಂತೆ ಹಲವು ಬೇಡಿಕೆಗಳು ಬಾಕಿ ಉಳಿದಿವೆ ಎಂದು ಅವುಗಳು ಪ್ರತಿಪಾದಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com