ಮಸೀದಿಯಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆಗೆ ಘೋಷಣೆ: ಮಥುರಾನಲ್ಲಿ ಸೆಕ್ಷನ್ 144 ಜಾರಿ
ಮಸೀದಿ ಎಂದು ಹೇಳಲಾಗುವ, ಆದರೆ ನೈಜ ಕೃಷ್ಣನ ಜನ್ಮಸ್ಥಾನವಾಗಿರುವ ಪ್ರದೇಶದಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿಕೆಯ ಬೆನ್ನಲ್ಲೇ ಮಥುರಾದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
Published: 29th November 2021 08:12 AM | Last Updated: 29th November 2021 08:12 AM | A+A A-

ಭಗವಾನ್ ಶ್ರೀಕೃಷ್ಣನ ವಿಗ್ರಹ
ಮಥುರ: ಮಸೀದಿ ಎಂದು ಹೇಳಲಾಗುವ, ಆದರೆ ನೈಜ ಕೃಷ್ಣನ ಜನ್ಮಸ್ಥಾನವಾಗಿರುವ ಪ್ರದೇಶದಲ್ಲಿ ಭಗವಾನ್ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಹೇಳಿಕೆಯ ಬೆನ್ನಲ್ಲೇ ಮಥುರಾದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ದೇವಾಲಯದ ಹತ್ತಿರವೇ ಮಸೀದಿ ಇದ್ದು, ಹಿಂದೂ ಮಹಾಸಭಾದೊಂದಿಗೆ ಮತ್ತೊಂದು ಸಂಘಟನೆಯಾದ ನರಾಯಣಿ ಸೇನಾ, ಮಸೀದಿಯ ತೆರವಿಗೆ ಆಗ್ರಹಿಸಿ ವಿಶ್ರಮ್ ಘಾಟ್ ನಿಂದ ಕೃಷ್ಣ ಜನ್ಮಸ್ಥಾನದವರೆಗೆ ಜಾಥ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದು, ಯಾರಿಗೂ ಶಾಂತಿ ಕದಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಸಿಂಗ್ ಚಹಾಲ್ ತಿಳಿಸಿದ್ದಾರೆ.
ಸೆಕ್ಷನ್ 144 ಸಿಆರ್ ಪಿಸಿ ಜಾರಿಯಾದಲ್ಲಿ ಆ ಪ್ರದೇಶದ ಸುತ್ತ ಮುತ್ತ ನಾಲ್ಕು ಮಂದಿಗಿಂತಲೂ ಹೆಚ್ಚಿನ ಜನರು ಸೇರುವುದನ್ನು ನಿರ್ಬಂಧಿಸಲಾಗುತ್ತದೆ. ನಾರಾಯಣಿ ಸೇನಾ ಕಾರ್ಯದರ್ಶಿ ಅಮಿತ್ ಮಿಶ್ರಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಧಾರ್ಮಿಕ ಪ್ರದೇಶಗಳಲ್ಲಿ ಎಸ್ ಪಿ ಭದ್ರತೆಯನ್ನು ಪರಿಶೀಲನೆ ನಡೆಸಿದ್ದಾರೆ. ಮಹಾಸಭಾದವರು ವಿಗ್ರಹ ಸ್ಥಾಪನೆ ಮಾಡುವುದಕ್ಕಾಗಿ ಮನವಿ ಸಲ್ಲಿಸಿತ್ತು. ಆದರೆ ಅನುಮತಿ ನಿರಾಕರಿಸಲಾಗಿದೆ ಎಂದು ಚಹಾಲ್ ಹೇಳಿದ್ದಾರೆ.