ಜನಸಾಮಾನ್ಯನಿಗೆ ಮತ್ತಷ್ಟು ಹೊರೆ: ಸಿಎನ್ ಜಿ, ಪಿಎನ್ ಜಿ ದರ ಏರಿಕೆ!

ನೈಸರ್ಗಿಕ ಅನಿಲಗಳ ಬೆಲೆಯ ಏರಿಕೆಯ ಪರಿಣಾಮವಾಗಿ ಸಿಎನ್ ಜಿ, ಪಿಎನ್ ಜಿ ದರ ಏರಿಕೆಯಾಗಿದ್ದು ಜನಸಾಮಾನ್ಯನಿಗೆ ಮತ್ತಷ್ಟು ಹೊರೆ ಉಂಟಾಗಲಿದೆ. 
ಸಿಎನ್ ಜಿ ದರ ಏರಿಕೆ (ಸಾಂಕೇತಿಕ ಚಿತ್ರ)
ಸಿಎನ್ ಜಿ ದರ ಏರಿಕೆ (ಸಾಂಕೇತಿಕ ಚಿತ್ರ)
Updated on

ನವದೆಹಲಿ: ನೈಸರ್ಗಿಕ ಅನಿಲಗಳ ಬೆಲೆಯ ಏರಿಕೆಯ ಪರಿಣಾಮವಾಗಿ ಸಿಎನ್ ಜಿ, ಪಿಎನ್ ಜಿ ದರ ಏರಿಕೆಯಾಗಿದ್ದು ಜನಸಾಮಾನ್ಯನಿಗೆ ಮತ್ತಷ್ಟು ಹೊರೆ ಉಂಟಾಗಲಿದೆ. 

ನವದೆಹಲಿಯಲ್ಲಿ ಪರಿಷ್ಕೃತ ದರ ಅ.2 ರಿಂದಲೇ ಜಾರಿಗೆ ಬರಲಿದ್ದು ಸಿಎನ್ ಜಿ ದರ ಪ್ರತಿ ಕೆ.ಜಿಗೆ 2.28 ರೂಪಾಯಿಗಳಾಗಿದ್ದರೆ ಪೈಪ್ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತಿರುವ ಅಡುಗೆ ಅನಿಲ ದರ 2.10 ರೂಪಾಯಿಗಳು ಏರಿಕೆ ಕಂಡಿವೆ.

ಕೇಂದ್ರ ಸರ್ಕಾರ ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲಗಳ ಬೆಲೆಯನ್ನು ಶೇ.62 ರಷ್ಟು ಏರಿಕೆ ಮಾಡಿದ್ದರ ಪರಿಣಾಮವಾಗಿ ಇನ್ ಪುಟ್ ಖರ್ಚುಗಳನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡುತ್ತಿರುವುದಾಗಿ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಇಂದು ಘೋಷಣೆ ಮಾಡಿದೆ. 

ದರ ಪರಿಷ್ಕರಣೆಯ ಪರಿಣಾಮವಾಗಿ ದೆಹಲಿಯಲ್ಲಿ ಪರಿಷ್ಕೃತ ದರ ಪ್ರತಿ ಕೆ.ಜಿ ಸಿಎನ್ ಜಿಗೆ 47.48 ರೂಪಾಯಿಗಳಾಗಲಿದ್ದು ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್ ನಲ್ಲಿ 53.45 ರೂಪಾಯಿಗಳಾಗಲಿದ್ದು ಅ.2 ರಂದು ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ.

ಪಿಎನ್ ಜಿ ದರವನ್ನು ಪ್ರತಿ ಕ್ಯುಬಿಕ್ ಮೀಟರ್ ಗೆ 2.10 ರೂಪಾಯಿಗಳಿಂದ ಪ್ರತಿ ಎಸ್ ಸಿಎಂಗೆ 33.01 ವರೆಗೂ ಏರಿಕೆ ಮಾಡಲಾಗಿದೆ.

ಸಿಎನ್ ಜಿ ದರ ಏರಿಕೆಯಿಂದಾಗಿ ಆಟೋ ಬಾಡಿಗೆ ದರವೂ ಏರಿಕೆಯಾಗಲಿದ್ದು ಪ್ರತಿ ಕಿ.ಮೀ ಗೆ 6 ಪೈಸೆ ಏರಿಕೆಯಾಗಲಿದ್ದರೆ ಟ್ಯಾಕ್ಸಿ ಗಳಿಗೆ 11 ಪೈಸೆ ಬಸ್ ಗಳಲ್ಲಿ ಪ್ರತಿ ಕಿ.ಮೀ ಗೆ 1.65 ಪೈಸೆ ಏರಿಕೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com